ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಾನೆತ್ತರದ 6 ಬಾರಿಸುತ್ತಲೇ ಬಾಲಿವುಡ್ ಡ್ಯಾಶಿಂಗ್ ಸ್ಟಾರ್ ರಣವೀರ್ ಸಿಂಗ್ ರಿಯಾಕ್ಷನ್ ನೋಡಿ ಈ ವಿಡಿಯೋದಲ್ಲಿ…

ಸತತವಾದ ಸೋಲಿಗೆ ಕಂಗಾಲಾದ ಮುಂಬಯಿ ತಂಡಕ್ಕೆ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಚಿಯರ್ಸ್ ಮಾಡಲು ಬಂದಿದ್ದರು. ಈ ಪಂದ್ಯದಲ್ಲಿ ಮುಂಬಯಿ ಕೊನೆಗೂ 5 ರನ್ ಗಳಿಂದ ಗುಜರಾತ್ ವಿರುದ್ಧ ಜಯ ಗಳಿಸಿತು. ಕಟ್ಟ ಕಡೆಯ ಓವರ್ ನಲ್ಲಿ ಮುಂಬಯಿ ತಂಡ ಸೋಲಬೇಕಾದ ಪಂದ್ಯವನ್ನು ಅಕ್ಷರಶಃ ಗುಜರಾತ್ ತಂಡದಿಂದ ಕಸಿದುಕೊಂಡಿತು. ಈ ಪಂದ್ಯದಲ್ಲಿ ಬಾಲಿವುಡ್ ಡ್ಯಾಶಿಂಗ್ ಹೀರೋ ರಣವೀರ್ ಮುಂಬಯಿ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದದ್ದು ಕಂಡು ಬಂತು.

ಈ ಪಂದ್ಯದಲ್ಲಿ ರೋಹಿತ್ ಚೆನ್ನಾಗಿಯೇ ಬ್ಯಾಟ್ ಮಾಡಿದ್ದಾರೆ, ಬರೀ ಏಳೇ ರನ್ ಗಳಿಂದ ಅರ್ಧ ಶತಕ ಗಳಿಸುವಲ್ಲಿ ವಂಚಿತರಾದರು. ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಬಾರಿಸಿದ ಬಾನೆತ್ತರದ ಸಿಕ್ಸ್ ಮಾತ್ರ ಭರ್ಜರಿಯಾಗಿತ್ತು. ಈ ಸಿಕ್ಸ್ ನೋಡಿ ಬಾಲಿವುಡ್ ನಟ ರಣವೀರ್ ಫುಲ್ ಫಿದಾ ಆಗಿದ್ದಾರೆ. ಮತ್ತು ಸಂತೋಷದಿಂದ ಚಿಯರ್ಸ್ ಮಾಡುತ್ತಿರುವದು ಕಂಡು ಬಂತು.

ರೋಹಿತ್ ಶರ್ಮಾ ಅವರು ಮತ್ತೆ ಉತ್ತಮ ಫಾರ್ಮ್ ನಲ್ಲಿ ಮರಳಿದ್ದು ರಣವೀರ್ ಅವರಿಗೆ ಖುಷಿ ತಂದಂತೆ ಕಾಣುತ್ತಿತ್ತು. ಸತತವಾದ ಸೋಲಿಗೆ ಕಂಗಾಲಾದ ಮುಂಬಯಿಗೆ ಜೀವ ತುಂಬುವ ಪ್ರಯತ್ನ ಇಲ್ಲಿ ರಣವೀರ್ ಮಾಡಿದ್ದಾರೆ ಎನ್ನಬಹುದು.

ವಿಡಿಯೋ ನೋಡಿ

ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಹಿಟ್ ಮ್ಯಾನ್ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.