ರಾಷ್ಟ್ರೀಯ ಹಬ್ಬಗಳ ಮಹತ್ವ – Importance of National Festivals

ನಮ್ಮ ದೇಶವು ವೈವಿಧ್ಯತೆಯ ದೇಶವಾಗಿದೆ, ಇಲ್ಲಿ ವರ್ಷವಿಡೀ ವಿವಿಧ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದೇ ರೀತಿ ರಾಷ್ಟ್ರೀಯ ಹಬ್ಬಗಳು ಯಾವುದೇ ದೇಶದ ಸಾಂಸ್ಕೃತಿಕ ರಚನೆಯ ಅವಿಭಾಜ್ಯ ಅಂಗವಾಗಿವೆ. ಹಲವು ಧರ್ಮ ಜಾತಿಗಳ ಜನರನ್ನು ಒಟ್ಟುಗೂಡಿಸುವ ಏಕೀಕೃತ ಶಕ್ತಿಯಾಗಿ ರಾಷ್ಟ್ರೀಯ ಹಬ್ಬಗಳು ಕಾರ್ಯನಿರ್ವಹಿಸುತ್ತವೆ. ಈ ಪ್ರಬಂಧದಲ್ಲಿ ನಾವು Importance of National Festivals ಅಂದರೆ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ತಿಳಿಯೋಣ.

ರಾಷ್ಟ್ರೀಯ ಹಬ್ಬಗಳ ಮಹತ್ವ

ಪರಿಚಯ

ಹಲವಾರು ಜಾತಿ ಧರ್ಮಗಳ ಜನರು ವಾಸಿಸುವ ಭಾರತ ದೇಶದಲ್ಲಿ ಹಲವಾರು ಧಾರ್ಮಿಕ ಹಬ್ಬಗಳು ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತದೆ, ಅವುಗಳಲ್ಲಿ ದೇಶದ ಎಲ್ಲ ಧರ್ಮದವರು ಆಚರಿಸಬೇಕಾದ ಹಬ್ಬಗಳಾದ ರಾಷ್ಟ್ರೀಯ ಹಬ್ಬಗಳಿಗೆ ಭಾರತದಲ್ಲಿ ವಿಶೇಷ ಗೌರವ ಹಾಗೂ ಸ್ಥಾನಮಾನವಿದೆ. ರಾಷ್ಟ್ರೀಯ ಹಬ್ಬಗಳ ರೂಪದಲ್ಲಿ ನಾವು  ಸ್ವತಂತ್ರ ದಿನಾಚರಣೆ, ಗಾಂಧೀ ಜಯಂತಿ, ಗಣರಾಜ್ಯೋತ್ಸವದಂತಹ ಹಬ್ಬಗಳನ್ನು ಆಚರಿಸುತ್ತಿದ್ದು ಅವುಗಳಿಗೆ ಸಾಕಷ್ಟು ಮಹತ್ವವನ್ನು ಸಹ ಕೊಡಲಾಗುತ್ತದೆ.

ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳಿಗೆ ಅದೆಷ್ಟು ಮಹತ್ವ ನೀಡಲಾಗುತ್ತದೆ ಎಂದರೆ, ಈ ದೇಶದಲ್ಲಿ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಸೇರಿದಂತೆ ಸರಕಾರಿ ಕಛೇರಿ, ಸಂಘ ಸಂಸ್ಥೆಗಳು, ಬ್ಯಾಂಕ್ ಗಳು ಹಾಗೂ ಕೆಲವು ಖಾಸಗಿ ಕಛೇರಿಗಳು ಸಹ ಕೆಲಸಕ್ಕೆ ರಜೆ ಘೋಷಿಸಿ ದೇಶಭಕ್ತಿಗೆ ಸಂಬಂಧಿಸಿದ ಹಾಗೂ ಇನ್ನಿತರೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಸಂತಸ ವ್ಯಕ್ತಪಡಿಸುತ್ತಾರೆ, ಅಲ್ಲದೇ ಬೆಳೆಯುವ ಮಕ್ಕಳಿಗೆ ರಾಷ್ಟ್ರೀಯ ಹಬ್ಬಗಳ ಮಹತ್ವದ ಬಗ್ಗೆ ತಿಳಿಸಿಕೊಡಲಾಗುತ್ತದೆ.

