Articles

Video: ಈ ವೈಲ್ಡ್ ಫೋಟೋಗ್ರಾಫರ್ ನ ಪರಸ್ಥಿತಿ ಮುಂದೆ ಏನಾಗಿರಬಹುದು ಎಂಬುದು ವಿಡಿಯೋ ನೋಡಿದ ಮೇಲೆ ನೀವೇ ಹೇಳಿ…….!!!

ಫೋಟೋಗ್ರಫಿ ಒಂದು ಸುಂದರವಾದ ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಯಾಕೆಂದರೆ ಬರೀ ಬೆಲೆಯುಳ್ಳ ಕ್ಯಾಮೆರಾ ಒಂದಿದ್ದರೆ ಹೇಗೆ ಬೇಕಾದರೂ ಫೋಟೋ ಶೂಟ್ ಮಾಡಬಲ್ಲೆ ಎಂದರೆ ಅದು ಶುದ್ಧ ತಪ್ಪು.

ಹತ್ತಿರ ಬೆಲೆಬಾಳುವ ಪೆನ್ನು ಇದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿ ಒಳ್ಳೆಯ ಲೇಖಕನಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಒಂದು ವ್ಯಕ್ತಿಯ ಹತ್ತಿರ ಬೆಲೆಬಾಳುವ ಕ್ಯಾಮೆರಾ ಮೊಬೈಲ್ ಅಥವಾ ಕ್ಯಾಮೆರಾ ಇದ್ದ ಮಾತ್ರಕ್ಕೆ ಆ ವ್ಯಕ್ತಿ ಒಳ್ಳೆಯ ಫೋಟೋಗ್ರಾಫರ್ ಆಗಲು ಸಾಧ್ಯವಿಲ್ಲ.

ಒಳ್ಳೆಯ ಫೋಟೋಗ್ರಾಫರ್ ಆಗಲು ಅನೇಕ ವೈಶಿಷ್ಟ್ಯಗಳನ್ನು ಕರಗತ ಮಾಡಿಕೊಂಡಿರಬೇಕಾಗುತ್ತದೆ. ಉದಾಹರಣೆಗಾಗಿ ಫೋಟೋಗ್ರಫಿ ಮಾಡುವಾಗ ಪರ್ಫೆಕ್ಟ್ ಎಂಗಲ್ ದ ಆಯ್ಕೆ, ಎಡ್ವಾನ್ಸ್ ಕಲ್ಪನಾ ಶಕ್ತಿ, ಸಂಯಮ, ಇವೆಲ್ಲವುಗಳ ಜೊತೆಗೆ ಎಡಿಟಿಂಗ್ ಜ್ಞಾನವೂ ಸಹಿತ ಇರಬೇಕಾಗುತ್ತದೆ.

ಈಗಿನ ತಾಂತ್ರಿಕ ಯುಗದಲ್ಲಿ ಎಲ್ಲಕ್ಕೂ ಹೆಚ್ಚು ಫೋಟೋ ಶೂಟ್ ಮಾಡುವದು ಅದನ್ನು ಎಡಿಟ್ ಮಾಡುವದು ಸಾಮಾನ್ಯವಾಗಿ ಎಲ್ಲರಿಗೂ ಸ್ವಲ್ಪವಾದರು ಜ್ಞಾನ ಇದ್ದೆ ಇರುತ್ತದೆ. ಆದರೆ ಅದರಲ್ಲಿ ವೈಲ್ಡ್ ಫೋಟೋಗ್ರಾಫರ್ ಆಗುವದು ಅಂತೂ ತುಂಬಾನೇ ಕಠಿಣವಾದ ಕೆಲಸ. ಏಕೆಂದರೆ ಭ#ಯಂಕರವಾದ ಪ್ರಾಣಿಗಳ ಎದುರಿಗೆ ಹೋಗಿ ಅವುಗಳ ಕೃತ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯುವದು ಅಷ್ಟೊಂದು ಸರಳವಾದ ಕಾಯಕವಲ್ಲ. ಪ್ರಾಣಿಗಳು ಯಾವಾಗ ಏನು ಮಾಡುತ್ತವೆ ಎಂಬುದು ಯಾರಿಗೂ ಹೇಳಕ್ಕಾಗಲ್ಲ. ಹೀಗಾಗಿ ತನ್ನ ಪ್ರಾಣದ ಪಕ್ಷಿಯನ್ನು ಕೈಯಲ್ಲಿ ಹಿಡಿದುಕೊಂಡು ಕಾಡಿನಲ್ಲಿರುವ ವಿವಿಧ ಪ್ರಾಣಿಗಳ ಚಿತ್ರೀಕರಣ ಮಾಡಬೇಕಾಗುತ್ತದೆ.

ಸದ್ಯಕ್ಕೆ ಒಬ್ಬ ವೈಲ್ಡ್ ಫೋಟೋಗ್ರಾಫರ್ ನ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು, ಒಬ್ಬ ವೈಲ್ಡ್ ಫೋಟೋಗ್ರಾಫರ್ ಕಾಡಿನಲ್ಲಿಯ ಪ್ರಾಣಿಗಳ ಫೋಟೋ ಸೆರೆ ಹಿಡಿಯುವ ಸಲುವಾಗಿ ವಾಹನದ ಮುಂದೆ ಒಂದು ಖುರ್ಚಿಯನ್ನು ಕಟ್ಟಿಕೊಂಡು ಅದರ ಮೇಲೆ ಕುಳಿತು ಫೋಟೋ ತಗೆಯುತ್ತಿರುತ್ತಾನೆ. ಆದರೆ ಅಷ್ಟರಲ್ಲಿ ಏನೋ ಒಂದು ಸಮಸ್ಯೆ ಉಂಟಾಗಿ ಅದರ ಕುರಿತು ವಾಹನದಲ್ಲಿದ್ದ ವ್ಯಕ್ತಿಗಳನ್ನು ಕೇಳಲು ತನ್ನ ಮುಖವನ್ನು ಹಿಂದೆ ಮಾಡಿರುತ್ತಾನೆ. ಅಷ್ಟರಲ್ಲಿ ಅವನ ಸಾ#ವೆ ಅವನ ಹತ್ತಿರ ಬರುತ್ತದೆ. ಅಂದರೆ ಅಷ್ಟರಲ್ಲಿ ಅವನ ಬಳಿಯಲ್ಲಿ ಸಾವಕಾಶವಾಗಿ ಸಿಂಹ ಬರುತ್ತದೆ. ಈ ದೃಶ್ಯವನ್ನು ಮತ್ತೊಬ್ಬ ವೈಲ್ಡ್ ಫೋಟೋಗ್ರಾಫರ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಆದರೆ ಆ ಫೋಟೋಗ್ರಾಫರ್ ಮರಳಿ ಸಿಂಹಕ್ಕೆ ನೋಡಿದಾಗ ಅಲ್ಲಿ ಮುಂದೇನಾಗಿರಬಹುದು ಎಂಬುದು ನೀವೇ ಊಹಿಸಿ ಹೇಳಬೇಕು. ಏಕೆಂದರೆ ಈ ವಿಡಿಯೋದಲ್ಲಿ ಮುಂದಿನ ದೃಶ್ಯ ತೋರಿಸಿಲ್ಲ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್.ಮುಖಾಂತರ ಶೇರ್ ಮಾಡಿದ್ದಾರೆ.

Leave a Comment

Your email address will not be published. Required fields are marked *