ತಾಯಿಗೆ ಸಿಕ್ಕಿತು ಹುತಾತ್ಮ ಯೋಧನ ಜೇಬಿನಲ್ಲಿ ಒಂದು ‘ಚೀಟಿ’ ಅದರಲ್ಲಿ ಹೀಗೆ ಬರೆದಿತ್ತು…

ವರ್ಗದಲ್ಲಿಯ ಗಣಿತ ಶಿಕ್ಷಕಿ ಒಮ್ಮೆ ಮಕ್ಕಳಿಗೆ ತನ್ನ ಹೆಸರನ್ನು ಬಿಟ್ಟು ಉಳಿದ ಎಲ್ಲ ಮಿತ್ರರ ಹೆಸರನ್ನು ನೋಟ್ ಬುಕ್ಕಿನಲ್ಲಿ ಬರೆಯಲು ಹೇಳಿದರು. ಹಾಗೆಯೇ ಪ್ರತಿಯೊಂದು ಹೆಸರಿನ ಬದಿಗೆ ಸ್ವಲ್ಪ ಜಾಗವನ್ನು ಬಿಡಲು ಹೇಳಿದರು. ಆ ಬಿಟ್ಟ ಜಾಗದಲ್ಲಿ ಸಂಬಂಧಪಟ್ಟ ವಿದ್ಯಾರ್ಥಿಯ ಒಂದು ಒಳ್ಳೆಯ ಗುಣವನ್ನು ನಮೂದಿಸಲು ಹೇಳಿದರು. ಮಕ್ಕಳಿಗೆ ಈ ಒಂದು ಉಪಕ್ರಮವು ತುಂಬಾ ನಾವಿನ್ಯಪೂರ್ಣವೆನಿಸಿ ಅಭಿರುಚಿಯಿಂದ ಆಕ್ಟಿವಿಟಿ ಮಾಡುವಾಗ ಮುಂದಿನ ಶಾಲೆಯ ಸಮಯವೆಲ್ಲ ಇದರಲ್ಲಿಯೇ ಖರ್ಚಾಯಿತು.

ಆ ಶನಿವಾರ ಶಿಕ್ಷಕಿ ಬೇರೊಂದು ಪೇಜ್ ಮೇಲೆ ಪ್ರತಿಯೊಂದು ವಿದ್ಯಾರ್ಥಿಯ ಹೆಸರು ಮತ್ತು ಅದರ ಮುಂದೆ ಬರೆದ ಒಳ್ಳೆಯ ಗುಣವನ್ನು ಮತ್ತೊಮ್ಮೆ ಬರೆದುಕೊಂಡರು. ಸೋಮವಾರ ಕ್ಲಾಸಿನಲ್ಲಿ ಹೋದನಂತರ ಪ್ರತಿಯೊಂದು ವಿದ್ಯಾರ್ಥಿಗೆ ಆ ಕಾಗದವನ್ನು ಕೊಟ್ಟರು. ಸ್ವಲ್ಪ ಸಮಯದ ನಂತರ ಪ್ರತಿಯೊಂದು ವಿದ್ಯಾರ್ಥಿಯ ಮುಖದ ಮೇಲೆ ಹಾಸ್ಯ ತೇಲಾಡತೊಡಗಿತ್ತು. ಪ್ರತಿಯೊಂದು ವಿದ್ಯಾರ್ಥಿ ಖುಷಿಯಲ್ಲಿದ್ದ. ‘ಆದರೆ ಸ್ವತಃ ನನಗೆ ಗೊತ್ತಿರಲಿಲ್ಲ ನಾನು ಇನ್ನೊಬ್ಬರಿಗೆ ಇಷ್ಟೊಂದು ಇಷ್ಟವಾಗಿದ್ದೇನೆ ಅಂತ’ ಅನಿಸುತ್ತಿತ್ತು.

ಅಲ್ಲಿ ಬರೆದಿರತಕ್ಕಂತ ಒಳ್ಳೆಯ ವಿಚಾರಗಳು ಇಷ್ಟೊಂದು ಸಕಾರಾತ್ಮಕ ಹಾಗೂ ಹೊಗಳಿಕೆಗೆ ಪಾತ್ರವಿರುವದನ್ನು ನೋಡಿ ನಾನು ಇನ್ನೊಬ್ಬರಿಗೆ ಇಷ್ಟೊಂದು ಮಹತ್ವದ ವ್ಯಕ್ತಿ ಆಗಿದ್ದೇನೆಯೇ? ಎಂದೆನಿಸಿತು.