ರಾಷ್ಟ್ರೀಯ ಹಬ್ಬಗಳ ಮಹತ್ವ

ಸ್ವಾತಂತ್ರೋತ್ಸವ:

ಸುಮಾರು 200 ವರ್ಷಗಳಿಗೂ ಅಧಿಕ ಕಾಲ ಮೊಘಲರು, ಡಚ್ಚರು ಹಾಗೂ ಬ್ರಿಟಿಷರಿಂದ ಆಳ್ವಿಕೆಗೆ ಒಳಪಟ್ಟಿದ್ದ ಭರತ ಭೂಮಿಗೆ ಕೊನೆಯದಾಗಿ ಆಳುತ್ತಿದ್ದ ಬ್ರಿಟಿಷರ ವಶದಿಂದ ಸ್ವತಂತ್ರ ಸಿಕ್ಕಿದ್ದು 1947 ರ ಆಗಸ್ಟ್ 15 ರಂದು. ಆ ದಿನ ಬ್ರಿಟಿಷರು ಭಾರತಕ್ಕೆ ಸ್ವತಂತ್ರ ಕೊಟ್ಟು ತಮ್ಮ ದೇಶದತ್ತ ಹೆಜ್ಜೆ ಹಾಕಿದ ದಿನ, ಅಲ್ಲಿಯವರೆಗೂ ಪರಕೀಯರ ಕೈಯಲ್ಲಿ ಸಿಕ್ಕು ನಲುಗಿದ ಭಾರತಾಂಬೆಯ ಮಡಿಲ ಮಕ್ಕಳು ಅಂದು ಸಿಕ್ಕ ಸ್ವತಂತ್ರವನ್ನು ಇಂದಿಗೂ ಸಹ ಸಂತೋಷ ಹಾಗೂ ವಿಜೃಂಭಣೆಯಿಂದ ಸ್ವತಂತ್ರ ದಿನ ಅಥವಾ ಸ್ವಾತಂತ್ರೋತ್ಸವ ಎಂದು ಆಚರಿಸುತ್ತಾರೆ.

ಭಾರತಕ್ಕೆ ಸ್ವತಂತ್ರ ತಂದುಕೊಡಲು ಹಲವಾರು ಭಾರತೀಯ ಮಾತೆಯರು ತಮ್ಮ ಮಡಿಲ ಮಕ್ಕಳನ್ನೇ ಬಲಿ ಕೊಟ್ಟ ಹಲವಾರು ನಿದರ್ಶನಗಳಿವೆ, ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ರಂತಹ ಅರಳಬೇಕಿದ್ದ ಪ್ರತಿಭೆಗಳು ಕೇವಲ 20 ರ ಆಸುಪಾಸಿನ ವಯಸ್ಸಿನಲ್ಲಿ ನೇಣು ಕುಣಿಕೆಗೆ ತಮ್ಮ ಕೊರಳೊಡ್ಡಿದ ನಿದರ್ಶನಗಳು ಇಂದಿಗೂ ಭಾರತೀಯ ಯುವಜನತೆಗೆ ಆದರ್ಶವೇ ಸರಿ. ಆಜಾದ್ ಹಿಂದ್ ಫೌಜ್ ಎಂಬ ಸೈನ್ಯ ಕಟ್ಟಿ ಬ್ರಿಟಿಷರ ನಿದ್ದೆಗೆಡಿಸಿದ್ದ ಸುಭಾಸ್ ಚಂದ್ರ ಭೋಸ್ ರಂತಹ ವೀರರ ತ್ಯಾಗವನ್ನು ಎಂದಾದರೂ ನಾವು ಮರೆಯಲು ಸಾಧ್ಯವೇ?

