8ನೇ ಕ್ಲಾಸ್ ಫೇಲ್ ಹುಡುಗ ಸ್ಥಾಪಿಸಿದ ಕಂಪನಿಯ ಮೌಲ್ಯ ಇಂದು 2000 ಕೋಟಿ! ಸಿಬಿಐ ಕೂಡ ಇವನ ಸಹಾಯ ಪಡೆಯುತ್ತೆ!
ಪ್ರಯತ್ನ ಪಟ್ಟರೆ ಯಾವುದೇ ಕೆಲಸ ಕೂಡಾ ಅಸಾಧ್ಯವಲ್ಲ ಎಂಬುದನ್ನು ನಾವೆಲ್ಲರೂ ಕೇಳುತ್ತಾ ಬಂದಿದ್ದೇವೆ. ಗುರಿ ಹಾಗೂ ಛಲ ಇದ್ದಲ್ಲಿ ಮನುಷ್ಯ ಎಷ್ಟು ಎತ್ತರಕ್ಕೆ ಬೇಕಾದರೂ ಏರಬಹುದು ಎನ್ನುವುದನ್ನು ಈಗಾಗಲೇ ಕೆಲವರು ನಮಗೆ ಸಾರಿ ಹೇಳಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ. ಆ ಭಗವಂತನು ಪ್ರತಿಯೊಬ್ಬರನ್ನೂ ಕೂಡಾ ಒಂದಲ್ಲಾ ಒಂದು ಪ್ರತಿಭೆಯೊಂದಿಗೆ ಸೃಷ್ಟಿಸಿದ್ದಾನೆ. ಅದನ್ನು ಗುರುತಿಸಿ ದೊಡ್ಡ ದೊಡ್ಡ ಕನಸನ್ನು ಹೊಂದಿರುವವರು ಅದರ ಕಡೆ ಗಮನ ನೀಡಿ ಶ್ರಮ ವಹಿಸಿ, ಅಸಾಧ್ಯ ಎನಿಸಿದ್ದನ್ನು ಸುಸಾಧ್ಯ ಮಾಡಿ ಬಿಡುತ್ತಾರೆ. ಅಂತಹವರಲ್ಲಿ ಒಬ್ಬರ ಬಗ್ಗೆ ನಾವು ಹೇಳಲು ಹೊರಟಿದ್ದು, ಓದಿದ ಮೇಲೆ ನಿಮಗೂ ಕೂಡಾ ಇದು ಖಂಡಿತ ಸ್ಪೂರ್ತಿ ನೀಡುತ್ತದೆ.

ಆತ ಎಂಟನೇ ತರಗತಿ ಫೇಲಾದ ಹುಡುಗ. ಆದರೆ ಆತ ನಿಲ್ಲಿಸಿರುವುದು 2000 ಕೋಟಿ ರೂಪಾಯಿಗಳ ದೊಡ್ಡ ಕಂಪನಿ. ಈ ಎರಡು ಸಾಲು ಓದಿದರೆ ಸಾಕು ಪ್ರತಿಭೆಗೂ ಡಿಗ್ರಿ ಗಳಿಗೂ ಸಂಬಂಧವಿಲ್ಲ ಎಂದು ಅರ್ಥವಾಗುತ್ತದೆ. ಆ ಯುವಕನ ಹೆಸರು ತ್ರಿಶನಿತ್ ಅರೋಡಾ. ಈತನು ಹುಟ್ಟು ಹಾಕಿರುವ ಕಂಪನಿಯ ಹೆಸರು ಟಿಎಸಿ ಸೆಕ್ಯುರಿಟಿ ಎನ್ನುವ ಸೈಬರ್ ಸೆಕ್ಯೂರಿಟಿ ಒದಗಿಸುವ ಕಂಪನಿ. ಪ್ರಸ್ತುತ ಸಿಬಿಐ, ರಿಲಯನ್ಸ್ , ಗುಜರಾತ್ ಪೋಲಿಸ್ ಹಾಗೂ ಪಂಜಾಬ್ ಪೋಲಿಸ್ ಕೂಡಾ ಈ ಕಂಪನಿಯ ಸೇವೆಗಳನ್ನು ಪಡೆದುಕೊಳ್ಳುತ್ತಿದೆ ಎಂದರೆ ಊಹಿಸಿ ನೋಡಿ, ಈ ಕಂಪನಿ ಯಾವ ಮಟ್ಟಕ್ಕೆ ಬೆಳೆದಿದೆ ಎಂದು. 2013 ರಲ್ಲಿ ಫೈನಾನ್ಸ್ ಮಿನಿಸ್ಟರ್ ಆಗಿದ್ದ ಯಶ್ವಂತ್ ಸಿನ್ಹಾ ಅವರು ಕೂಡಾ ಈ ಯುವಕನನ್ನು ಸನ್ಮಾನಿಸಿದ್ದರು.

