5 ವರ್ಷ ಸೈನ್ಯದಲ್ಲಿ ಸೇವೆ ನೀಡಿದಾಗಲೇ ಮಾತ್ರ ಸರಕಾರಿ ನೌಕರಿ!!
ನವದೆಹಲಿ: ಇಲ್ಲಿಂದ ಇನ್ನು ಮುಂದೆ ಯಾರ್ಯಾರಿಗೆ ಸರಕಾರಿ ನೌಕರಿ ಮಾಡುವ ಆಸೆಯಿದೆ ಅವರೆಲ್ಲರೂ ಕನಿಷ್ಠ ಪಕ್ಷ 5 ವರ್ಷ ಭಾರತದ ಸಂರಕ್ಷಣಾ ವಿಭಾಗದಲ್ಲಿ ತಮ್ಮ ಸೇವೆಯನ್ನು ಮಾಡಿರಲೇಬೇಕು ಎನ್ನುವ ಕಾನೂನು ತರುವ ವಿಚಾರ ನಡೆದಿದೆ.
ಸೈನ್ಯ, ವಾಯುಸೇನೆ ಮತ್ತು ನೌಕಾದಳದಲ್ಲಿ ಸದ್ಯಕ್ಕೆ ಅವಶ್ಯಕತೆಗೆ ತಕ್ಕಂತೆ ಸೈನ್ಯ ಸಂಖ್ಯೆ ಇಲ್ಲದೇ ಇರುವದರಿಂದ ಪ್ರಧಾನಮಂತ್ರಿ ಕಾರ್ಯಾಲಯದಿಂದ ‘ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ್’ ವಿಭಾಗವು ಈ ಸಂದರ್ಭದಲ್ಲಿ ಸಂರಕ್ಷಣಾ ವಿಭಾಗದ ಜೊತೆಗೆ ವಿಚಾರ ವಿನಿಮಯ ನಡೆಸಿದ್ದು, ನಂತರ ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಮಂಡಿಸಿ ಆಮೇಲೆ ಅದನ್ನು ಕಾಯಿದೆಯಲ್ಲಿ ರೂಪಾಂತರಿತ ಮಾಡುವ ಸಲುವಾಗಿ ಪ್ರಯತ್ನಶೀಲವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ಭಾರತೀಯ ಸೈನ್ಯದಲ್ಲಿ ಸದ್ಯಕ್ಕೆ 7,000 ಅಧಿಕಾರಿ ಮತ್ತು 20,000 ಸೈನಿಕರ ಅವಶ್ಯಕತೆ ಇದೆ.
ಭಾರತೀಯ ವಾಯುದಲದಲ್ಲಿ ಮತ್ತು ನೌಕಾದಳದಲ್ಲಿ ಪ್ರತ್ಯೇಕವಾಗಿ 150 ಅಧಿಕಾರಿ ಮತ್ತು 15,000 ಜವಾನರ (300 ಅಧಿಕಾರಿಗಳ 30,000 ಜವಾನರ)ಅವಶ್ಯಕತೆ ಇದೆ. ಮೇಲಿಂದಮೇಲೆ ಸೈನ್ಯಭರತಿಯ ಪ್ರಕ್ರಿಯೆ ನಡೆಸಿದರೂ ಸಹಿತ ಯೋಗ್ಯ ವ್ಯಕ್ತಿ ದೊರೆಯದ ಕಾರಣ ಅಥವಾ ಸೈನ್ಯದ ಕಠಿಣ ಸೇವೆಗೆ ಹೆದರಿ ಜನರ ಗಮನ ಕಡಿಮೆಯಾದದ್ದರಿಂದ ಭಾರತೀಯ ಸೈನ್ಯದಲ್ಲಿ ಮನುಷ್ಯಬಲದ ವಿರಳತೆಯನ್ನು ಹೇಗೆ ತುಂಬಿ ತೆಗೆಯಬೇಕು ಎನ್ನುವ ಪ್ರಶ್ನೆ ಸರಕಾರದ ಮುಂದೆ ಉದ್ಭವಿಸಿದೆ.
ಆದ್ದರಿಂದ ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಈ ಸಂದರ್ಭದ ಮಸೂದೆಯ ಮಂಜೂರಿಗಾಗಿ ಸರಕಾರದ ಪ್ರಯತ್ನ ನಡೆದಿದೆ.

ಸರಕಾರದ ಈ ಹೊಸ ನಿರ್ಣಯದಿಂದ ಸರಕಾರಿ ನೌಕರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮಾಡುತ್ತಿರುವ ಲಕ್ಷಾವಧಿ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.