ಜೇನುನೊಣಗಳ ಅವನತಿಯಾದರೆ ಇಡೀ ಮಾನವ ಕುಲಕ್ಕೆ ಕಾದಿದೆ ಅಪಾಯ: ಈ ಸುದ್ದಿ ಓದಿ
ನಮ್ಮ ಜೀವಜಗತ್ತಿನಲ್ಲಿ ಅಸಂಖ್ಯಾತ ಜೀವಿಗಳಿದ್ದು, ಅವುಗಳಲ್ಲಿ ಅನೇಕ ಜೀವಿಗಳು ಈಗಾಗಲೇ ಅಳಿವಿನಂಚನ್ನು ತಲುಪಿದೆ. ಅಂತಹ ಜೀವಿಗಳ ಪಟ್ಟಿಯಲ್ಲಿ ಅತಿ ಶೀಘ್ರದಲ್ಲೇ ಹೊಸ ಜೀವಿಯೊಂದು ಸೇರ್ಪಡೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಆ ಜೀವಿ ಮತ್ತಾವುದೂ ಅಲ್ಲ, ನಮ್ಮೆಲ್ಲರಿಗೂ ಕೂಡಾ ಸಿಹಿಯಾದ ಜೇನನ್ನು ನೀಡುವ ಜೇನುನೊಣಗಳಾಗಿವೆ. ರಾಯಲ್ ಜಿಯಾಗ್ರಫಿ ಸೊಸೈಟಿ ಆಫ್ ಲಂಡನ್ ಸಭೆಯಲ್ಲಿ ಅರ್ಥ್ ವಾಚ್ ಸಂಸ್ಥೆಯು ಜೇನುನೊಣಗಳನ್ನು ಈ ಭೂಮಿಯ ಮೇಲಿರುವ ಅತ್ಯಂತ ಅಮೂಲ್ಯವಾದ ಜೀವ ಪ್ರಬೇಧವೆಂದು ಪ್ರದೇಶವೆಂದು ಘೋಷಣೆಯನ್ನು ಮಾಡಿದೆ. 2008ರಲ್ಲಿ ದಿ ಗಾರ್ಡಿಯನ್ ಕೂಡ ಇದೇ ಮಾತನ್ನು ಹೇಳಿದೆ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಒಂದು ವೇಳೆ ಜೇನುನೊಣಗಳ ಸಂರಕ್ಷಣೆ ಮಾಡದೆ ಅವುಗಳನ್ನು ಕಣ್ಮರೆ ಮಾಡಿದರೆ ಅದರ ಅರ್ಥ ಮಾನವ ಕುಲಕ್ಕೆ ಅತಿಶೀಘ್ರದಲ್ಲೇ ರಾಯಬಾಗ್ ಎದುರಾಗಲಿದೆ ಎನ್ನಲಾಗುತ್ತಿದೆ. ಮನುಷ್ಯರೇನಾದರೂ ಜೇನುನೊಣಗಳ ಬಗ್ಗೆ ಗಮನವನ್ನು ನೀಡದೆ ಹೋದರೆ ಅತಿಶೀಘ್ರದಲ್ಲೇ ಇವು ಕೂಡ ಅಳಿದು ಹೋದ ಜೀವಿಗಳ ಪಟ್ಟಿಯನ್ನು ಸೇರುವ ಸಾಧ್ಯತೆಗಳು ಇದೆ ಎಂದಿದ್ದಾರೆ ವಿಜ್ಞಾನಿಗಳು. ಜೇನುನೊಣಗಳ ಅವನತಿಯು ಮಾನವ ಕುಲಕ್ಕೆ ಕಂ ಟ ಕ ಪ್ರಕಟವಾಗಲಿದೆ ಎನ್ನುವುದು ಕೂಡಾ ವಾಸ್ತವ ಎನ್ನುತ್ತಾರೆ ವಿಜ್ಞಾನಿಗಳು. ಜೇನುನೊಣಗಳು ಹಾಗೂ ಹೂ ಬಿಡುವ ಸಸ್ಯಗಳ ನಡುವಿನ ಸಂಬಂಧವು ಈ ಭೂಗ್ರಹದ ಮೇಲೆ ವ್ಯಾಪಕ, ಸಾಮರಸ್ಯ ಹಾಗೂ ಪರಸ್ಪರ ಅವಲಂಬಿತವಾಗಿದೆ.
ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ಜೇನುನೊಣಗಳು ಮತ್ತು ಹೂಬಿಡುವ ಸಸ್ಯಗಳ ನಡುವಿನ ಸಾಮರಸ್ಯದಿಂದ ಭೂಗ್ರಹವು ಸಮೃದ್ಧವಾಗಿದ್ದು ಮಾತ್ರವಲ್ಲದೆ, ಭೂಮಿಯ ಮೇಲೆ ಅನ್ಯಜೀವಿಗಳ ಉನ್ನತಿಗೆ ಕೂಡ ಇದು ಕಾರಣವಾಗಿದೆ. ನಮ್ಮ ಭೂಮಿಯ ಮೇಲೆ ಒಟ್ಟು 20, 000 ಪ್ರಜಾತಿಯ ಜೇನುನೊಣಗಳು ಇದ್ದು, ಇವುಗಳಲ್ಲಿ ಬಹುತೇಕ ಗೂಡುಗಳಲ್ಲಿ ವಾಸಿಸುವುದಿಲ್ಲ. ಇನ್ನು ಜೇನುನೊಣಗಳ ಗಾತ್ರವು ಎರಡು ಮಿಲಿಮೀಟರ್ ನಿಂದ ನಾಲ್ಕು ಸೆಂಟಿಮೀಟರ್ ವರೆಗೂ ಇದ್ದು, ಇವು ಹೊಸ ಸಸ್ಯ ಪ್ರಜಾತಿಗಳಿಗೆ ಅನುಗುಣವಾಗಿ ತಮ್ಮನ್ನು ತಾವು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆ.

