ಹೆಲ್ಮೆಟ್ ಹಾಕಿಕೊಳ್ಳಿ ಎನ್ನುವದು ಯಾಕೆ? ಈ ವೈರಲ್ ವಿಡಿಯೋ ನೋಡಿದಾಗ ಗೊತ್ತಾಗುತ್ತದೆ…!
ಸರ್ಕಾರ ಮತ್ತು ಆರ್ ಟಿ ಓ ಆಫೀಸ್ ನವರು ಪದೇ ಪದೇ ವಾಹನ ಚಾಲಕರಿಗೆ ಹೆಲ್ಮೆಟ್ ಧರಿಸಿಕೊಳ್ಳಿ ಎಂದು ಹೇಳಿಯೇ ಹೇಳುತ್ತಾರೆ. ಆದರೂ ವಾಹನ ಚಾಲಕರು ಅದರ ಕಡೆಗೆ ಗಮನ ಹರಿಸದೆ ತಮ್ಮ ಮನಸ್ಸಿಗೆ ಬಂದ ಹಾಗೆ ವ್ಯವಹರಿಸುತ್ತಾರೆ. ಹೆಲ್ಮೆಟ್ ಧರಿಸುವ ಮಹತ್ವವನ್ನು ಹೇಳಿಕೊಡುವ ಅದ್ಭುತವಾದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡೋಣ ಬನ್ನಿ.
ಪ್ರಸ್ತುತ ವಿಡಿಯೋ ಬೇರೆ ದೇಶದಲ್ಲಿಯದಿದೆ ಎಂದು ತಿಳಿದು ಬರುತ್ತಿದೆ. ವಿಡಿಯೋದಲ್ಲಿ ಕಂಡು ಬರುವ ಹಾಗೆ ರಸ್ತೆಯ ಕಾರ್ನರ್ ಒಂದರಲ್ಲಿ ಹಟಾತ್ತನೆ ಬಸ್ ಬಂದಿದೆ. ಆಗ ಸರಿಯಾಗಿ ಅದೇ ಸಮಯಕ್ಕೆ ದ್ವಿಚಕ್ರ ವಾಹನ ಸವಾರನೊಬ್ಬ ಬಸ್ಸಿನ ಎದುರುಗಡೆಯಿಂದ ಬರುತ್ತಾನೆ. ದ್ವಿಚಕ್ರ ವಾಹನ ಸವಾರನು ಹಟಾತ್ ಬಂದ ಬಸ್ ನೋಡಿ ಬ್ಯಾಲೆನ್ಸ್ ಕಳೆದುಕೊಂಡು ನೇರ ಬಸ್ಸಿನ ಹಿಂದಿನ ಚಕ್ರದಲ್ಲಿ ತಲೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ಆತನ ತಲೆ ಬಸ್ಸಿನ ಚಕ್ರದ ಕೆಳಗಡೆ ಸಿಕ್ಕಿಬಿದ್ದ ನಂತರ ಬಸ್ಸಿನ ಚಕ್ರ ಹಾಗೆಯೇ ಚಲಿಸುತ್ತಾ ಆತನ ತಲೆಯ ಮೇಲೆ ಏರಿದೆ. ಹೀಗಾಗಿ ದ್ವಿಚಕ್ರ ವಾಹನ ಸವಾರನಿಗೆ ತಲೆಯ ಮುಖಾಂತರ ತಳ್ಳುತ್ತಾ ಮುಂದುಗಡೆ ತಂದಿದೆ. ಆ ಸಮಯದಲ್ಲಿ ದ್ವಿಚಕ್ರ ವಾಹನ ಚಾಲಕನ ತಲೆ ಬಸ್ಸಿನ ಚಕ್ರದ ಕೆಳಗೆ ಸಿಕ್ಕಿ ಬಿದ್ದಿತ್ತು. ಬಸ್ ಚಾಲಕ ಕೆಲವೇ ಕ್ಷಣಗಳಲ್ಲಿ ಬಸ್ ಹಿಂದೆ ತೆಗೆದುಕೊಂಡಾಗ ತಲೆ ಚಕ್ರದಿಂದ ಫ್ರೀ ಯಾಗಿದೆ. ಆಗ ವಾಹನ ಚಾಲಕ ತನ್ನಂತಾನೆ ಅಲ್ಲಿಯೇ ಬದಿಗೆ ಸರಿದು ಶಾಕ್ ಆಗಿ ಉರುಳಿದ್ದಾನೆ. ಈ ಘಟನೆಯನ್ನು ನೋಡಿದ ಅಲ್ಲಿದ್ದ ಕೆಲವರು ಒಮ್ಮೆಲೇ ಬಂದು ಆತನಿಗೆ ಸಾಂತ್ವನವನ್ನು ಹೇಳಿ ಅಲ್ಲಿಂದ ಎಬ್ಬಿಸಿದ್ದಾರೆ. ದ್ವಿಚಕ್ರ ವಾಹನ ಚಾಲಕ ನಂತರ ತಾನೇ ಸ್ವತಃ ನಡೆಯುತ್ತಾ ಬದಿಗೆ ಬಂದು ನೀರು ಕುಡಿದಿದ್ದಾನೆ. ಆಗ ಆತ ಯಾವುದೇ ದೊಡ್ಡ ಅಪಾಯವಾಗಿಲ್ಲವೆಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿತ್ತು.
ವಿಡಿಯೋ ನೋಡಿ
ಉತ್ತಮ ಗುಣಮಟ್ಟದ ಐ ಎಸ್ ಐ ಮಾರ್ಕ್ ಹೆಲ್ಮೆಟ್” ಜೀವರಕ್ಷಕ”
Good quality ISI MARK helmet saves life. pic.twitter.com/IUMyH7wE8u
— Dr.B.R. Ravikanthe Gowda IPS (@jointcptraffic) July 20, 2022
ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಎಲ್ಲ ಕಡೆಗೆ ಗಾಳಿಯಂತೆ ಹಬ್ಬುತ್ತಿದೆ. ಹಾಗೂ ಅದರ ಜೊತೆಗೆ ಹೆಲ್ಮೆಟ್ ಯಾಕೆ ಧರಿಸಬೇಕು ಎಂಬುದಕ್ಕೆ ಈ ವಿಡಿಯೋ ನೋಡಿ ಎನ್ನುತ್ತಿದ್ದಾರೆ ನೆಟ್ಟಿಗರು.