ಇಂತಹ ಸಾವಿರಾರು ದೇಶಭಕ್ತರ ತ್ಯಾಗ ಬಲಿದಾನಗಳಿಂದಾಗಿ ಭಾರತ ದೇಶ ಇಂದು ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿದ್ದು ಪ್ರತಿ ವರ್ಷ ಭಾರತ ಆಗಸ್ಟ್ 15 ರಂದು ತನ್ನ ಸ್ವಾತಂತ್ರೋತ್ಸವವನ್ನು ಆಚರಿಸುತ್ತದೆ ಹಾಗೂ ಆ ದಿನ ಸರಕಾರಿ ಕಛೇರಿಗಳು, ಸಂಘ ಸಂಸ್ಥೆಗಳು ರಜೆ ಘೋಷಿಸಿಕೊಂಡು ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರೆ, ಶಾಲಾ ಕಾಲೇಜುಗಳಲ್ಲಿಯೂ ಸಹ ಆ ದಿನ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಶಿಕ್ಷಕರು ಹಾಗೂ ಮಕ್ಕಳು ಸೇರಿ ಆ ದಿನದಂದು ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಸಂಭ್ರಮಿಸುತ್ತಾರೆ.

ರಾಷ್ಟ್ರೀಯ ಹಬ್ಬಗಳ ಮಹತ್ವ

ಗಣರಾಜ್ಯೋತ್ಸವ:

ಭಾರತಕ್ಕೆ 1947 ರ ಆಗಸ್ಟ್ 15 ರಂದು ಸ್ವತಂತ್ರ ಸಿಕ್ಕ ನಂತರ ಭಾರತದ ನಾಗರಿಕರಿಗೆ ಅವರದ್ದೇ ಆದ ಹಕ್ಕು ಮತ್ತು ಜವಾಬ್ದಾರಿಗಳನ್ನು ಹಾಗೂ ಬಹುಮುಖ್ಯ ಅಧಿಕಾರಗಳನ್ನು ನೀಡುವ ನಿಟ್ಟಿನಲ್ಲಿ ಭಾರತ ದೇಶ 1950 ರ ಜನವರಿ 26 ರಂದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಗತ್ಯವಾಗಿ ಬೇಕಿದ್ದ ಸಂವಿಧಾನವನ್ನು ಅಂಗೀಕರಿಸಿತು, ಅದೇ ದಿನವನ್ನೇ ಭಾರತದಲ್ಲಿ ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.

ಭಾರತದ ಈ ಪುಣ್ಯಭೂಮಿಯಲ್ಲಿ ಜನಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಅವರ ತಂಡ ಸೇರಿ ರಚಿಸಿದ್ದ ಸಂವಿಧಾನವನ್ನು ಭಾರತ ಅಂದು ಅಂಗೀಕರಿಸಿ ಇಂದಿಗೂ ಸಹ ಅದೇ ಸಂವಿಧಾನದಡಿಯಲ್ಲಿ ಕೆಲಸ ಮಾಡುತ್ತಾ ಸಾಗುತ್ತಿದ್ದು, ಪ್ರತಿ ವರ್ಷ ಭಾರತದಲ್ಲಿ ಜನವರಿ 26 ಅನ್ನೂ ಸಹ ರಾಷ್ಟ್ರೀಯ ಹಬ್ಬವೆಂದು ಪರಿಗಣಿಸಿ ಸಂವಿಧಾನ ಶಿಲ್ಪಿಗಳಿಗೆ ಗೌರವ ಸೂಚಿಸುವುದರೊಂದಿಗೆ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಭಾರತ ದೇಶದ ಪ್ರಜೆಗಳಿಗೆ ಸಂವಿಧಾನದಡಿಯಲ್ಲಿ ಸಿಗುವ ಸೌಲಭ್ಯಗಳು ಹಾಗೂ ದೇಶದ ರಕ್ಷಣೆಗಾಗಿ ಹಾಗೂ ಸುರಕ್ಷತೆಗಾಗಿ ನಮಗೆ ಇರಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಭಾರತದ ಗಣರಾಜ್ಯೋತ್ಸವದ ದಿನದಂದು ಸಹ ರಾಷ್ಟ್ರೀಯ ರಜೆ ಇದ್ದು, ಸರಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಿಗೆ ಅಂದು ರಜೆ ಇರುತ್ತದೆ. ಅಲ್ಲದೇ ಸಂಘ ಸಂಸ್ಥೆಗಳು ಮತ್ತು ಕೆಲವು ಖಾಸಗಿ ಸಂಸ್ಥೆಗಳು ಸಹ ರಜೆ ಘೋಷಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತವೆ.

