‘350’ ಕಿಲೊಗ್ರಾಮ್ ಕ್ಕಿಂತ ಹೆಚ್ಚು ತೂಕದ ಮರದ ಬುಡವನ್ನು ಎತ್ತಿಕೊಂಡು ಈ ಆನೆ ಮಾಡಿದ್ದೇನು? ವಿಡಿಯೋ ನೋಡಿ..!!!
ಅರಣ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ದಷ್ಟಪುಷ್ಟವಾದ ಪ್ರಾಣಿ ಎಂದರೆ ಅದು ಆನೆ. ಆನೆಯನ್ನು ಕಂಡರೆ ಸಾಕು ನಾವು ಹೆದರಿ ಅಲ್ಲಿಂದ ಪಲಾಯನ ಮಾಡುತ್ತೇವೆ. ಏಕೆಂದರೆ ಆನೆಯ ಭಾರವೇ ಅಷ್ಟೊಂದು ಇರುತ್ತದೆ ಅದು ಒಂದು ಹೆಜ್ಜೆ ಮನುಷ್ಯನ ಮೇಲೆ ಇಟ್ಟರೆ ಕೆಳಗಿದ್ದ ಮನುಷ್ಯ ಚೂರು ಚೂರಾಗುತ್ತಾನೆ. ಆದ್ದರಿಂದಲೇ ಈ ಪ್ರಾಣಿಯನ್ನು ಕಂಡಾಗ ಅಲ್ಲಿಂದ ದೂರ ಹೋಗುವದೇ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಆನೆಯನ್ನು ಸಹ ಮನೆಯಲ್ಲಿ ಸಾಕುತ್ತಾರೆ. ಆನೆಯನ್ನು ಸಾಕಿ ಅವುಗಳಿಂದ ತಮಗೆ ಬೇಕಾದ ಭಾರವಾದ ಕೆಲಸ ಸಹ ಮಾಡಿಸಿಕೊಳ್ಳುತ್ತಾರೆ ಹೀಗಾಗಿ ಆನೆ ಇದೊಂದು ಸಹಾಯ ಮಾಡುವ ಪ್ರಾಣಿ ಸಹ ಎಂದು ತಿಳಿಯಲಾಗುತ್ತದೆ.
ಪ್ರಸ್ತುತ ಸೋಶಿಯಲ್ ಮಿಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಆನೆಯ ಜಾಣತನ ನೋಡಬಹುದು. ಏಕೆಂದರೆ ಈ ಆನೆ ಅಲ್ಲಿ ಬಿದ್ದಿದ್ದ ಮರದ ಬುಡವನ್ನು ಎತ್ತಿಕೊಂಡು ಒಂದು ವಿಚಿತ್ರವಾದ ಕೃತಿ ಮಾಡುತ್ತದೆ. ಆ ಬುಡದ ಭಾರ ಸುಮಾರು 350 ಕಿಲೊಗ್ರಾಮ್ ಕ್ಕೂ ಹೆಚ್ಚು ಇರುತ್ತದೆ ಆದರೆ ಆನೆಯ ಶಕ್ತಿಯ ಮುಂದೆ ಇದು ಯಾವ ಲೆಕ್ಕ ಬಿಡಿ. ಅಷ್ಟೊಂದು ಭಾರವಾದ ಮರದ ಕಟ್ಟಿಗೆಯನ್ನು ತನ್ನ ಸೊಂಡಿಲು ಮುಖಾಂತರ ಎತ್ತಿಕೊಂಡು ಅಲ್ಲಿ ನಿಲ್ಲಿಸಿದ ಒಂದು ಸಿಮೆಂಟ್ ಪೋಲ್ ಮೇಲೆ ಸರ್ಕಸ್ ಮಾಡುತ್ತದೆ. ಅಂದರೆ ಈ ಭಾರವಾದ ಕಟ್ಟಿಗೆಯನ್ನು ಪೋಲ್ ಮೇಲೆ ಸಮಾಂತರ ತೂಕದ ಮೇಲೆ ನಿಲ್ಲಿಸುತ್ತದೆ. ಅಷ್ಟೊಂದು ಭಾರವಾದ ವಸ್ತು ಸಮಾನತೆ ಕಾಪಾಡಿಕೊಂಡು ಒಂದು ಪೋಲ್ ಮೇಲೆ ನಿಲ್ಲಿಸುವದು ಅಷ್ಟೊಂದು ಸರಳವಾದ ಕಾರ್ಯವಲ್ಲ. ಆದರೂ ಸಹ ಈ ಆನೆ ಧಾರಾಳವಾಗಿ ಈ ಕಾರ್ಯ ಮಾಡಿ ತೋರುತ್ತದೆ. ಅದ್ಭುತವಾದ ಈ ಆನೆಯ ವೀಡಿಯೋ ನೀವು ಒಮ್ಮೆ ನೋಡಲೇ ಬೇಕು.
ವಿಡಿಯೋ ನೋಡಿ.
Such an intelligent animal. Can lift a blade of grass as well as objects more than 350 kgs. And don’t miss the smile at the end💕
Time to free them from chains and confinement.(VC: Rex) pic.twitter.com/drEq0FZSgy
— Susanta Nanda IFS (@susantananda3) April 20, 2022
ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಇದುವರೆಗೆ ಈ ವೀಡಿಯೋವನ್ನು ಮೂವತ್ತು ಸಾವಿರಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಮೂರು ಸವಿರಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.