ಹ್ಯುಂಡೈ ಕಂಪನಿಯ ಕಡಿಮೆ ಬೆಲೆಯ ಯುಎಸ್ ವಿ ಕಾರು ಮಾರುಕಟ್ಟೆಗೆ ಬರಲು ಸಜ್ಜಾಗುತ್ತಿದೆ
ದಿನೇ ದಿನೇ ಜನರು ಕಾರುಗಳನ್ನು ಕೊಳ್ಳುವುದು ಹೆಚ್ಚುತ್ತಿದೆ. ಅಲ್ಲದೇ ಹೊಸ ಹೊಸ ವಿನ್ಯಾಸದ, ಹೊಸ ಹೊಸ ಸೌಲಭ್ಯಗಳನ್ನು ಒಳಗೊಂಡ ಅದೆಷ್ಟೋ ಕಾರುಗಳು ಮಾರುಕಟ್ಟೆಯನ್ನು ಪ್ರವೇಶ ಮಾಡುತ್ತಲೇ ಇದೆ. ಅದರಲ್ಲೂ ಈಗ ಮದ್ಯಮ ವರ್ಗದ ಜನರಿಗೂ ಕೂಡಾ ಕಾರುಗಳನ್ನು ಕೊಳ್ಳುವ ಆಸಕ್ತಿ ಹೆಚ್ಚುತ್ತಿದ್ದು ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡುವ ಮೂಲಕ, ಕೆಲವರು ಇಎಂಐ ಗಳ ಮೂಲಕ ಕಾರನ್ನು ಕೊಳ್ಳಲು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇಂತಹವರಿಗಾಗಿ ಕೂಡಾ ಕೈಗೆಟುಕುವ ದರದಲ್ಲಿ ಕಾರನ್ನು ಉತ್ಪಾದನೆ ಮಾಡುವತ್ತ ಹಾಗೂ ಹೊಸ ಸೌಲಭ್ಯಗಳನ್ನು ನೀಡುವತ್ತ ಕಂಪನಿಗಳು ಕೂಡಾ ತಮ್ಮ ಗಮನವನ್ನು ಹರಿಸುತ್ತಿವೆ.

ಹ್ಯುಂಡೈ ಕಂಪನಿಯು ಒಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಈ ಹೊಸ ಪ್ರಯತ್ನ ಏನೆಂದರೆ ಕಂಪನಿಯು ಒಂದು ಕಡಿಮೆ ಬೆಲೆಗೆ ಸಿಗುವತಹ ಹೊಸ ಎಲೆಕ್ಟ್ರಿಕ್ ಎಸ್ ಯು ವಿ ಕಾರುಗಳ ಉತ್ಪನ್ನದಲ್ಲಿ ತೊಡಗಿಕೊಂಡಿದೆ. ಇದನ್ನು ಸ್ಮಾರ್ಟ್ ಇವಿ ಎನ್ನುವ ಯೋಜನೆಯ ಅಡಿಯಲ್ಲಿ ಕಂಪನಿ ತಯಾರಿಸಲಿದೆ ಎನ್ನಲಾಗಿದ್ದು, ಈ ಮಿನಿ ಎಲೆಕ್ಟ್ರಿಕ್ ಎಸ್ ಯು ವಿ ಯ 90% ಭಾಗಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತದೆ ಎನ್ನಲಾಗಿದೆ ಹಾಗೂ ಈ ಕಾರನ್ನು 2023 ರಲ್ಲಿ ಲಾಂಚ್ ಮಾಡಲಾಗುವುದು ಎನ್ನಲಾಗಿದೆ. ಈ ಹೊಸ ಕಾರಿನ ಬೆಲೆ ಎಷ್ಟಿರಬಹುದು ಎನ್ನುವುದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲವಾಗಿದ್ದರೂ ಕೂಡಾ ಇವು ಹತ್ತು ಲಕ್ಷಕ್ಕಿಂತ ಕಡಿಮೆ ದರದಲ್ಲಿ ಸಿಗುವುದು ಎಂದು ಹೇಳಲಾಗುತ್ತಿದೆ.