ಗಾಂಧೀ ಜಯಂತಿ:

ಭಾರತಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಮಹತ್ತರ ಪಾತ್ರವಹಿಸಿದ್ದರು ಎನ್ನಲಾಗುವ ಹಾಗೂ ರಾಷ್ಟ್ರಪಿತ ಎಂದೇ ಕರೆಯಲ್ಪುಡುವ ಮೋಹನದಾಸ ಕರಾಮಚಂದ್ ಗಾಂಧೀ ಅಂದರೆ ಮಹಾತ್ಮಾ ಗಾಂಧೀಜಿ ಜನಿಸಿದ ಅಕ್ಟೋಬರ್ 2 ನೇ ತಾರೀಖನ್ನು ಭಾರತದಲ್ಲಿ ಅತ್ಯಂತ ಸಂತೋಷದಿಂದ ಆಚರಿಸಲಾಗುತ್ತದೆ ಹಾಗೂ ಆ ದಿನ ಸರಕಾರಿ ರಜೆಯನ್ನು ಸಹ ಘೋಷಣೆ ಮಾಡಲಾಗಿದೆ.

ಸತ್ಯ ಹಾಗೂ ಅಹಿಂಸಾ ಮಾರ್ಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವತಂತ್ರ ತಂದುಕೊಟ್ಟ ಮಹಾತ್ಮ ಗಾಂಧೀಯವರ ಜನ್ಮದಿನದಂದು ಮಾಮೂಲಾಗಿ ಭಾಷಣಕಾರರು, ಗಾಂಧೀಜಿಯಂತೆ ಸತ್ಯ ಹಾಗೂ ಅಹಿಂಸೆಯ ಮಾರ್ಗ ಹಿಡಿದರೆ ಅಸಾಧ್ಯ ಎಂಬುದನ್ನು ಸಹ ಸಾಧಿಸಿ ತೋರಿಸಬಹುದು, ಅದಕ್ಕೆ ಸಾಕ್ಷಿ ಗಾಂಧೀಜಿ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವೇ ಸಾಕ್ಷಿಯಾಗಿದ್ದು, ಅಹಿಂಸೆಯ ಮಾರ್ಗವನ್ನು ಎಂದಿಗೂ ಬಿಡಬೇಡಿ ಎಂದು ಭಾಷಣ ಮಾಡುತ್ತಾರೆ.

ರಾಷ್ಟ್ರೀಯ ಹಬ್ಬಗಳ ಮಹತ್ವ

ಭಾರತದ ರಾಷ್ಟ್ರೀಯ ಹಬ್ಬಗಳ ಬಗ್ಗೆ 15 ವಾಕ್ಯಗಳು:

1) ಭಾರತದಲ್ಲಿ ಮೂರು ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.

2) ಭಾರತದಲ್ಲಿ ಸಂವಿಧಾನದ ಅನುಷ್ಠಾನದ ನೆನಪಿಗಾಗಿ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

3) ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ದಿನವಾದ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವಾಗಿ ಆಚರಿಸಲಾಗುತ್ತದೆ.

4) ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಎಂದು ಆಚರಿಸುತ್ತೇವೆ.

5) ಆಗಸ್ಟ್ 15 ರಂದು ಭಾರತದ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ.

6) ಜನವರಿ 26 ರಂದು ಭಾರತದ ರಾಷ್ಟ್ರಪತಿಗಳಿಂದ ರಾಜಧಾನಿಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.

