17 ರ ವಯಸ್ಸಿನಲ್ಲಿಯೇ ನಾಲ್ಕು ಒಲಿಂಪಿಕ್ ಗೋಲ್ಡ್ ಪಡೆದು 22 ರಲ್ಲಿ ನಿವೃತ್ತ! ದಿಗ್ಗಜ ಈಜುಪಟು ಧೋನಿ ರಾಜ್ಯದಲ್ಲಿ ಮಾಡುವವಳಿದ್ದಾಳೆ ಈ ಮಹತ್ವದ ಕೆಲಸ!

ತನ್ನ 17 ನೇ ವಯಸ್ಸಿನಲ್ಲಿಯೇ ಲಂಡನ್ ಒಲಿಂಪಿಕ್ (2012) ನ ಈಜು ಸ್ಪರ್ಧೆಯಲ್ಲಿ ನಾಲ್ಕು ಒಲಿಂಪಿಕ್ ಗೋಲ್ಡ್ ಮೇಡಲ್ ಒಂದು ಬ್ರಾಂಜ್ ಮೇಡಲ್ ಗಳನ್ನು ಗೆದ್ದು ಬರೀ 22 ರ ಹರೆಯದಲ್ಲಿಯೇ ಆಟದಿಂದ ಸನ್ಯಾಸತ್ವವನ್ನು ತೆಗೆದುಕೊಂಡ ಅಮೇರಿಕೆಯ ಈಜು ದಿಗ್ಗಜಳಾದ ಮಿಸ್ಸಿ ಫ್ರಾಂಕಲಿನ್ (Missy Franklin) M S ಧೋನಿಯ ರಾಜ್ಯ ಝಾರಖಂಡ್ ನಲ್ಲಿ ಮಹತ್ವದ ಕೆಲಸ ಮಾಡಲು ಹೊರಟಿದ್ದಾಳೆ. ಸ್ಪರ್ಧಾತ್ಮಕ ಆಟಗಳಿಂದ ಸನ್ಯಾಸತ್ವವನ್ನು ಸ್ವೀಕರಿಸಿದ ನಂತರ ಸಮಾಜ ಕಾರ್ಯಕ್ಕೆ ತನ್ನನ್ನು ಸಮರ್ಪಣೆ ಮಾಡಬೇಕೆಂದು ಕೊಂಡಿದ್ದಾಳೆ. ಅದಕ್ಕಾಗಿಯೇ ಝಾರಖಂಡ್ ದಲ್ಲಿಯ (NGO) ‘ಯುವಾ’ ಹೆಸರಿನ ಸಂಘಟನೆಯೊಂದಿಗೆ ಕೈ ಜೋಡಿಸಿ ಹುಡುಗಿಯರಿಗಾಗಿ ಸ್ಥಿರವಾದ ಶಾಲೆಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದಾಳೆ.

ಅವರ ಸಮಾಜಮುಖಿ ಕಾರ್ಯಗಳನ್ನು ನೋಡಿ ಮಿಸ್ಸಿಗೆ ಕಳೆದ ವರ್ಷ ಲಾರೆನ್ಸ್ ಪುರಸ್ಕಾರದಿಂದಲೂ ಸನ್ಮಾನಿಸಲಾಗಿದೆ. ‘ಯುವಾ’ ಸಂಸ್ಥೆಯ ಕಾರ್ಯಗಳನ್ನು ಮತ್ತು ಹುಡುಗಿಯರಿಗಾಗಿ ಶ್ರಮಿಸುತ್ತಿರುವ ಕೆಲಸ ಹಾಗೂ ಅಲ್ಲಿಯ ಹುಡುಗಿಯರಿಂದ ಮಿಸ್ಸಿ ತುಂಬಾ ಆಕರ್ಷಿತಳಾಗಿ ನಿರಂತರವಾಗಿ ಅವರ ಸಂಪರ್ಕದಲ್ಲಿದ್ದಾಳೆ. ಮಿಸ್ಸಿ ಹುಡುಗಿಯರಿಗಾಗಿ ಶ್ರಮಿಸುತ್ತಿರುವ ರೀತಿಯಿಂದ ಪ್ರಭಾವಿತರಾಗಿ ‘ಯುವಾ’ ಸಂಸ್ಥೆ ಇವರಿಗೆ ತಮ್ಮ ಬೋರ್ಡದ ಸದಸ್ಯತ್ವದಲ್ಲಿ ಶಾಮೀಲು ಮಾಡಿಕೊಂಡಿದ್ದಾರೆ.

ಮಿಸ್ಸಿಯ ಕರಿಯರ್ ನೋಡಲಾಗಿ ಒಲಿಂಪಿಕ್ ನಲ್ಲಿ ಒಟ್ಟು ನಾಲ್ಕು ಸುವರ್ಣ ಒಂದು ಬ್ರಾಂಜ್ ಹಾಗೂ ವಿಶ್ವ ಚಾಂಪಿಯನ್ಷಿಪ್ ನಲ್ಲಿ 11 ಬಾರಿ ಗೆಲುವು ಸಾಧಿಸಿದ ಮಿಸ್ಸಿ ಇಲ್ಲಿಯ (ಝಾರಖಂಡ್) ಹುಡುಗಿಯರಿಗಾಗಿ ಒಂದು ಸ್ಥಿರವಾದ ವಿದ್ಯಾಲಯವನ್ನು ತಯಾರಿಸುವದಾಗಿದೆ ಎಂದು ದೃಢ ಮನಸ್ಸಿನಿಂದ ಹೇಳುತ್ತಾರೆ.