Video; ಕೊಳೆಯಾದ ಬಟ್ಟೆಗಳಲ್ಲಿ ತಮ್ಮದೇ ಉಡುಗೆಯನ್ನು ಪರ್ಫೆಕ್ಟ್ ಆಗಿ ಗುರುತಿಸುವುದು ಹೇಗೆ? ಈ ಟ್ರಿಕ್ ಹೇಳಿದ್ದಾರೆ ಅಶ್ವಿನ್…
ಸೋಶಿಯಲ್ ಮೀಡಿಯಾದಲ್ಲಿ ಆಟದ ಮೈದಾನದಿಂದ ಅನೇಕ ವಿಶೇಷ ಹಾಗೂ ವಿಚಿತ್ರ ವಿಡಿಯೋಗಳು ಶೇರ್ ಆಗುತ್ತದೆ. ಇಂಥ ವಿಡಿಯೋಗಳಲ್ಲಿ ಆಟಗಾರರು ಸಹಜವಾಗಿ ವರ್ತಿಸಿದ ಕೆಲವೊಂದು ದೃಶ್ಯಗಳು ನಂತರ ನೋಡಲು ತುಂಬಾ ಮುಜುಗರವನ್ನು ಉಂಟು ಮಾಡುತ್ತವೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆ ಶೇರ್ ಮಾಡಿದರೆ ಸಾಕು ವೈರಲ್ ಆಗುವುದು ಖಚಿತ.
ಅನೇಕ ಸಲ ಆಟಗಾರರು ತಮಗೆ ತಿಳಿಯದಂತೆ ತುಂಬಾ ವಿಚಿತ್ರವಾಗಿ ವರ್ತಿಸುತ್ತಾರೆ. ಸದ್ಯ ಎಲ್ಲಿ ನೋಡಿದಲ್ಲಿ ಕ್ಯಾಮೆರಾ ಯುಗ ಇದೆ. ಹೀಗಾಗಿ ಬಾಹ್ಯ ಜಗತ್ತಿನಲ್ಲಿ ಫೇಮಸ್ ಆಟಗಾರರ ಪ್ರತಿಯೊಂದು ಆಕ್ಟಿವಿಟೀಸ್ ಗಳು ಎಲ್ಲಿಯಾದರೂ ಸೆರೆ ಆಗುತ್ತಲೇ ಇರುತ್ತವೆ.
ಹೀಗೆ ಒಂದು ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದ ದೃಶ್ಯದಲ್ಲಿ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಕಾಮೆಂಟೆಟರ್ ರೋಹಿತ್ ಶರ್ಮಾ ಅವರ ಸಂದರ್ಶನ ತೆಗೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರ ಹಿಂದೆ ಭಾರತದ ಗ್ರೇಟ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಒಂದು ಕೃತಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರವಿಚಂದ್ರನ್ ಅಶ್ವಿನ್ ಅವರು ಇಲ್ಲಿ ತಮ್ಮ ಜರ್ಸಿಯನ್ನು ಚೆಕ್ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ರವಿಚಂದ್ರನ್ ಅಶ್ವಿನ್ ಅವರು ಬಟ್ಟೆಯ ಮೂಸಿ ನೋಡುತ್ತಾರೆ. ಅವರ ಕೈಯಲ್ಲಿ ಎರಡು ಜರ್ಸಿಗಳಿವೆ. ಅಶ್ವಿನ್ ಅವರು ಒಂದೊಂದಾಗಿ ಎರಡು ಜರ್ಸಿಗಳ ವಾಸನೆಯನ್ನು ನೋಡಿ ಅದರಲ್ಲಿಯ ಒಂದು ಜರ್ಸಿ, ಅಲ್ಲಿಯೇ ಬಿಸಾಕಿ ಹೋಗುತ್ತಾರೆ. ಇದರ ಮೇಲಿಂದ ನೆಟ್ಟಿಗರು ರವಿಚಂದ್ರನ್ ಅಶ್ವಿನ್ ಅವರ ಈ ದೃಶ್ಯ ನೋಡಿ ಒಂದು ಕಿವಿಮಾತು ಹೇಳಿದ್ದಾರೆ.
ಅದೇನೆಂದರೆ, ಕೊಳೆಯಾದ ಬಟ್ಟೆಗಳಲ್ಲಿ ನಿಮ್ಮ ಬಟ್ಟೆಗಳನ್ನು ಹೇಗೆ ಗುರುತಿಸಿಕೊಳ್ಳಬೇಕು ಎಂದರೆ ಅಶ್ವಿನ್ ಅವರು ಹೇಳಿದ ಈ ಟ್ರಿಕ್ಸ್ ಉಪಯೋಗಿಸಿ ಎಂದು ಕಮೆಂಟ್ ನಲ್ಲಿ ಸಲಹೆ ನೀಡಿದ್ದಾರೆ.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ suresh.mann.77 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದ್ದು ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.