ತ್ರಿಶನಿತ್ ಹ್ಯಾಕಿಂಗ್ ಬಗ್ಗೆ ಕೆಲವು ಪುಸ್ತಕಗಳನ್ನು ಕೂಡಾ ಬರೆದಿದ್ದಾರೆ. ದಿ ಹ್ಯಾಕಿಂಗ್ ಎರಾ, ಹ್ಯಾಕಿಂಗ್ ವಿತ್ ಸ್ಮಾರ್ಟ್ ಫೋನ್ ಗಳು ಅವರ ಪ್ರಮುಖ ಪುಸ್ತಕಗಳಾಗಿವೆ. ತ್ರಿಶನನ್ ಅವರಿಗೆ ಭಾರತದಲ್ಲಿ ಒಂದು ಬಿಲಿಯನ್ ಡಾಲರ್ ಸೆಕ್ಯುರಿಟಿ ಕಂಪನಿ ಸ್ಥಾಪನೆ ಮಾಡುವ ಕನಸಿದೆ. ಅದಕ್ಕಾಗಿ ಅವರು ಹಗಲಿರುಳು ಶ್ರಮ ಪಡುತ್ತಿದ್ದಾರೆ ಕೂಡಾ. ಎಂಟನೇ ತರಗತಿ ಫೇಲಾದ ತ್ರಿಶಾನಿತ್ ಇಂದು ಎಂಬಿಎ, ಬಿಟೆಕ್, ಎಂಟೆಕ್ ಅಥವಾ ಇನ್ನೂ ಅನೇಕ ಪ್ರೊಫೆಶನಲ್ ಕೋರ್ಸ್ ಮಾಡಿರುವವರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಿದ್ದಾರೆ. ತ್ರಿಶಾನಿತ್ ನವೆಂಬರ್ 2, 1993 ರಂದು ಪಂಜಾಬ್ನ ಲುಧಿಯಾನದಲ್ಲಿ ಜನಿಸಿದರು. ಇವರು ತನ್ನ 24 ನೇ ವಯಸ್ಸಿನಲ್ಲಿ ಟಿಎಸಿ ಸೆಕ್ಯುರಿಟಿ ಕಂಪನಿಯ ಸಿಇಒ ಮತ್ತು ಸಂಸ್ಥಾಪಕರಾಗಿದ್ದಾರೆ.
ತ್ರಿಶಾನಿತ್ ಬಾಲ್ಯದಿಂದಲೂ ಕೂಡಾ ಕಂಪ್ಯೂಟರ್ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದ. ಆಗ ಅವರ ತಂದೆಗೆ ಮಗನ ಆಟಗಳನ್ನು ನೋಡಿ ಅವನು ಓದಿನ ಕಡೆಗೆ ಗಮನ ನೀಡುತ್ತಿಲ್ಲವೆಂದು ಬೇಸರ ಮಾಡಿಕೊಂಡು, ಮನೆಯಲ್ಲಿದ್ದ ಕಂಪ್ಯೂಟರ್ ಗೆ ಪಾಸ್ವರ್ಡ್ ಹಾಕಿದರು. ಆದರೆ ತ್ರಿಶನಿತ್ ಅದನ್ನು ಹ್ಯಾಕ್ ಮಾಡುತ್ತಿದ್ದ. ಕಡೆಗೆ ಅವರ ತಂದೆ ಮಗನಿಗೆ ಒಂದು ಹೊಸ ಕಂಪ್ಯೂಟರ್ ಕೊಡಿಸಿದರು. ಅನಂತರ ಎಂಟನೇ ತರಗತಿ ಪರೀಕ್ಷೆಯಲ್ಲಿ ತ್ರಿಶನಿತ್ ಫೇಲಾದ ತಂದೆಯಿಂದ ಬೈಗುಳ ಕೂಡಾ ಕೇಳಬೇಕಾಯಿತು. ಆಗ ತಂದೆ ಮುಂದೆ ಏನು ಮಾಡಬೇಕೆಂದಿರುವೆ ಎಂದಾಗ ತ್ರಿಶನಿತ್ ಶಾಲೆ ಬಿಡುವುದಾಗಿ ಹೇಳಿದ. ಹೇಳಿದಂತೆ ಮಾಡಿ ಶಾಲೆಯನ್ನು ಬಿಟ್ಟ ಆತ, ಹೆಚ್ಚು ಸಮಯ ಕಂಪ್ಯೂಟರ್ ನಲ್ಲೇ ಕಳೆದ.

ತ್ರಿಶಾನಿತ್ ತನ್ನ 20 ನೇ ವಯಸ್ಸಿನಲ್ಲಿ, ಕಂಪ್ಯೂಟರ್ ಫಿಕ್ಸಿಂಗ್ ಮತ್ತು ಸಾಫ್ಟ್ವೇರ್ ಕ್ಲೀನಿಂಗ್ ನಂತಹ ಸಣ್ಣ ಪ್ರಾಜೆಕ್ಟ್ ತೆಗೆದುಕೊಳ್ಳಲು ಪ್ರಾರಂಭಿಸಿದರು. ಮೊದಲ ತಿಂಗಳಲ್ಲಿ ತ್ರಿಶಾನಿತ್ ಸುಮಾರು 60 ಸಾವಿರ ರೂಪಾಯಿಗಳನ್ನು ಗಳಿಸಿದನು. ತ್ರಿಶನಿತ್ ಇದೇ ಹಣವನ್ನು ತನ್ನ ಹೊಸ ಬ್ಯುಸಿನೆಸ್ ನ ಬಂಡವಾಳ ಮಾಡಿದರು. ತನ್ನ 21 ನೇ ವಯಸ್ಸಿನಲ್ಲಿ ಟಿಎಸಿ ಸೆಕ್ಯುರಿಟಿ ಎಂಬ ಸೈಬರ್ ಸೆಕ್ಯುರಿಟಿ ಕಂಪನಿಯನ್ನು ಆರಂಭಿಸಿದರು. ಅದಕ್ಕೆ ಆಸಕ್ತಿ ಹಾಗೂ ಗುರಿಯ ಕಡೆ ನಡೆಯುವ ಛಲವಿದ್ದರೆ ಏನನ್ನೇ ಆಗಲಿ ಸಾಧಿಸಬಹುದಲ್ಲವೇ ಸ್ನೇಹಿತರೇ.