ಹುಡುಗರ ಹುಡುಗಾಟಿಕೆಯಿಂದ ಗೂಡು ದ್ವಂಸ, ಸಂಗಾತಿಯೂ ಬಿಟ್ಟು ಹೋಯಿತು; ವಿರಹ ಸಹನೆಯಾಗದೆ ಪ್ರಾಣ ಬಿಟ್ಟ ಹಂಸ!
ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ. ಜಗತ್ತಿನಲ್ಲಿ ತಾಯಿಯ ತ್ಯಾಗವನ್ನು ಹಾಡಿ ಹರಸುವರು. ಇದರ ಉದಾಹರಣೆಯೊಂದು ಗ್ರೇಟರ ಮ್ಯಾಂಚೆಸ್ಟರ್ ದ ಬೋಸ್ಟನ್ ನಲ್ಲಿ ಕಂಡು ಬಂತು. ಇಲ್ಲಿಯ ಕೆಲವು ಹುಡುಗರ ಹುಡುಗಾಟಿಕೆಯಿಂದ ದುಃಖಿತವಾದ ಹಂಸವು ತನ್ನ ಗೂಡಿನಲ್ಲಿಯೇ ಪ್ರಾಣ ಬಿಟ್ಟಿದೆ. ಹಂಸವು ಇಲ್ಲಿ 6 ಮೊಟ್ಟೆಗಳನ್ನು ಇಟ್ಟಿತ್ತು. ಅವುಗಳ ಮೇಲೆ ಕೆಲವು ತುಂಟ ಹುಡುಗರ ಕಣ್ಣು ಬಿದ್ದವು. ಆಮೇಲೆ ಮೊಟ್ಟೆಗಳಿಗೆ ಆ ಹುಡುಗರು ಕಲ್ಲುಗಳನ್ನು ಹೊಡೆದು ಒಡೆದಿದ್ದಾರೆ. ಇದೇ ಕಾರಣದಿಂದ ಹಂಸವು ದುಃಖವನ್ನು ತಡೆದುಕೊಳ್ಳಲಾಗದೆ ತನ್ನ ಪ್ರಾಣವನ್ನು ಬಿಟ್ಟಿದೆ ಎಂದು ವರ್ತಿಸಲಾಗಿದೆ.
ಈ ಮನ ಕಲಕುವ ಘಟನೆಯನ್ನು ಫೇಸ್ಬುಕ್ ಯೂಜರ್ ನೊಬ್ಬ Michael James Mason ಶೇರ್ ಮಾಡಿದ್ದಾನೆ. ಇದರ ಜೊತೆಗೆ ಹಂಸ ಪಕ್ಷಿಯ ಕೆಲವು ಫೋಟೋಗಳನ್ನು ಸಹ ಶೇರ್ ಮಾಡಿದ್ದಾನೆ. ಫೋಟೋಗಳ ಜೊತೆಗೆ ಬರೆದಿದ್ದಾನೆ, ಹಂಸವು ಮ್ಯಾಂಚೆಸ್ಟರ್ ನದಿಯ ದಡದಲ್ಲಿ 6 ಮೊಟ್ಟೆಗಳನ್ನಿಟ್ಟಿತ್ತು. ಕೆಲವು ತುಂಟ ಹುಡುಗರ ಕಣ್ಣಿಗೆ ಮೊಟ್ಟೆಗಳು ಬಿದ್ದವು, ಆನಂತರ ಆ ಹುಡುಗರು ಆ ಮೊಟ್ಟೆಗಳಿಗೆ ಕಲ್ಲುಗಳನ್ನು ಹೊಡೆಯಲು ಪ್ರಾರಂಭಿಸಿದರು. ಈ ಕಾರಣದಿಂದ 6 ಮೊಟ್ಟೆಗಳಲ್ಲಿ 3 ಮೊಟ್ಟೆಗಳು ಒಡೆದದ್ದರಿಂದ ಹಂಸವು ದುಃಖದಲ್ಲಿ ಮುಳುಗಿತು.
ಇದಾದ ಸ್ವಲ್ಪ ಸಮಯದ ನಂತರ ಅಲ್ಲಿಗೆ ಕೆಲವು ನಾಯಿಗಳು ಮತ್ತು ಬಾತುಕೋಳಿಗಳು ಬಂದವು. ಅವು ಸಹ ಆ ಹಂಸಕ್ಕೆ ಕಷ್ಟವನ್ನು ಕೊಟ್ಟವು. ಇದರಿಂದ ಗೂಡಿನಲ್ಲಿದ್ದ ಅದರ ಮತ್ತೆರಡು ಮೊಟ್ಟೆಗಳು ನಾಶವಾದವು. ಇದೇ ಸಮಯದಲ್ಲಿ ಆ ಹಂಸ ಪಕ್ಷಿಯ ಜೊತೆಗಿದ್ದ ಸಂಗಾತಿ ಹಂಸವು ಸಹ ಅದಕ್ಕೆ ಬಿಟ್ಟು ಹಾರಿ ಹೋಯಿತು.

ಈ ಪೋಸ್ಟ್ ಗಳನ್ನು ಶೇರ್ ಮಾಡಿದ ಫೇಸ್ಬುಕ್ ಯೂಜರ್ ಹೇಳುತ್ತಾನೆ, ಈ ಘಟನೆಯ ನಂತರ ಕೆಲವು ದಿನಗಳ ವರೆಗೆ ನಾನು ಅದರ ಮೇಲೆ ಕಣ್ಣಿಟ್ಟಿದ್ದೆ. ಒಂದು ದಿನ ಅದು ತನ್ನ ಗೂಡಿನಲ್ಲಿ ತೀರಿಕೊಂಡಿತ್ತು. ಉಳಿದ ಒಂದು ಮೊಟ್ಟೆಯೂ ಕಾಣಿಸದ್ದಕ್ಕೆ ದುಃಖ ಪಟ್ಟಿರಬೇಕು. ಮತ್ತು ಆ ದುಃಖದಲ್ಲಿಯೇ ಹಂಸವು ಅದೇ ಗೂಡಿನಲ್ಲಿ ತೀರಿಹೋಯಿತು. ಈ ಘಟನೆಯ ಬಗ್ಗೆ ವೈಲ್ಡ್ ಲೈಫ್ ಆಕ್ಟಿವಿಸ್ಟ್ Sam Woodrow ಹೇಳುತ್ತಾರೆ, ಈ ಎಲ್ಲ ಘಟನೆಯನ್ನು ನೋಡಿದ ಮೇಲೆ ಹೇಳಲು ಏನೂ ಬಾಕಿ ಉಳಿದಿಲ್ಲ. ನಿಶ್ಚಿತವಾಗಿ ಹಂಸ ಪಕ್ಷಿಯ ಸಾ’ವು ದುಃಖದಿಂದಲೇ ಆಗಿದೆ, ಅದರ ಜೊತೆಗಿದ್ದ ಸಂಗಾತಿಯೂ ಸಹ ಬಿಟ್ಟು ಹೋಗಿರುವ ದುಃಖ ಅದಕ್ಕೆ ಸಹಿಸಿಕೊಳ್ಳಲಾಗಿಲಿಲ್ಲ.