ಆಕಾಶದಲ್ಲಿ ‘ಏಲಿಯನ್’ ಹಾರುವುದನ್ನು ಕಂಡು ಬೆಚ್ಚಿ ಬಿದ್ದ ಜನ; ಕೆಳಗೆ ಕುಸಿದ ನಂತರ ಗೊತ್ತಾಯಿತು…

ಅನೇಕ ವರ್ಷಗಳಿಂದಲೂ ಮಾನವನಿಗೆ ಒಂದು ಪ್ರಶ್ನೆ ಕಾಡುತ್ತಿದೆ. ಪೃಥ್ವಿಯ ಮೇಲಿರುವ ಮಾನವ ಜೀವಿಯ ಹಾಗೆ ಬೇರೆ ಮತ್ತಾವುದೋ ಗ್ರಹದಲ್ಲಿಯೂ ಮಾನವನ ರೀತಿಯ ಜೀವಿ ಇರಬಹುದಾ ಅಂತ. ಇದಕ್ಕೆ ಆಗಾಗ ಪುಷ್ಟಿ ನೀಡುವಂತಹ ಘಟನೆಗಳು ಜಗತ್ತಿನ ಪಟಲದ ಮೇಲೆ ನಿರಂತರವಾಗಿ ಸಮಯ ಸಮಯಕ್ಕೆ ಆಗುತ್ತಲೇ ಇರುವ ಸುದ್ದಿಗಳು ಮೀಡಿಯಾಗಳಲ್ಲಿ ಬರುತ್ತಲೇ ಇರುತ್ತವೆ. ಮತ್ತು ನಾವು ತುಂಬಾ ಕುತೂಹಲದಿಂದ ಓದುತ್ತ ಇರುತ್ತೇವೆ.

ನೋಯಡಾದ ಭಟ್ ಪಾರಸೋಲ್ ಭಾಗದಲ್ಲಿ ಆಕಸ್ಮಿಕವಾಗಿ ಏಲಿಯನ್ಸ್ ಗೆ ಹೋಲುವಂತಹ ಆಕೃತಿಯೊಂದು ಆಕಾಶದಲ್ಲಿ ಕಾಣಿಸಿದೆ. ಈ ಆಕೃತಿಯನ್ನು ನೋಡಿದ ಜನ ಒಮ್ಮೆಲೆ ಕುತೂಹಲದಿಂದ ಒಂದುಗೂಡಿದ್ದಾರೆ. ಈ ಆಕೃತಿಯು ತುಂಬಾ ಸಮಯದವರೆಗೆ ಆಕಾಶದಲ್ಲಿ ತೆಲಾಡಿದ ನಂತರ ಭೂಮಿಯ ಮೇಲೆ ಬಿದ್ದಿದೆ. ಆಕಾಶದಲ್ಲಿ ಇರುವಾಗಲೇ ಜನ ಈ ಆಕೃತಿಯ ಬಗ್ಗೆ ಅನೇಕ ರೀತಿಯ ತರ್ಕವಿತರ್ಕಗಳನ್ನು ಹಚ್ಚಿದ್ದಾರೆ. ಸುದ್ದಿ ಪೊಲೀಸರಿಗೆ ಮುಟ್ಟಿದ ನಂತರ ಅವರು ಅದರ ಹತ್ತಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು.

ಸ್ವಲ್ಪ ಸಮಯದ ನಂತರ ವಿಚಾರ ವಿಮರ್ಶೆಗಳನ್ನು ಮಾಡಿದ ಮೇಲೆ ಗೊತ್ತಾಯಿತು ಆ ಆಕೃತಿ ಏಲಿಯನ್ಸ್ ಇರದೆ ಏಲಿಯನ್ಸ್ ಆಕೃತಿಯ ಹವೆ ತುಂಬಿದ ದೊಡ್ಡ ಬಲೂನು ಇದ್ದದ್ದು. ಆಗ ಅಲ್ಲಿ ನೆರೆದಿದ್ದ ಜನರ ಭಯ ದೂರವಾಗಿದೆ. ಅದಕ್ಕೂ ಮೊದಲು ಅದು ಬೇರೆ ಗ್ರಹದ ನಿವಾಸಿಯಾದ ಏಲಿಯನ್ಸ್ ಅಥವಾ ರೋಬೋಟ್ ಇದೆ ಎಂದು ಪೊಲೀಸರು ಸಹ ಅದರ ಹತ್ತಿರ ಹೋಗಲು ಹಿಂದೆ ಮುಂದೆ ತುಳಿಯುತ್ತಿದ್ದರು.

ತುಂಬಾ ಹೊತ್ತಿನವರೆಗೆ ನಿರ್ಮಾಣವಾಗಿತ್ತು ಗೊಂದಲ…

ಇದು ಬಲೂನು ಭೂಮಿಯ ಮೇಲೆ ಬೀಳುವ ಮುನ್ನ ಮರದ ರೆಂಬೆಯಲ್ಲಿ ಸಿಲುಕಿ ಹಾಕಿಕೊಂಡಿತ್ತು. ಅದರ ತಲೆ ಸತತವಾಗಿ ಅಲುಗಾಡುತ್ತಿತ್ತು. ಈ ದೃಶ್ಯದಿಂದಾಗಿ ಜನರು ಹೆದರುತ್ತಿದ್ದರು. ಇದೇ ಏಲಿಯನ್ ಇರಬಹುದೆಂಬ ಭಯದಿಂದಾಗಿ ಜನರು ಬಿಡಿ, ಪೊಲೀಸರು ಅದರ ಸಮೀಪ ಹೋಗಲು ಹೆದರುತ್ತಿದ್ದರು. ಕೊನೆಗೆ ಎಲ್ಲವೂ ಸ್ಪಷ್ಟವಾದ ನಂತರ ನೋಯ್ಡಾ ಪೊಲೀಸ್ ರು ಈ ಏಲಿಯನ್ಸ್ ರೀತಿ ಕಾಣುವ ಬಲೂನಿನ ಫೋಟೋ ಶೇರ್ ಮಾಡುತ್ತ ಟ್ವೀಟ್ ಮಾಡಿದ್ದಾರೆ.