ಈ ಹೊಸ ಕಾರಿಗೆ ಹ್ಯುಂಡೈ AX ಎನ್ನುವ ಕೋಡ್ ನಂಬರ್ ಅನ್ನು ನೀಡಲಾಗಿದೆ. ಈ ಕಾರನ್ನು ಕೆಲವೇ ದಿನಗಳ ಮೊದಲು ದಕ್ಷಿಣ ಕೊರಿಯಾದಲ್ಲಿ ಟೆಸ್ಟಿಂಗ್ ನಲ್ಲಿ ನೋಡಲಾಗಿತ್ತು ಎನ್ನಲಾಗಿದೆ. ಕಂಪನಿಯ ಕೆಲವು ಸಮಯಕ್ಕೆ ಮೊದಲು ಕೋನಾ ಎಲೆಕ್ಟ್ರಿಕ್ ನ ಫೇಸ್ ಲಿಫ್ಟ್ ವರ್ಷನ್ ಅನ್ನು ಲಾಂಚ್ ಮಾಡಿತ್ತು. ಸದ್ಯ ಇರುವ ಮಾಡೆಲ್ ಗೆ ಈ ಹೊಸ ಮಾಡೆಲ್ ಅನ್ನು ಹೋಲಿಕೆ ಮಾಡಿದರೆ ಇದು 40 ಮಿಮೀ ಹೆಚ್ಚು ಉದ್ದವಾಗಿದೆ ಎಂದು ಕೂಡಾ ಹೇಳಲಾಗಿದೆ. ಇದು ಮಾತ್ರವೆ ಅಲ್ಲದೇ ಈ ಹೊಸ ಕಾರು ಹದಿನಾರು ವಿಭಿನ್ನವಾದ ಬಣ್ಣಗಳಲ್ಲಿ ಲಭ್ಯವಿದೆ ಎಂದು ಕೂಡಾ ಹೇಳಲಾಗಿದೆ.

16 ರಲ್ಲಿ 8 ಹೊಸ ಬಣ್ಣಗಳು ಎನ್ನಲಾಗಿದ್ದು, ಈ ಬಣ್ಣಗಳಲ್ಲಿ ಇದೇ ಮೊದಲ ಬಾರಿಗೆ ಈ ಕಾರನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಕಾರಿನಲ್ಲಿ 39.2 kWh ಮತ್ತು 64 kWh ಬ್ಯಾಟರಿಗಳನ್ನು ಹೊಂದಿರುತ್ತವೆ. ಇವು ಕ್ರಮವಾಗಿ 136 HP ಮತ್ತು 204 HP ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ ಎನ್ನಲಾಗಿದೆ. ಹ್ಯುಂಡೈನ ಈ ಚಿಕ್ಕ ಎಲೆಕ್ಟ್ರಿಕ್ ಕಾರು ಸಣ್ಣ ಬ್ಯಾಟರಿಯಲ್ಲಿ 305 ಕಿಮೀ ಮತ್ತು ದೊಡ್ಡ ಬ್ಯಾಟರಿಯ ಜೊತೆಗೆ 480 ಕಿಮೀ ದೂರವನ್ನು ಇದು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಭಾರತದಲ್ಲಿ ಈ ಕಾರಿನ 2019 ರ ಮಾಡೆಲ್ ನ ಬೆಲೆ 23.9 ಲಕ್ಷ ರೂಪಾಯಿಗಳ ಮೌಲ್ಯದ್ದಾಗಿದೆ. ಕಂಪನಿಯು ಭಾರತದಲ್ಲಿ ಈ ಕಾರಿನ ಫೇಸ್ ಲಿಫ್ಟ್ ಯಾವಾಗ ಲಾಂಚ್ ಮಾಡುವುದು ಎನ್ನುವುದರ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಹೊಸ ಮಾಡೆಲ್ ನ ಕಾರು ಹೊಸ ನಿರೀಕ್ಷೆಗಳನ್ನು ಮಾತ್ರ ಹುಟ್ಟು ಹಾಕಿದೆ ಹಾಗೂ ಕಾರಿನ ಬಗ್ಗೆ, ಅದರ ವಿಶೇಷತೆಗಳ ಕುರಿತಾಗಿ ಸುದ್ದಿಗಳಾಗಿದ್ದು ಕಾರು ಪ್ರಿಯರ ಗಮನವನ್ನು ಇದು ಖಂಡಿತವಾಗಿ ಸೆಳೆಯುತ್ತಿದೆ. ಇನ್ನು ಕಾರು ಮಾರುಕಟ್ಟೆಗೆ ಇಳಿಯುವುದಕ್ಕೆ ಕಾಯಬೇಕಿದೆಯಷ್ಟೇ.