Avatar 2: ಇದೂವರೆಗಿನ ಎಲಕ್ಕೂ ದುಬಾರಿ ಚಿತ್ರಪಟ! ಅಂಡರ್ ವಾಟರ್ ಶೂಟ್ ಮಾಡುವ ಸಲುವಾಗಿ ತಗುಲಿತು ಇಷ್ಟೊಂದು ವೆಚ್ಚ!

ಸುಮಾರು ಒಂದು ದಶಕದ ನಂತರ ಅಂದರೆ ಹತ್ತು ವರ್ಷಗಳ ನಂತರ ಜೇಮ್ಸ್ ಕ್ಯಾಮೆರುನ್ ದಿಗ್ದರ್ಶನದ ಅವತಾರ ಭಾಗ 2 ಈ ಚಿತ್ರಪಟ ಇಂದು ಪ್ರದರ್ಶನ ವಾಗಲಿದೆ. ಬಹುನಿರೀಕ್ಷಿತವಾದ ಈ ಚಿತ್ರ ಸಂಪೂರ್ಣವಾಗಿ ನೀರಲ್ಲಿಯೇ ಶೂಟ್ ಮಾಡಲಾಗಿದೆ ಎಂ ಹೀಗಾಗಿ ಈ ಚಿತ್ರಪಟ ಎಲ್ಲೆಡೆಗೆ ಚರ್ಚೆಗೆ ಗುರಿಯಾಗಿದೆ. ಈ ಒಂದು ಚಿತ್ರಪಟ ಶೂಟ್ ಮಾಡುವ ಸಲುವಾಗಿ ಮತ್ತು ಅನಿಮೇಷನ್, ವಿ ಎಫ್ ಎಕ್ಸ್ ಹಾಗೂ ಆಕ್ಷನ್ ಗಳಿಂದ ಪರಿಪೂರ್ಣವಾಗಿದ್ದ ಈ ಚಿತ್ರ ಸಂಪೂರ್ಣವಾಗಿ ಪರದೆಯ ಮೇಲೆ ತರಲು ಇದಕ್ಕೆ ತಗುಲಿದ ವೆಚ್ಚ ಅಷ್ಟಿಷ್ಟಲ್ಲ, ಇದುವರೆಗೆ ಎಲ್ಲಕ್ಕೂ ವೆಚ್ಚ ತಗಲಿದ ಅಂದರೆ ದುಬಾರಿ ಚಿತ್ರಪಟ ಎಂದು ಅವತಾರ ಭಾಗ 2 ನ್ನು ಘೋಷಣೆ ಮಾಡಲಾಗಿದೆ. ಈ ಚಿತ್ರಕ್ಕೆ ಸುಮಾರು 250 ದಶಲಕ್ಷ ಡಾಲರ್ಸ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 1900 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವರದಿಯ ಮುಖಾಂತರ ತಿಳಿದು ಬಂದಿದೆ. ಈ ಒಂದು ಅದ್ಭುತವಾದ ಬಜೆಟ್ ನಿಂದಾಗಿ ಈ ಸಿರಿಜ್ ಎಲ್ಲಕ್ಕಿಂತ ದುಬಾರಿ ಫ್ರೆಂಚಾಯಿಜಿ ಆಗಿದೆ.

7 ವರ್ಷಗಳಿಂದ ರೀಲಿಜ ತಡೆಗಟ್ಟಲಾಗಿತ್ತು….

2009 ರಲ್ಲಿ ಅವತಾರ ರೀಲಿಜ ಮಾಡುವ ಮುನ್ನ ಚಿತ್ರಪಟದ ನಿರ್ದೇಶಕರು ಒಂದು ವಿಚಾರವನ್ನು ಜಾಹೀರು ಪಡಿಸಿದರು. ಅದೇನೆಂದರೆ ಮೊದಲನೆಯ ಅವತಾರ ಯಶಸ್ಸು ಕಂಡರೆ ಅದರ ಮುಂದಿನ ಭಾಗ ಮಾಡುವೆ ಎಂದು ಹೇಳಿದ್ದರು. ತದನಂತರ ಅವತಾರದ ರೆಕಾರ್ಡ್ ಬ್ರೇಕ್ ಗಳಿಕೆಯ ನಂತರ 2010 ರಲ್ಲಿ ಅದರ ಮುಂದಿನ ಭಾಗದ ಕುರಿತು ಘೋಷಣೆ ಮಾಡಿದ್ದರು. ಅವತಾರ-2 ಈ ಚಿತ್ರಪಟ 2014 ರಲ್ಲಿ ತೆರೆಕಾಣುವದಿತ್ತು. ಆದರೆ ಅದರ ಪ್ರಿ-ಪ್ರೋಡೆಕ್ಷನ್ ದಿಂದಾಗಿ 7 ವರ್ಷಗಳ ನಂತರ ಅಂದರೆ 2022 ರಲ್ಲಿ ತೆರೆ ಕಾಣುವದಿದೆ.

ಚಿತ್ರದ ಮುಂದುವರಿದ ಭಾಗ ಯಾವಾಗ ಬಿಡುಗಡೆಯಾಗಲಿದೆ?

ಅವತಾರ-2 ರ ರೀಲಿಜ ಡೇಟ್ ಸತತವಾಗಿ 8 ವೇಳೆ ಮುಂದೋಡಿಸಲಾಗಿ ಕೊನೆಗೆ 16 ಡಿಸೆಂಬರ್ 2022 ಅಂದರೆ ಇಂದು ಈ ಚಿತ್ರ ಸಿನಿಮಾ ಥಿಯೇಟರ್ ಗಳಲ್ಲಿ ತೆರೆ ಕಾಣಲಿದೆ. ಇದಲ್ಲದೆ ಅವತಾರ-3 ಈ ಭಾಗ 20 ಡಿಸೆಂಬರ್ 2024 ರಂದು, ಅವತಾರ-4 ಈ ಭಾಗ 18 ಡಿಸೆಂಬರ್ 2026 ರಂದು ಮತ್ತು ಅವತಾರ-5 ಈ ಭಾಗ 22 ಡಿಸೆಂಬರ್ 2028 ರಂದು ಪ್ರದರ್ಶನ ವಾಗಲಿದೆ. ಈ ಚಿತ್ರಪಟದ ಪ್ರದರ್ಶನಕ್ಕೂ ಮುಂಚೆ ಅಂದರೆ ಮುಂದಿನ ಭಾಗಗಳ ಶೀರ್ಷಿಕೆಯನ್ನು ಬದಲಾವಣೆ ಮಾಡಲಾಗುವದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ಸಿನಿಮಾವನ್ನು 2D, 3D, 3DMX, 4D ಯಲ್ಲಿ ಥಿಯೇಟರ್ ನಲ್ಲಿ ನೋಡಲು ಲಭ್ಯವಿದೆ ಹಾಗಾಗಿ ನೀವು ಸಹ ನೋಡಿ ಚಿತ್ರಪಟ ಹೇಗಿದೆ ಅಂತ ಕಾಮೆಂಟ್ ತಿಳಿಸಿ.