ಅಬ್ಬಾ! ವಿಚ್ಛೇದನೆಯ ನಂತರವೂ ‘ಇಷ್ಟೊಂದು’ ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ ಅಮೀರ್ ಖಾನ್ ಪತ್ನಿ ಕಿರಣ್ ರಾವ್!
ಪ್ರಸಿದ್ಧ ನಟ ಮತ್ತು ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾಗಿರುವ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಇತ್ತೀಚೆಗೆ ಇಬ್ಬರು ಸಹಮತಿಯಿಂದಲೇ ದೂರವಾದರು. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ತುಂಬಾ ಚರ್ಚೆಯನ್ನು ಹುಟ್ಟುಹಾಕಿತು. ಇವರಿಬ್ಬರ ವಿಚ್ಛೇದನೆಗೆ ಸಂಬಂಧಿಸಿದಂತೆ ಧರ್ಮ, ಹಣ, ಪ್ರಸಿದ್ಧಿ ಮತ್ತು ಮಾನವೀಯತೆಗೆ ಸಂಬಂಧಿಸಿದಂತೆ ವಿವಿಧ ಅಂಶಗಳ ಮೇಲೆ ಎಲ್ಲರೂ ತಮ್ಮ ತಮ್ಮ ವಿಚಾರಗಳನ್ನು ಮೀಡಿಯಾಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್ ನ ಆದರ್ಶ ದಂಪತಿಗಳು ಎಂದೇ ಇವರ ಕಡೆಗೆ ನೋಡಲಾಗುತ್ತಿತ್ತು. ಅನೇಕ ಸಾಮಾಜಿಕ ಕಾರ್ಯಗಳಲ್ಲಿ, ಸಂದರ್ಶನಗಳಲ್ಲಿ ಇಬ್ಬರು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಕೆಲಸವನ್ನು ಇಬ್ಬರು ನಗುನಗುತ್ತಲೇ ಕೂಡಿಕೊಂಡು ಮಾಡುವುದರಿಂದ ಇವರು ತೆಗೆದುಕೊಂಡ ನಿರ್ಣಯ ಎಲ್ಲರಿಗೂ ಒಂದು ರೀತಿಯಲ್ಲಿ ಶಾಕ್ ನೀಡಿದೆ.
ಅಮೀರ್ ಖಾನರ ಇದು ಎರಡನೆಯ ವಿಚ್ಛೇದನೆಯಾಗಿದೆ. ಇವರು ಮೊದಲ ಹೆಂಡತಿ ರೀನಾ ದತ್ ಹಾಗೂ ಎರಡನೇ ಹೆಂಡತಿ ಕಿರಣ್ ರಾವ್ ಅವರ ಜೊತೆಗೆ 15-15 ವರ್ಷಗಳ ಸಂಸಾರ ಮಾಡಿದರು.

ಅಮೀರ್ ಖಾನ್ ತಮ್ಮ ನಟನೆಯ ಮುಖಾಂತರ ಎಷ್ಟೇ ಪ್ರಸಿದ್ಧಿ ಪಡೆದರೂ ಮತ್ತು ಶ್ರೀಮಂತವಿದ್ದರೂ ಕಿರಣ್ ರಾವ್ ಮಾತ್ರ ಅವರ ಮೇಲೆ ಅವಲಂಬಿಸಿಲ್ಲ. ಅವರ ಹೆಂಡತಿಯಾಗಿ 15 ವರ್ಷ ಸಂಸಾರ ಮಾಡಿದರೂ ಕಿರಣ್ ರಾವ್ ಅವರು ತಮ್ಮದೇ ಆದ ಒಂದು ಸ್ವತಂತ್ರ ಸ್ಟೇಟಸ್ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರು ಸಹ ತಮ್ಮ ವ್ಯವಸಾಯದಲ್ಲಿ ಹಣದ ಜೊತೆಗೆ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಉತ್ತಮ ಲೇಖಕಿ, ನಿರ್ದೇಶನ ಮಾಡುವುದರ ಜೊತೆಗೆ ಒಳ್ಳೆಯ ನಿರ್ಮಾಪಕಿಯೂ ಆಗಿದ್ದಾರೆ. 2020 ರ ವರೆಗೆ ಅವರು 143 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ. ಅಮೀರ್ ಖಾನ್ ಅವರಿಗೆ ಹೋಲಿಸಿದರೆ ಇವರ ಸಂಪತ್ತು ಸ್ವಲ್ಪ ಕಡಿಮೆ ಅನ್ನಿಸಬಹುದು. ಕಾರಣ ಅಮೀರ್ ಖಾನ್ ಅವರು 1434 ಕೋಟಿ ರೂಪಾಯಿಗಳ ಮಾಲೀಕರಾಗಿದ್ದಾರೆ. ಇವರು ಒಂದು ಚಿತ್ರಕ್ಕಾಗಿ 85 ಕೋಟಿ ರೂಪಾಯಿಗಳಷ್ಟು ಸಂಬಳ ತೆಗೆದುಕೊಳ್ಳುತ್ತಾರೆ.
ಕಿರಣ್ ರಾವ್ ಅವರು ಇಲ್ಲಿಯವರೆಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದರ ಜೊತೆಗೆ ಅನೇಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಾರೆ. ಹೀಗಾಗಿ ಇವರು ಯಾರ ಮೇಲೂ ಅವಲಂಬಿಸಿ ಕುಳಿತಿಲ್ಲ.