Video; ಅಗರಬತ್ತಿ ಹಚ್ಹೋ ವಯಸ್ಸಲ್ಲಿ ತಾತನ ಸಿಗ#ರೇಟ್ ಹಚ್ಹೋ ಸ್ಟೈಲ್ ಒಮ್ಮೆ ನೋಡಿ; ಲೆಜೆಂಡ್ ಅಲ್ಲ ಅಲ್ಟ್ರಾ ಲೆಜೆಂಡ್ ಎನ್ನುವಿರಿ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳು ಇಂಟರ್ನೆಟ್ ಯೂಸರ್ ಗಳಿಗೆ ಅನೇಕ ಅಚ್ಚರಿಯ ದೃಶ್ಯಗಳನ್ನು ತೋರಿಸುತ್ತದೆ. ಸಾಮಾಜಿಕ ಜಾಲತಾಣಗಳಿಂದಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆದ ತುಂಬಾ ವಿಚಿತ್ರ ಹಾಗೂ ರೋಚಕ ದೃಶ್ಯಗಳು ನೋಡಲು ಸಿಗುತ್ತವೆ.
ಈ ಜಗತ್ತಿನಲ್ಲಿ ಅನೇಕ ರೀತಿಯ, ಅನೇಕ ನಮೂನೆಯ ಜನರು ನೋಡಲು ಸಿಗುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿ ಜೀವನ ನಡೆಸುವ ಕೌಶಲ್ಯ, ಪದ್ಧತಿ ಬೇರೆಯೇ ಆಗಿರುತ್ತದೆ. ಅವರ ಒಂದೊಂದು ಸ್ಟೈಲ್ ಗಳನ್ನು ನೋಡಿದಾಗ ಸುಮ್ಮನೆ ಕುಳಿತಾಗಲೂ ಅವರ ನೆನಪು ಆದರೆ ಆಯ್ತು ಅಲ್ಲಿಯೇ ನಗು ಬರಲು ಶುರು ಆಗುತ್ತದೆ. ಸದ್ಯ ನಿಮಗೆ ಇದೇ ರೀತಿಯ ಒಂದು ಅಪರೂಪದ ವ್ಯಕ್ತಿಯನ್ನು ಭೇಟಿ ಮಾಡಿಸಲಿದ್ದೇವೆ. ಈ ವ್ಯಕ್ತಿಯ ಸ್ಟೈಲ್ ನೋಡಿದ ನಂತರ ನೀವು ಈ ಸೀನ್ ಮರೆಯಲಿಕ್ಕೆ ಸಾಧ್ಯವಿಲ್ಲ.
ಸದ್ಯ ಇಲ್ಲಿ ನೋಡಲಿರುವ ವ್ಯಕ್ತಿ ತುಂಬಾ ಯೂನಿಕ್ ಆಗಿದ್ದಾನೆ. ಈತನೇ ಬೇರೆ ಈತನ ಸ್ಟೈಲೇ ಬೇರೆಯಾಗಿದೆ. ಮಧ್ಯ ವಯಸ್ಸು ದಾಟಿದ ಈ ವ್ಯಕ್ತಿಯ ಯೂನಿಕ್ ಸ್ಟೈಲ್ ರಜನಿಕಾಂತ್ ಅವರ ನೆನಪು ತರಿಸುತ್ತದೆ. ಚಲನಚಿತ್ರಗಳಲ್ಲಿ ರಜನಿಕಾಂತ್ ಅವರ ಸಿಗರೇಟ್ ಹೊತ್ತಿಸುವ ಸ್ಟೈಲ್ ತುಂಬಾ ಫೇಮಸ್ ಆಗಿತ್ತು. ಈ ವ್ಯಕ್ತಿಯು ಸಹ ತುಂಬಾ ಯೂನಿಕ್ ಸ್ಟೈಲ್ ಲ್ಲಿ ಸಿಗರೇಟ್ ಹೊತ್ತಿಸುತ್ತಿದ್ದಾನೆ. ಕೆಲವೊಬ್ಬರು ಈ ಕೆಲಸವನ್ನು ಮಾಡಬೇಕಾದರೆ ಮ್ಯಾಚ್ ಬಾಕ್ಸ್ ನ್ನೇ ಖಾಲಿ ಮಾಡುತ್ತಾರೆ, ಆದರೆ ಸಿಗರೇಟ್ ಹೊತ್ತಿಸುವುದಾಗುವುದಿಲ್ಲ. ಈ ಮನುಷ್ಯ ಮಾತ್ರ ತನ್ನ ಕೆಲಸದಲ್ಲಿ ಎಷ್ಟೊಂದು ಪರಿಣಿತಿ ಸಾಧಿಸಿದ್ದಾನೆ ಎಂಬುದನ್ನು ನೋಡಿ.
ನೋಡಿ ಈ ವಿಡಿಯೋ…
View this post on Instagram
ಈ ವಿಶೇಷ ವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ filter_less_memes ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 4.3 ಮಿಲಿಯನ್ ಗಳ ವರೆಗೆ ವೀಕ್ಷಣೆಯನ್ನು ಪಡೆದಿದ್ದು ಸುಮಾರು 2 ಲಕ್ಷ 43 ಸಾವಿರ ಜನರ ಮೆಚ್ಚುಗೆಯನ್ನು ಪಡೆದಿದೆ.
ಪ್ರಸ್ತುತ ದೃಶ್ಯವನ್ನು ನೋಡಿ ನೆಟ್ಟಿಗರು ತುಂಬಾ ಇಂಪ್ರೆಸ್ ಆಗಿ ಸಾಕಷ್ಟು ಜನರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ತನ್ನ ಪ್ರತಿಕ್ರಿಯೆಯಲ್ಲಿ ಒಬ್ಬ ನೆಟ್ಟಿಗ ” ಏನ್ ತಾತ, ಅಗರಬತ್ತಿ ಹಚ್ಚುವ ವಯಸ್ಸಿನಲ್ಲಿ ಇದೆಲ್ಲ ಬೇಕಾ” ಎಂದಿದ್ದಾನೆ. ಇದನ್ನು ನೋಡಿದ ಬೇರೊಬ್ಬ ನೆಟ್ಟಿಗ, ” ಈ ತಾತ ಬರೀ ಲೆಜೆಂಡ್ ಅಲ್ಲ ಅಲ್ಟ್ರಾ ಲಿಜೆಂಡ್” ಎಂದು ಕಮೆಂಟ್ ಮಾಡಿದ್ದಾನೆ.