7) ಗಾಂಧಿ ಜಯಂತಿಯ ದಿನದಂದು ಜನರು ಗಾಂಧೀಜಿಯನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ.

8) ರಾಷ್ಟ್ರೀಯ ಹಬ್ಬಗಳಂದು ಭಾರತದಲ್ಲಿ ರಾಷ್ಟ್ರೀಯ ರಜಾದಿನವನ್ನು ಘೋಷಿಸಲಾಗಿದೆ.

9) ಮೂರೂ ರಾಷ್ಟ್ರೀಯ ಹಬ್ಬಗಳು ಭಾರತೀಯರಲ್ಲಿ ಏಕತೆಯ ಭಾವನೆಯನ್ನು ಜಾಗೃತಗೊಳಿಸುತ್ತವೆ.

10) ರಾಷ್ಟ್ರೀಯ ಹಬ್ಬಗಳು ನಮ್ಮಲ್ಲಿ ಹೆಮ್ಮೆ ಮತ್ತು ದೇಶಭಕ್ತಿಯ ಹೊಸ ಶಕ್ತಿಯನ್ನು ತುಂಬುತ್ತವೆ.

11) ಗಣರಾಜ್ಯೋತ್ಸವವನ್ನು ದೆಹಲಿಯ ರಾಜಪಥದಲ್ಲಿ ಭವ್ಯ ಮೆರವಣಿಗೆ ಮತ್ತು ಹಲವು ಕಾರ್ಯಕ್ರಮಗಳೊಂದಿಗೆ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.

12) ರಾಜ್‌ಘಾಟ್ ಸ್ಮಾರಕದಲ್ಲಿ ಗಾಂಧಿ ಜಯಂತಿಯ ದಿನದಂದು ಅನೇಕ ರಾಜಕೀಯ ನಾಯಕರು ಮತ್ತು ಗಣ್ಯರು ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ.

13) ರಾಷ್ಟ್ರೀಯ ಹಬ್ಬಗಳಂದು ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

14) ರಾಷ್ಟ್ರೀಯ ಹಬ್ಬಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ಮಹಾನ್ ಕ್ರಾಂತಿಕಾರಿಗಳನ್ನು ನೆನಪಿಸುತ್ತವೆ.

15) ಎಲ್ಲೆಡೆ ದೇಶಭಕ್ತಿ ಗೀತೆಗಳು ಮತ್ತು ಘೋಷಣೆಗಳ ಪ್ರತಿಧ್ವನಿ ನಮ್ಮಲ್ಲಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಉತ್ತೇಜಿಸುತ್ತದೆ.

ತೀರ್ಮಾನ

ಒಟ್ಟಾರೆಯಾಗಿ ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳಿಗೆ ಮತ್ತು ರಾಷ್ಟ್ರ ಧ್ವಜಕ್ಕೆ ಸಿಗುವ ಮಹತ್ವ ಹಾಗೂ ಅವುಗಳನ್ನು ಆಚರಿಸುವ ಪರಿ ಬಹುಶ ಜಗತ್ತಿನ ಯಾವ ದೇಶದಲ್ಲಿಯೂ ಇರಲಿಕ್ಕಿಲ್ಲ ಎಂಬುದು ನನ್ನ ಭಾವನೆ. ಭಾರತದ ರಾಷ್ಟ್ರೀಯ ಹಬ್ಬಗಳ ದಿನದಂದು ಸರಕಾರಿ ಕಛೇರಿಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಅಲ್ಲದೇ ಊರಿನ ಪ್ರಮುಖ ಸ್ಥಳಗಳಲ್ಲಿಯೂ ಸಹ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ.

FAQ : 

[sc_fs_multi_faq headline-0=”h3″ question-0=”ರಾಷ್ಟ್ರೀಯ ಹಬ್ಬಗಳು ಯಾವವು?” answer-0=”ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯ ದಿನಾಚರಣೆ” image-0=”” count=”1″ html=”true” css_class=””]