4 ಕಾಲುಗಳ, 42 ಕೋಟಿ ವರ್ಷ ವಯಸ್ಸಿನ ಮೀನು ಕಂಡು ವಿಜ್ಞಾನಿನಗಳಿಗೆ ಆಯ್ತು ಶಾಕ್: ಇನ್ನು ಜೀವಂತವಾಗಿರುವುದು ಹೇಗೆ ಅನ್ನೋದೇ ರಹಸ್ಯ

ಸಾಗರದ ಒಳಗಿನ ಜಗತ್ತು ಹಲವು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡು ಸದಾ ಒಂದು ವಿಸ್ಮಯಕಾರಿ ಎನಿಸುವಂತಹ ಸ್ಥಾನವಾಗಿದೆ. ಸಾಗರವನ್ನು ರತ್ನಾಕರ ಎಂದೂ ಕರೆಯಲಾಗುತ್ತದೆ. ಏಕೆಂದರೆ ಸಾಗರ ಗರ್ಭದಲ್ಲಿ ಅದೆಷ್ಟೋ ಅತ್ಯಮೂಲ್ಯ ವಸ್ತುಗಳು ಹಾಗೂ ಜೀವಿಗಳು ಇದೆ ಎಂದು ಹೇಳಲಾಗುತ್ತದೆ. ಇನ್ನು ಸಾಗರದಲ್ಲಿನ ಜೀವ ವೈವಿಧ್ಯತೆ ಕುರಿತಾಗಿ ಹೇಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲು ಎಂಬುದೇ ಇರುವುದಿಲ್ಲ ಎಂದರೂ ತಪ್ಪಾಗಲಾರದು. ಇಂತಹ ಅನಂತ ಸಾಗರದ ಒಡಲಿನಿಂದ ಪ್ರತಿದಿನವೂ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹೊಸ ಜೀವಿಯೊಂದು ಪತ್ತೆಯಾಗಿದೆ ಎನ್ನುವ ಸುದ್ದಿಗಳು ಬರುತ್ತಲೇ ಇರುತ್ತವೆ. ಇತ್ತೀಚೆಗೆ ಅಂತರರಾಷ್ಟ್ರೀಯ ಮಾಧ್ಯಮ ಒಂದು ಮಡಗಾಸ್ಕರ್ ನ ಸಾಗರದಾಳದಲ್ಲಿ ಅಲ್ಲಿನ ಮೀನುಗಾರರು ವಿಶ್ವದ ಅತಿ ಪುರಾತನವಾದ ಅಥವಾ ಅತಿ ಹೆಚ್ಚು ವಯಸ್ಸಾದಂತಹ ಮೀನನ್ನು ಪತ್ತೆ ಹಚ್ಚಿದ್ದಾರೆ ಎಂದು ಸುದ್ದಿಯನ್ನು ಪ್ರಸಾರ ಮಾಡಿದೆ.

ವರದಿಗಳ ಪ್ರಕಾರ ಈ ಮೀನಿನ ವಯಸ್ಸು 42 ಕೋಟಿ ವರ್ಷಗಳು ಎನ್ನಲಾಗಿದೆ. ವಿಸ್ಮಯದ ಸಂಗತಿ ಏನೆಂದರೆ ಈ ಮೀನು ಇನ್ನೂ ಜೀವಂತವಾಗಿದ್ದು, ಅದು ಪತ್ತೆಯಾದ ಕೂಡಲೇ ವಿಜ್ಞಾನಿಗಳು ಅದನ್ನು ತಮ್ಮ ವಶಕ್ಕೆ ಪಡೆದಿದ್ದು ಅದರ ಮೇಲೆ ಅಧ್ಯಯನಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಜಾತಿಯ ಮೀನುಗಳನ್ನು Coelacanth ಎನ್ನುವ ಹೆಸರಿನಿಂದ ಗುರುತಿಸಲಾಗಿದೆ. ಈ ಮೀನಿಗೆ ಪ್ರಾಣಿಗಳ ಹಾಗೆ ನಾಲ್ಕು ಕಾಲುಗಳು ಆಶ್ಚರ್ಯ ಉಂಟು ಮಾಡಿದೆ. ವಿಜ್ಞಾನಿಗಳ ಮಧ್ಯೆ ಇದು ಚರ್ಚೆಯ ವಿಷಯವಾಗಿದೆ. ಇದೇ ವೇಳೆಯಲ್ಲಿ ಅವರು ಈ ಮೀನು ಅಳಿವಿನ ಅಂಚಿನಲ್ಲಿದೆ ಎಂದು ಹೇಳಿದ್ದಾರೆ.

