ಅಮಿತಾಬ್ ಬಚ್ಚನ್ ಅಪಾರ ಸಂಪತ್ತಿನ ಒಡೆಯ, ಆದರೂ ಅವರ ಕಿರಿಯ ಸಹೋದರ ಮಾತ್ರ ಈಗಲೂ ಕಡು ಬಡತನದಲ್ಲಿ ಜೀವನ ದೂಡುತ್ತಿದ್ದಾರೆ!
ಅಮಿತಾಭ್ ಬಚ್ಚನ್ ಬಾಲಿವುಡ್ ನಲ್ಲಿಯ ಎಲ್ಲಕ್ಕೂ ದೊಡ್ಡ ಹೆಸರು ಮತ್ತು ಎಲ್ಲರಿಗೂ ಚಿರಪರಿಚಿತ ವ್ಯಕ್ತಿ. ಅವರ ಧ್ವನಿ, ಮಾತನಾಡುವ ಶೈಲಿ, ಅವರು ಲೀಲಾಜಾಲವಾಗಿ ಮಾಡುವ ಅಭಿನಯ ಕೌಶಲ್ಯ ಎಲ್ಲವೂ ರಸಿಕರಿಗೆ ಮೋಡಿ ಮಾಡುವಂಥದ್ದು. ವಯಸ್ಸು 80 ಕ್ಕೆ ಸಮೀಪಿಸುತ್ತಿದ್ದರೂ ಇವರ ಕಲೆಗೆ ಸ್ಪರ್ಧೆ ನೀಡುವಂತಹ ಕಲಾಕಾರ ಇನ್ನೊಬ್ಬ ಇಲ್ಲವೇ ಎನ್ನಬಹುದು. ಇಡೀ ಜಗತ್ತಿನ ತುಂಬಾ ಅಮಿತಾಬ್ ಅವರ ಅಭಿಮಾನಿಗಳು ಇದ್ದಾರೆ. ಈ ವಯಸ್ಸಿನಲ್ಲಿಯೂ ಅಮಿತಾಬ್ ಅವರು ತುಂಬಾ ಬಿಜಿ ಸ್ಟಾರ್ ಆಗಿದ್ದಾರೆ. ಅವರ ಉತ್ಸಾಹವನ್ನು ನೋಡಿ ಯುವಕರು ಸಹ ನಾಚಬೇಕು.
ಚಿತ್ರಜಗತ್ತಿನ ತಮ್ಮ ಜೀವನದಲ್ಲಿ ಅಮಿತಾಬ್ ಅವರು ಅನೇಕ ಏರುಪೇರುಗಳನ್ನು ಕಂಡು ಅವುಗಳಿಗೆ ಫೇಸ್ ಮಾಡಿ ಮೇಲಕ್ಕೆ ಏರಿ ಬಂದವರು. ಒಂದು ಸಮಯದಲ್ಲಿ ಆರ್ಥಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು. ಅಲ್ಲಿಂದ ಮತ್ತೆ ಫಿನಿಕ್ಸ್ ಜಿಗಿತ ಹೊಡೆದು ಈಗ ಮತ್ತೆ ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಇಲ್ಲಿಯವರೆಗೆ ಸುಮಾರು ಎರಡು ನೂರು ಚಿತ್ರಗಳಲ್ಲಿ ನಟಿಸಿ ಬಾಲಿವುಡ್ನಲ್ಲಿ ಲಿಮಿಟ್ ಲೇಸ್ ಪ್ರಸಿದ್ಧಿ ಮತ್ತು ಸಂಪತ್ತನ್ನು ಗಳಿಸಿದ್ದಾರೆ.