ಆನಂತರ ಮುಂದೆ ಎಂದಿಗೂ ಆ ಪೇಪರ್ ಚರ್ಚೆ ಯಾವತ್ತು ಆಗಲೇ ಇಲ್ಲ. ಗುರುಗಳಿಗೂ ಸಹಿತ ಈ ವಿಷಯದ ಮೇಲೆ ಮಕ್ಕಳು ತಮ್ಮತಮ್ಮಲ್ಲೇ ಚರ್ಚೆ ಮಾಡಿದರು ಅಥವಾ ಇಲ್ಲ ಎಂಬುದು ಸಹಿತ ಗೊತ್ತಾಗಲಿಲ್ಲ. ಈ ವಿಷಯದ ಬಗ್ಗೆ ಪೋಷಕರ ಜೊತೆಗೆ ಮಕ್ಕಳು ಚರ್ಚೆ ಮಾಡಿದರು ಅಥವಾ ಇಲ್ಲ ಎಂಬುದು ಸಹಿತ ಗೊತ್ತಾಗಲಿಲ್ಲ. ಆದರೆ ಶಿಕ್ಷಕಿಯು ಮಾಡಿದ ಉದ್ದೇಶ ಮಾತ್ರ ಸಾಧ್ಯವಾಗಿತ್ತು. ಇದರಿಂದ ಮಕ್ಕಳು ಮಾತ್ರ ಪ್ರಚಂಡ ಖುಷಿಯಲ್ಲಿದ್ದರು. ಆ ವರ್ಗ ಹಾಗೆ ಮುಂದೆ ಹೋಯಿತು. ಆ B ಕ್ಲಾಸಿನಲ್ಲಿಯ ವಿದ್ಯಾರ್ಥಿಗಳು ಮುಂದೆ ಯಾರು ಡಾಕ್ಟರ್, ಯಾರು ವಕೀಲ, ಯಾರು ಸೈನ್ಯದಲ್ಲಿ, ಯಾರು ಇಂಜಿನಿಯರ್ ಹೀಗೆ ಅನೇಕ ದೊಡ್ಡ ದೊಡ್ಡ ಪದವಿಗಳಲ್ಲಿ ಕೆಲಸಕ್ಕೆ ಸೇರಿದರು.

ಅದರಲ್ಲಿಯೇ ಒಬ್ಬ ಮನೋಜ್ ಈತ ಸೈನ್ಯದಲ್ಲಿ ಸೇರಿದ. ಮನೋಜ್ ನು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ. ಸುದ್ದಿ ಗೊತ್ತಾಗಿ ಶಿಕ್ಷಕಿಯು ಮನೋಜನ ಅಂತ್ಯಸಂಸ್ಕಾರಕ್ಕೆ ಹೋಗಿದ್ದರು. ಇದಕ್ಕೂ ಮೊದಲು ಆ ಶಿಕ್ಷಕಿಯು ಯಾವುದೇ ಸೈನಿಕರ ಅಂತ್ಯಸಂಸ್ಕಾರಕ್ಕೆ ಹೋಗಿರಲಿಲ್ಲ. ಜನರು ತುಂಬಾ ನೆರೆದಿದ್ದರು. ಹುತಾತ್ಮನಾದ ಮನೋಜನ ಮುಖದ ಮೇಲೆ ಮಾತ್ರ ನಿರ್ವಿಕಾರವಾದ ಶಾಂತಿ, ಸಮಾಧಾನ ಕಂಡುಬರುತ್ತಿತ್ತು.

ಅಂತ್ಯಸಂಸ್ಕಾರಕ್ಕೆ ಬಂದ ಪ್ರತಿಯೊಂದು ವ್ಯಕ್ತಿ ಮನೋಜನಿಗೆ ಕೊನೆಯ ನಮನವನ್ನು ಸಲ್ಲಿಸುತ್ತಿದ್ದರು. ಶಿಕ್ಷಕಿಯು ಸಹಿತ ಮನೋಜನಿಗೆ ಎಲ್ಲರ ನಂತರ ಕೊನೆಗೆ ತನ್ನ ನಮನಗಳನ್ನು ಸಲ್ಲಿಸಿದರು. ಅಷ್ಟರಲ್ಲಿ ಒಬ್ಬ ಸೈನಿಕ ಅವರ ಹತ್ತಿರ ಬಂದು ಹೇಳಿದ, ನೀವು ಮನೋಜನ ಗಣಿತದ ಶಿಕ್ಷಕರಾಗಿದ್ದೀರಾ? ಎಂದು ಕೇಳಿದಾಗ ಟೀಚರ್ ಹೌದು ಎಂದು ತಲೆಯಲ್ಲಾಡಿಸಿದರು. ಆಗ ಸೈನಿಕ ಹೇಳುತ್ತಾನೆ ಮನೋಜನು ನಿಮ್ಮ ಬಗ್ಗೆ ತುಂಬಾ ತುಂಬಾ ಹೇಳುತ್ತಿದ್ದನು.

ಅಂತ್ಯಸಂಸ್ಕಾರವಾದ ನಂತರ ಮನೋಜನ ವರ್ಗ ಮಿತ್ರರು ಮತ್ತು ಅವರ ಪೋಷಕರು ಈ ಶಿಕ್ಷಕಿಯ ಬಗ್ಗೆ ಮಾತನಾಡಲು ಉತ್ಸುಕರಾಗಿದ್ದರು. ಆಗ ಮನೋಜನ ತಾಯಿ ಶಿಕ್ಷಕಿಯ ಹತ್ತಿರ ಬಂದು ಹೇಳುತ್ತಾರೆ, ನಿಮಗೆ ಒಂದು ಚೀಟಿಯನ್ನು ಕೊಡುವುದಿದೆ ಎಂದು ಹೇಳಿ ಮನೋಜನ ಹತ್ತಿರ ದೊರೆತ ಚೀಟಿಯನ್ನು ಶಿಕ್ಷಕಿಗೆ ಕೊಟ್ಟರು. ಆ ಚೀಟಿ ಅನೇಕ ಸಲ ತೆರೆದು ಮುಚ್ಚಿ ಫೋಲ್ಡ್ ಮಾಡಿ ತುಂಬಾ ಸವೆದು ಹೋಗಿತ್ತು. ಆ ಚೀಟಿಯನ್ನು ನೋಡುತ್ತಲೇ ಶಿಕ್ಷಕಿಗೆ ಆ ಕಾಗದ ಯಾವುದು ಅಂತ ಗೊತ್ತಾಯ್ತು. ಅನೇಕ ವರ್ಷಗಳ ಹಿಂದೆ ಸಹಜವಾಗಿ ಶಾಲೆಯಲ್ಲಿ ತೆಗೆದುಕೊಂಡ ಉಪಕ್ರಮದ ಚೀಟಿಯಾಗಿತ್ತು.

ಮನೋಜನ ತಂದೆ ಹೇಳಿದರು ‘ಗುರುಗಳೇ ನಾವು ನಿಮಗೆ ತುಂಬಾ ಋಣಿಯಾಗಿದ್ದೇವೆ. ಮಕ್ಕಳ ಕಡೆಯಿಂದ ಧನಾತ್ಮಕವಾದ ಉಪಕ್ರಮವನ್ನು ನೀವು ತೆಗೆದುಕೊಂಡಿದ್ದೀರಿ. ನೀವು ಎಂದೋ ತೆಗೆದುಕೊಂಡ ಉಪಕ್ರಮದ ಕಾಗದವನ್ನು ಮನೋಜನು ತನ್ನ ಜೀವನವಿಡೀ ಜೋಪಾನವಾಗಿಟ್ಟುಕೊಂಡು ಬಂದಿದ್ದನು’. ಇಷ್ಟು ಹೇಳುವಾಗ ಸಾವಕಾಶವಾಗಿ ಮನೋಜನ ವರ್ಗ ಮಿತ್ರರು ಈಗ ಶಿಕ್ಷಕಿಯ ಸುತ್ತಲೂ ನೆರೆಯತೊಡಗಿದರು. ಆಗ ದೀಪಕ್ ಹೇಳಿದ ಈ ಕಾಗದ ನನ್ನ ಹತ್ತಿರವೂ ಇನ್ನೂ ಇದೆ. ಅದನ್ನ ನಾನು ನನ್ನ ಕಬರ್ಡ್ ಮೇಲೆ ಅಂಟಿಸಿದ್ದೇನೆ. ಸಂದೀಪನ ಹೆಂಡತಿ ಹೇಳಿದಳು, ಸಂದೀಪನು ಇದನ್ನು ನಮ್ಮ ಮದುವೆಯ ಫೋಟೋಗಳ ಅಲ್ಬಮ್ ನಲ್ಲಿ ಅಂಟಿಸಲು ಹೇಳಿದ್ದ. ಜಾಹ್ನವಿ ಹೇಳಿದಳು ಹೌದು ನನ್ನ ಕಡೆಯೂ ಈ ಕಾಗದವಿದೆ. ಅದನ್ನು ನಾನು ನನ್ನ ಡೈರಿಯಲ್ಲಿ ಜೋಪಾನವಾಗಿ ಇಟ್ಟಿದ್ದೇನೆ ಎಂದಳು. ಅಷ್ಟರಲ್ಲಿ ಅಂಕಿತಾ ತನ್ನ ಪರ್ಸಿನಿಂದ ಕಾಗದವನ್ನು ತೆಗೆಯುತ್ತ ಹೇಳಿದಳು, ಈ ಕಾಗದವನ್ನು ನಾನು ಯಾವತ್ತೂ ನನ್ನ ಹತ್ತಿರವೇ ಇಟ್ಟುಕೊಳ್ಳುತ್ತೇನೆ ನನಗನಿಸುತ್ತೆ ಎಲ್ಲರೂ ಈ ಕಾಗದವನ್ನು ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.

