ನಾಗಿನ್ ಡ್ಯಾನ್ಸ್ ನಂತರ ಧೂಳ್ ಎಬ್ಬಿಸುತ್ತಿದೆ ಆರ್ಮಿ ಡ್ಯಾನ್ಸ್! ವೈರಲ್ ವಿಡಿಯೋ ನೋಡಿ ಮೆಚ್ಚಿದ ನೆಟ್ಟಿಗರು…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ನಾಗಿನ್ ಡ್ಯಾನ್ಸ್ ಗಳು ತುಂಬಾ ಫೇಮಸ್ ಆಗಿದ್ದವು. ನೆಟ್ಟಿಗರು ಈ ಡ್ಯಾನ್ಸ್ ಗಳನ್ನು ನೋಡಿ ನಕ್ಕಿದ್ದೆ ನಕ್ಕಿದ್ದು. ಈಗ ಮತ್ತೊಂದು ಹೊಸ ಆರ್ಮಿ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದೆ. ಈ ವಿಡಿಯೋದಲ್ಲಿ ಡ್ಯಾನ್ಸ್ ಮಾಡಿದ ವ್ಯಕ್ತಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.
ಅನೇಕ ಸಮಾರಂಭಗಳಲ್ಲಿ ಜನರಿಗೆ ವಿಧ ವಿಧ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದನ್ನು ನೀವು ನೋಡಿರಬೇಕು. ಕೆಲವರಿಗಂತೂ ಕಿವಿಯ ಮೇಲೆ ಮ್ಯೂಸಿಕ್ ಬಿದ್ದರೆ ಸಾಕು ತಮ್ಮನ್ನು ತಾವು ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಗ ವ್ಯಕ್ತಿಯೊಬ್ಬ ಮಾರ್ಕೆಟ್ ನಲ್ಲಿ ಹೊಸ ಡ್ಯಾನ್ಸ್ ಒಂದನ್ನು ಎಂಟ್ರಿ ಮಾಡಿಸಿದ್ದಾನೆ. ವಿಡಿಯೋ ನೋಡಿದಾಗ ಮದುವೆ ಸಮಾರಂಭ ನಡೆದಿದೆ ಎನ್ನಿಸುತ್ತಿದೆ. ಎಲ್ಲರೂ ತಮ್ಮಷ್ಟಕ್ಕೆ ತಾವು ಎಂಜಾಯ್ ಮಾಡುತ್ತಿದ್ದಾರೆ. ಆದರೆ ವ್ಯಕ್ತಿಯೊಬ್ಬ ಬೇರೆಯೇ ರೀತಿಯಲ್ಲಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. ಆತನನ್ನು ನೋಡಿದಾಗ ಸೈನ್ಯದಲ್ಲಿ ಡ್ಯೂಟಿ ಮಾಡುವ ಹಾಗೆ ಇದ್ದಾನೆ. ಹಾಗೂ ಡ್ಯಾನ್ಸ್ ಮಾಧ್ಯಮದಿಂದ ಆದೇಶಗಳನ್ನು ಪರಿಪಾಲಿಸುತ್ತಿದ್ದಾನೇನೋ ಅಥವಾ ತರಬೇತಿ ಪಡೆಯುತ್ತಿದ್ದಾನೆನೋ ಎನ್ನುವಂತಿದೆ ಆತನ ಡ್ಯಾನ್ಸ್ ಸ್ಟೆಪ್ಸ್ ಗಳು.
ವಿಡಿಯೋ ನೋಡಿ
ट्रेनिंग खत्म होते ही दोस्त की बारात में पहुंचा जवान. 😅 pic.twitter.com/Vh7BqQokaZ
— Dipanshu Kabra (@ipskabra) April 21, 2022
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಗಾಳಿಯಂತೆ ಹಬ್ಬುತ್ತಿದೆ. ಈ ವಿಡಿಯೋ ನೋಡಿದಾಗ ನಿಮಗೂ ನಗು ತಡೆಯುವದಾಗುವದಿಲ್ಲ. ಈ ವಿಚಿತ್ರ ಶೈಲಿಯ ಡ್ಯಾನ್ಸ್ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಈ ವೀಡಿಯೋವನ್ನು ಐಪಿಸ್ ಅಧಿಕಾರಿ ದಿಪಾಂಶು ಕಾಬರಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಜೊತೆಗೆ ಕ್ಯಾಪ್ಶನ್ ನಲ್ಲಿ ” ಟ್ರೇನಿಂಗ್ ಮುಗಿಯುತ್ತಲೇ ಯುವಕ ನೇರ ಮಿತ್ರನ ಮದುವೆಗೆ ಅಟೆಂಡ್ ” ಎಂದಿದ್ದಾರೆ.