ನಾವು ದೈನಂದಿನ ಜೀವನದಲ್ಲಿ ಉಪಯೋಗಿಸುವ ಹಣ್ಣು ಮತ್ತು ಬೀಜಗಳ 75% ಉತ್ಪಾದನೆ ಜೇನುನೊಣಗಳ ಪರಾಗಸ್ಪರ್ಶದಿಂದ ಭಾಗಶಃ ಪ್ರಭಾವಿತವಾಗಿರುತ್ತದೆ. ಒಂದು ವರದಿಯ ಪ್ರಕಾರ ವಿಶ್ವದ 87 ಪ್ರಮುಖ ಬೆಳೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಜೇನುನೊಣಗಳ ಪರಾಗಸ್ಪರ್ಶವನ್ನು ಅವಲಂಬಿಸಿದೆ ಎನ್ನಲಾಗಿದೆ. ಸಸ್ಯ ಪ್ರಭೇದಗಳ ವೈವಿಧ್ಯತೆಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಹಾರದ ಮೂಲವಾಗಿರುವ ಹಣ್ಣು, ಬೀಜಗಳ ಉತ್ಪಾದನೆಗೆ ಜೇನುನೊಣಗಳೇ ಪ್ರಮುಖ ಮೂಲವಾಗಿದೆ. ಐಎಫ್ಎ ವರದಿಯ ಪ್ರಕಾರ ಜೇನುನೊಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಕೋಕೋ, ಕಾಫಿ, ಬಾದಾಮಿ, ಸೇಬು ಮತ್ತು ಟಮೊಟೋ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿದೆ.
ಪರಾಗಸ್ಪರ್ಶದ ಮೇಲೆ ನೇರವಾಗಿ ಅವಲಂಬಿತವಾಗಿರುವ ಜಾಗತಿಕ ಬೆಳೆಗಳ ಒಟ್ಟು ಮೌಲ್ಯವು 235 ಬಿಲಿಯನ್ ಡಾಲರ್ ಗಳಿಂದ 575 ಮಿಲಿಯನ್ ಡಾಲರ್ ಗಳವರೆಗೆ ಇದ್ದು, ಇಷ್ಟು ದೊಡ್ಡ ಮೊತ್ತದ ಅನುಕೂಲವನ್ನು ಜೇನುನೊಣಗಳು ನಮಗೆ ಉಚಿತವಾಗಿ ನೀಡುತ್ತಿರುವುದನ್ನು ಪರಿಗಣಿಸಿ ಅವುಗಳ ರಕ್ಷಣೆಯನ್ನು ಮಾಡಬೇಕಾಗಿದೆ. ಇಲ್ಲದೇ ಹೋದರೆ ಜಾಗತಿಕ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದು ಖಚಿತ. ಜಾಗತೀಕರಣದಿಂದ ಇತರ ಪ್ರದೇಶಗಳ ಕೀಟಗಳು ಹಾಗೂ ರೋ ಗ ಕಾರಕಗಳಿಂದಲೂ ಕೂಡ ಜೇನು ನೊಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದಲ್ಲದೇ ಜೇನುನೊಣಗಳ ಅವಸಾನದಲ್ಲಿ ಮೊಬೈಲ್ ದೂರವಾಣಿಗಳು ಇಂದ ಉತ್ಪತ್ತಿಯಾಗುವ ತರಂಗಗಳು ಕೂಡ ಒಂದು ಕಾರಣವಾಗಿದೆ ಎನ್ನಲಾಗಿದೆ.

ಕೃಷಿಯಲ್ಲಿ ಉಪಯೋಗವಾಗುವ ರಾಸಾಯನಿಕಗಳ ಕಾರಣದಿಂದಲೂ ಜೇನುನೊಣಗಳ ಸಂತತಿಯು ಕಡಿಮೆಯಾಗುತ್ತಿದೆ ಎನ್ನಲಾಗಿದ್ದು, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯ ಮೇಲೆ ಕಡಿವಾಣವನ್ನು ಹಾಕಬೇಕಿದೆ. ಶೀಘ್ರದಲ್ಲೇ ಜೇನುನೊಣಗಳ ಸಂರಕ್ಷಣೆಗೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಜೇನುನೊಣಗಳ ಸಂತತಿಯ ಅವನತಿಯು ಸಂಭವಿಸಿ ಇದು ಖಚಿತವಾಗಿ ಇಡೀ ಮಾನವ ಕುಲಕ್ಕೆ ದೊಡ್ಡ ಸಮಸ್ಯೆಯನ್ನು ತಂದೊಡ್ಡುವುದು ನಿಶ್ಚಿತ ಎಂದೇ ಹೇಳಬಹುದು.