ಎಷ್ಟೋ ಸುದೀರ್ಘ ವರ್ಷಗಳ ನಂತರ ಶಾರ್ಕ್ ಮೀನುಗಳನ್ನು ಬೇ ಟೆಯಾಡುವ ಮೀನುಗಾರರು ಸಾಗರ ತಳದಿಂದ ಈ ಅಪರೂಪದ ಮೀನನ್ನು ಹಿಡಿದು ತಂದಿದ್ದಾರೆ. ಡೈನೋಸಾರ್ ಗಳು ಅಂತ್ಯವಾದ ಕಾಲದಲ್ಲೇ ಈ ಮೀನುಗಳು ಸಹಾ ನಾಶವಾದವು ಎಂದು ನಂಬಲಾಗಿತ್ತು. ಆದರೆ ಇಷ್ಟು ವರ್ಷಗಳ ನಂತರ ದೊರೆತಿರುವ ಈ ಮೀನು, ಇನ್ನೂ ಬದುಕಿರುವುದು ಒಂದು ಸಂಚಲನವನ್ನು ಸೃಷ್ಟಿಸಿದೆ.
ಈ ಮೀನು 42 ದಶಲಕ್ಷ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ. ಇದು ಸಮುದ್ರದಲ್ಲಿ ಸುಮಾರು 300 ರಿಂದ 500 ಅಡಿ ಆಳದಲ್ಲಿ ವಾಸಿಸುತ್ತದೆ. ಮುಖ್ಯವಾದ ಹಾಗೂ ವಿಸ್ಮಯದ ವಿಷಯವೆಂದರೆ ಅದಕ್ಕೆ ಕಾಲುಗಳಿವೆ. ಈ ಮೀನನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.

ಹಲವು ವರ್ಷಗಳ ನಂತರವೂ ಈ ಮೀನು ಇನ್ನೂ ಹೇಗೆ ಜೀವಂತವಾಗಿ ಕಂಡುಬಂದಿದೆ ಎಂದು ಜನರು ಹಾಗೂ ವಿಜ್ಞಾನಿಗಳು ಆಶ್ಚರ್ಯ ಪಡುವಂತಾಗಿದೆ? ಈಗ ವಿಜ್ಞಾನಿಗಳು ಈ ಮೀನಿನಿಂದಾಗಿ, ಇತರ ಸಮುದ್ರ ಜೀವಿಗಳಿಗೆ ಯಾವುದೇ ಸಮಸ್ಯೆ ಉಂಟಾಗಬಹುದೇ ಎನ್ನುವ ವಿಚಾರದಲ್ಲೂ ಚಿಂತಿತರಾಗಿದ್ದಾರೆ ಎನ್ನಲಾಗಿದೆ. ಈ ಮೀನಿನ ವಿಚಾರವಾಗಿ ಅನೇಕ ವರ್ಷಗಳ ಕಾಲ ಸಂಶೋಧನೆ ನಡೆಸುವ ಪ್ರಯತ್ನ ನಡೆದಿತ್ತು. ಅನೇಕ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದರು ಆದರೆ ಅವರು ಇದನ್ನು ಅಳಿವಿನಂಚಿನಲ್ಲಿರುವಂತೆ ಪರಿಗಣಿಸಿದ್ದರು. ಆದರೆ ಈಗ ಅದನ್ನು ಜೀವಂತವಾಗಿ ಹಿಡಿದಿರುವುದು ತಮ್ಮ ಸಂಶೋಧನೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದಾರೆ.