ಹೊಸ ನಟಿಯನ್ನು ಅಪ್ಪಿ ಹಿಡಿದು ಡಾನ್ಸ್ ಮಾಡಿದ ರಾಮ್ ಗೋಪಾಲ್ ವರ್ಮಾ: ಮಹಿಳಾ ಆಯೋಗಕ್ಕೆ ವೀಡಿಯೋ ಟ್ಯಾಗ್ ಮಾಡಿದ ಜನರು!

ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿಡಿಯೋವೊಂದು ವೈರಲ್ ಆಗಿದೆ, ಈ ವೈರಲ್ ವೀಡಿಯೋದಲ್ಲಿ ಅವರು ನವ ನಟಿಯಾದ ಇನಾಯ ಸುಲ್ತಾನ ಜೊತೆ ವಿಚಿತ್ರವಾಗಿ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಒಂದು ಕಾಲದಲ್ಲಿ ‘ಸತ್ಯ’ ಮತ್ತು ‘ಸರ್ಕಾರ್’ ನಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗಿಂತ ಅವರು ನೀಡುವ ವಿ ವಾ ದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮಾ ಅವರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ನವ ನಟಿಯಾದ ಇನಾಯ ಸುಲ್ತಾನಾ ಜೊತೆ ಚಿತ್ರ ವಿಚಿತ್ರವಾದ ನೃತ್ಯವನ್ನು ಮಾಡಿದ್ದಾರೆ. ಇದರಲ್ಲಿ, ಅವರು ಕೆಲವೊಮ್ಮೆ ಇನಾಯ ಸುಲ್ತಾನನನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳುವುದು, ಇನ್ನೂ ಕೆಲವೊಮ್ಮೆ ಆಕೆಯ ಕಾಲುಗಳ ಮೇಲೆ ಬೀಳುವುದು ಮತ್ತು ಕೆಲವೊಮ್ಮೆ ಆಕೆಯ ಸುತ್ತಲೂ ಸುತ್ತುವುದನ್ನು ನೋಡಬಹುದಾಗಿದೆ.

ಈ ವಿಡಿಯೋ ಇನಾಯ ಸುಲ್ತಾನಾ ಹುಟ್ಟುಹಬ್ಬದ ಪಾರ್ಟಿಯ ಸಂದರ್ಭದ್ದು ಎನ್ನಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೋವನ್ನು ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ ಕೂಡಾ ತಮ್ಮ ಪೋಸ್ಟ್ ನಲ್ಲಿ, “ಈ ವಿಡಿಯೋದಲ್ಲಿ ಕಾಣುವ ವ್ಯಕ್ತಿ ನಾನಲ್ಲ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ. ಅಲ್ಲದೆ, ಕೆಂಪು ಬಟ್ಟೆಯಲ್ಲಿ ಕಾಣುವ ಹುಡುಗಿ ಇನಾಯ ಸುಲ್ತಾನಾ ಅಲ್ಲ ಎಂದು ನಾನು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಮೇಲೆ ಆಣೆಯಿಟ್ಟು ಹೇಳುತ್ತೇನೆ” ಎಂದಿದ್ದಾರೆ. ಆದರೆ ಜನರು ಅವರ ಈ ಹಾಸ್ಯವನ್ನು ಮೆಚ್ಚಿಲ್ಲ ಬದಲಾಗಿ ಅವರು ರಾಷ್ಟ್ರೀಯ ಮಹಿಳಾ ಆಯೋಗವನ್ನು (NCW) ಈ ವೀಡಿಯೋ ಗೆ ಟ್ಯಾಗ್ ಮಾಡಿದ್ದಾರೆ.

ವೀಡಿಯೋದಲ್ಲಿ ಗಮನಿಸಿದಾಗ ಆ ಸಮಯದಲ್ಲಿ ರಾಮ್ ಗೋಪಾಲ್ ವರ್ಮಾ ಅಮಲಿನ ಸ್ಥಿತಿಯಲ್ಲಿರುವುದು ಕಾಣುತ್ತದೆ ಅಲ್ಲದೇ ಜನರು ಹೊಸದಾಗಿ ಸಿನಿಮಾ ರಂಗಕ್ಕೆ ಬಂದಿರುವ ಹುಡುಗಿಯ ಜೊತೆಗೆ ರಾಮ್ ಗೋಪಾಲ್ ವರ್ಮಾ ಅವರ ಇಂತಹ ವರ್ತನೆ ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅದೇ ಸಮಯದಲ್ಲಿ ಕೆಲವರು ಆ ಹುಡುಗಿ ಪಾಪಾ ನಿರ್ದೇಶಕರ ಈ ವರ್ತನೆಯನ್ನು ಬಲವಂತವಾಗಿ ಸಹಿಸಿಕೊಳ್ಳಬೇಕಾಗಿದೆ ಎಂದು ಮರುಕ ಪಟ್ಟಿದ್ದಾರೆ. ರಾಮ್ ಗೋಪಾಲ್ ವರ್ಮಾ ಇನಾಯ ಸುಲ್ತಾನರನ್ನು ಹಿಡಿದರುವ ರೀತಿ ಆಕ್ಷೇಪಾರ್ಹ ಎಂದು ಜನರು ಸಿಟ್ಟಾಗಿದ್ದಾರೆ. ಇನ್ನೂ ಅನೇಕರು ಇದನ್ನು ‘ಕಾಸ್ಟಿಂಗ್ ಕೌ ಚ್’ಗೆ ಲಿಂಕ್ ಮಾಡುತ್ತಾ, ನಿಂದನೆ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಕಳೆದ ಕೆಲವು ವರ್ಷಗಳಿಂದಲೂ ಯಾವುದೇ ಹಿಟ್ ಸಿನಿಮಾ ನೀಡದೇ ಫ್ಲಾಪ್ ಎನ್ನುವ ಸಾಲಿಗೆ ಸೇರಿದ್ದಾರೆ. ನಿಜ ಹೇಳಬೇಕೆಂದರೆ ಕಳೆದೊಂದು ದಶಕದಿಂದ ಅವರ ಯಾವ ಚಿತ್ರವೂ ಹಿಟ್ ಆಗಿಲ್ಲ. ಮಾಡೆಲ್ ಇನಾಯ ಸುಲ್ತಾನಾ ಸಿನಿ ರಂಗಕ್ಕೆ ಹೊಸಬರಾಗಿದ್ದು, ಆಕೆಗೆ ಇನ್ನೂ ಯಾವುದೇ ದೊಡ್ಡ ಸಿನಿಮಾದ ಅವಕಾಶ ಬಂದಿಲ್ಲ. ಇನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಹೆಸರು ಅನೇಕ ನಟಿಯರ ಜೊತೆಗೆ ಈ ಹಿಂದೆ ಕೂಡಾ ತಳಕು ಹಾಕಿಕೊಂಡಿದೆ. ಇನಾಯ ಸುಲ್ತಾನ ತಮ್ಮ ಹುಟ್ಟುಹಬ್ಬದ ಫೋಟೋ ಶೇರ್ ಮಾಡಿಕೊಂಡಿದ್ದರು ಆದರೆ ಅದರಲ್ಲಿ ವರ್ಮಾ ಆಕೆಯನ್ನು ಅಪ್ಪಿಕೊಳ್ಳುವುದು ಕಂಡಿದ್ದು, ಅನಂತರ ಆಕೆ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.