ಇವರು ಇಷ್ಟೆಲ್ಲ ಶ್ರೀಮಂತರಿದ್ದರೂ ಇವರ ಕುಟುಂಬದಲ್ಲಿಯ ಒಂದು ವ್ಯಕ್ತಿ ಪ್ರಸಿದ್ಧಿ ಮತ್ತು ಸಂಪತ್ತು ಇಲ್ಲದೆ ಬಡತನದ ಜೀವನವನ್ನು ಕಳೆಯುತ್ತಿದ್ದಾರೆ. ಇಂತಹ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರೂ ಈ ವ್ಯಕ್ತಿಯು ಮಾತ್ರ ತುಂಬಾ ಬಡತನದ ಜೀವನವನ್ನು ಜೀವಿಸುತ್ತಿದ್ದಾರೆ. ಯಾರಿದ್ದಾರೆ ಈ ವ್ಯಕ್ತಿ ಎನ್ನುತ್ತೀರಾ? ಹಾಗಾದರೆ ಓದಿ…
ಅಮಿತಾಬ್ ಅವರ ಸೋದರ ಸಂಬಂಧಿ ಅನೂಪ್ ರಾಮಚಂದ್ರರೇ ಆ ವ್ಯಕ್ತಿ. ಅಮಿತಾಬ್ ತಂದೆಯ ಸೋದರ ಮಗ ಮತ್ತು ಅಮಿತಾಭ್ ಕುಟುಂಬ ಇಬ್ಬರಲ್ಲೂ ತುಂಬಾ ಸಮೀಪದ ಸಂಬಂಧವಿತ್ತು. ನಂತರದ ದಿನಗಳಲ್ಲಿ ಯಾವ ಕಾರಣದಿಂದ ಗೊತ್ತಿಲ್ಲ ಈ ಎರಡು ಕುಟುಂಬಗಳು ದೂರ ದೂರವಾದವು.
ಅನೂಪ್ ರಾಮಚಂದ್ರ ಇವರ ಕುಟುಂಬವು ಸಹ ಮೊದಲು ಶ್ರೀಮಂತವಾಗಿಯೇ ಇತ್ತು. ಆದರೆ ದಿನಗಳೆದಂತೆ ಇವರು ಬಡತನದಲ್ಲಿ ಜೀವಿಸತೊಡಗಿದರು. ಅಮಿತಾಬ್ ಮತ್ತು ಅನೂಪ್ ಇವರಿಬ್ಬರಲ್ಲಿ ಪಿತ್ರಾರ್ಜಿತ ಆಸ್ತಿಗಾಗಿ ವಾದಗಳು ನಡೆದಿವೆ. ಸದ್ಯ ಅನೂಪ್ ಅವರ ಕುಟುಂಬ ಕಟಗರ್ ನಲ್ಲಿರುವ ಅಮಿತಾಬ್ ಅವರ ಮನೆಯಲ್ಲಿ ವಾಸಿಸುತ್ತಾರೆ. ಅನೂಪ್ ಅವರ ಪ್ರಕಾರ ಈ ಮನೆಯು ಪಿತ್ರಾರ್ಜಿತ ಆಸ್ತಿಯಾಗಿದೆ ಎಂದು ಹೇಳುತ್ತಾರೆ. ಇದೇ ಮನೆಯ ಕಾರಣದಿಂದಾಗಿ ಅನೂಪ್ ಮತ್ತು ಅಮಿತಾಬ್ ಅವರ ಮಧ್ಯೆ ವಾದಗಳು ನಡೆದಿವೆ.

ಈ ಮೇಲಿನ ಕಾರಣದಿಂದಲೇ ಅನೂಪ್ ಅವರು ಅಭಿಷೇಕ್ ಅವರ ಮದುವೆಗೂ ಸಹ ಬಂದಿರಲಿಲ್ಲ. ಆಗ ಅನೂಪ್ ಅವರು ಮೀಡಿಯಾದಲ್ಲಿ ಮದುವೆಗೆ ಹೋಗಲು ನಮ್ಮ ಹತ್ತಿರ ಹಣವಿಲ್ಲವೆಂದು ಹೇಳಿದ್ದರು. ಮೀಡಿಯಾ ರಿಪೋರ್ಟ್ ಗಳ ಪ್ರಕಾರ ಅಮಿತಾಬ್ ಮತ್ತು ಅನೂಪ್ ಅವರ ವಾದಕ್ಕೆ ಪಿತ್ರಾರ್ಜಿತ ಆಸ್ತಿ ಕಾರಣವಾಗಿದೆಯೆಂದು ಹೇಳುತ್ತಿದ್ದರು ನಿಜವಾದ ಕಾರಣ ಏನೆಂಬುದು ಗೊತ್ತಾಗಿಲ್ಲ.