ಅಲ್ಲಿ ನಡೆಯುತ್ತಿರುವುದೆಲ್ಲವನ್ನು ನೋಡಿ ಕೇಳಿ ಶಿಕ್ಷಕಿಯ ಹೃದಯ ತುಂಬಿ ಬಂತು. ಅವರ ಕಣ್ಣಿನಿಂದ ಒಂದೇ ಸಮನೆ ಅಶ್ರುಧಾರೆ ಹರಿಯತೊಡಗಿತ್ತು. ನಾವು ಪರಸ್ಪರರ ದೋಷವನ್ನು ಎಷ್ಟು ಬೇಗ ಹುಡುಕುತ್ತೇವೆಯೋ, ಹಾಗೆಯೇ ಅವರಲ್ಲಿದ್ದ ಒಳ್ಳೆಯ ಗುಣಗಳನ್ನು ನಾವು ಹುಡುಕಬೇಕು. ಬೇರೆಯವರಲ್ಲಿ ಇರತಕ್ಕಂತ ಚಿಕ್ಕಪುಟ್ಟ ಒಳ್ಳೆಯ ಗುಣಗಳು ಕೆಲವರಿಗೆ ಜೀವನವಿಡಿ ಸ್ಪೂರ್ತಿ ಕೊಡುವ ಚಿಲುಮೆ ಆಗುತ್ತದೆ. ಮನೋಜನ ಶಿಕ್ಷಕಿ ಎಂದೋ ತೆಗೆದುಕೊಂಡ ಒಂದು ಉಪಕ್ರಮವನ್ನು ಸ್ವತ: ಶಿಕ್ಷಕಿಯು ಮರೆತಿದ್ದರು ಆದರೆ ಆ ಶಿಕ್ಷಕಿಯ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದಿಗೂ ಮರೆತಿರಲಿಲ್ಲ. ಮಕ್ಕಳಿಗೆ ಏನಾದರೂ ಹೊಸದನ್ನು ಕಲಿಸುವುದಕ್ಕಾಗಿ ತೆಗೆದುಕೊಂಡ ಉಪಕ್ರಮ ಶಿಕ್ಷಕಿ ಒಂದೆರಡು ದಿನದಲ್ಲಿ ಮರೆತರೂ ವಿದ್ಯಾರ್ಥಿಗಳು ಮಾತ್ರ ಮರೆತಿರಲಿಲ್ಲ. ಚಿಕ್ಕವರಿರುವಾಗ ನಾವು ಮಕ್ಕಳ ಮನಸ್ಸಿನಲ್ಲಿ ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ. ವ್ಯಕ್ತಿಯಲ್ಲಿದ್ದ ದುರ್ಗುಣಗಳನ್ನು ದುರ್ಲಕ್ಷಿಸಿ ಒಳ್ಳೆಯ ಗುಣಗಳನ್ನು ಅವಲೋಕಿಸಿ ಅಂತಹ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಸಿ ಕೊಂಡಾಗ ಹುಟ್ಟಿದ ಜೀವನ ಸಾರ್ಥಕವಾಗುವುದು.

ಇಲ್ಲಿ ಒಬ್ಬಳು ಶಿಕ್ಷಕಿ ತನ್ನ ಕರ್ತವ್ಯ ಮತ್ತು ತನ್ನ ಜವಾಬ್ದಾರಿಯ ಒಂದು ಭಾಗವಾಗಿ ಮಕ್ಕಳ ಜೊತೆಗೆ ಏನೋ ಎಂದೋ ಒಂದು ತೆಗೆದುಕೊಂಡ ಚಿಕ್ಕ ಉಪಕ್ರಮ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಂಡು ಆ ಉಪಕ್ರಮದ ಕಾಗದದ ಪುಟವನ್ನು ಜೋಪಾನವಾಗಿಟ್ಟು ಕೊಂಡದ್ದನ್ನು ನೋಡಿದರೆ ಕಲಿಸಿದ ಶಿಕ್ಷಕಿಗೂ ಸಹಿತ ಆಶ್ಚರ್ಯವಾಯಿತು.

ನೂರು ನಮನಗಳು ಆ ಶಿಕ್ಷಕಿಗೆ ಆ ಗುರುವಿಗೆ……