BAN vs PAK 3rd T20I : ಗೆಲ್ಲಲು 8 ರನ್ ಗಳು ಬೇಕಾದಾಗ 3 ವಿಕೆಟ್ಸ್ ಗಳನ್ನು ಕೈಚೆಲ್ಲಿದ ಪಾಕ್! ಅಕ್ಷರಶಃ ನೀರುಗಾಯಿ ಹಣ್ಣುಗಾಯಿ ಮಾಡಿದ ಬಾಂಗ್ಲಾ.

ಬಾಂಗ್ಲಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡಕ್ಕೆ ಮೂರನೇ ಟಿ 20 ಪಂದ್ಯ ಗೆಲ್ಲಬೇಕಾದರೆ ಸಾಕುಸಾಕಾಯಿತು.

ವರ್ಲ್ಡ್ ಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವು ತೋರಿಸಿದ ಉತ್ತಮ ಪ್ರದರ್ಶನ ಬಾಂಗ್ಲಾದೇಶದಲ್ಲಿಯೂ ಮುಂದುವರಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಸರಣಿಯಲ್ಲಿ ಪಾಕಿಸ್ತಾನವು 3-0 ಅಂತರದಿಂದ ಬಾಂಗ್ಲಾದೇಶಕ್ಕೆ ಮಣಿಸಿದರೂ ಅತಿಥಿ ತಂಡ ಪಾಕಿಸ್ತಾನವು ಗೆಲುವಿಗಾಗಿ ತುಂಬಾ ಸಂಘರ್ಷ ಮಾಡಬೇಕಾಯಿತು. ಮೂರನೇ ಪಂದ್ಯದಲ್ಲಿ ಪಾಕಿಸ್ತಾನವು ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿದರೂ ಪಂದ್ಯ ಮಾತ್ರ ತುಂಬಾ ರೋಮಾಂಚನದಲ್ಲಿ ಮುಕ್ತಾಯಗೊಂಡಿತು. ಬಾಂಗ್ಲಾ ತಂಡಕ್ಕೆ ಈ ಪಂದ್ಯದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಯಿತು. ಬಾಂಗ್ಲಾದೇಶ ತಂಡ ನೀಡಿದ ಒಂದು 125 ರನ್ನುಗಳ ಗುರಿ ಮುಟ್ಟುವ ಸಲುವಾಗಿ ಕೊನೆಯ ಬಾಲ್ ವರೆಗೆ ಪಾಕಿಸ್ತಾನವು ಸಂಘರ್ಷಿಸಬೇಕಾಯಿತು. ಕೊನೆಯ ಓವರ್ ನಲ್ಲಿ ಪಾಕಿಸ್ತಾನಕ್ಕೆ ಗೆಲುವಿಗಾಗಿ 8 ರನ್ ಗಳ ಅವಶ್ಯಕತೆಯಿದ್ದಾಗ ಬಾಂಗ್ಲಾ ತಂಡದ ನಾಯಕ ಮಹಮ್ಮದುಲ್ಲಾ ಮೂರು ವಿಕೆಟ್ ಗಳನ್ನು ಪಡೆದು ಪಾಕಿಸ್ತಾನಕ್ಕೆ ಅಕ್ಷರಶಃ ನೀರುಗಾಯಿ ಹಣ್ಣುಗಾಯಿ ಮಾಡಿದರು.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು 7 ವಿಕೆಟ್ ನಷ್ಟಕ್ಕೆ 124 ರನ್ ಸೇರಿಸಿದರು. ಇದರಲ್ಲಿ ಮೊಹಮ್ಮದ್ ನಯಿಮ್ 2 ಸಿಕ್ಸ್ ಮತ್ತು 2 ಫೋರ್ ಗಳ ಸಹಾಯದಿಂದ 47 ರನ್ ಗಳ ಬಿರುಸಿನ ಆಟ ಆಡಿದರು. ಇವರಿಗೆ ಶಮೀಮ್ ಹುಸೇನ್ (22) ಮತ್ತು ಅಫೀಫ್ ಹುಸೇನ್ (20) ಒಳ್ಳೆಯ ಜೊತೆ ನೀಡಿದರು.

ಪಾಕಿಸ್ತಾನದ ವತಿಯಿಂದ ಮೊಹಮ್ಮದ್ ವಾಸಿಮ್ ಹಾಗೂ ಉಸ್ಮಾನ್ ಕಾದೀರ್ ಎರಡೆರದು ವಿಕೆಟ್ ಪಡೆದರು. ನಾಯಕ ಬಾಬರ್ ಆಜಮ್ ಬರೀ 19 ರನ್ಗಳನ್ನು ಕಲೆಹಾಕಿದರು. ಮೊಮ್ಮದ್ ರಿಜ್ವಾನ್ ಮತ್ತು ಹೈದರ್ ಅಲಿ ಅನುಕ್ರಮವಾಗಿ 40 ಮತ್ತು 45 ರನ್ಗಳನ್ನು ಕಲೆಹಾಕಿದರು. ಆದರೆ ಇವರು ಸ್ವಲ್ಪ ನಿಧಾನವಾಗಿ ರನ್ನುಗಳನ್ನು ಸೇರಿಸಿದ ಕಾರಣ ಪಾಕಿಸ್ತಾನಕ್ಕೆ ಕೊನೆಯ ಓವರ್ ನಲ್ಲಿ 8 ರನ್ ಗಳ ಅವಶ್ಯಕತೆ ಬಿದ್ದಿತು.

6 ಬಾಲ್ ಗಳಲ್ಲಿ 8 ರನ್ಗಳನ್ನು ತೆಗೆಯುವಾಗ ಪಾಕಿಸ್ತಾನ ತಂಡವು ತುಂಬಾ ಪ್ರೆಶರ್ ನಲ್ಲಿ ಬಂದಿತ್ತು. ಮೊಹಮ್ಮದುಲ್ಲಾ ತಮ್ಮ ಮೊದಲ ಬಾಲ್ ನಲ್ಲಿ ಯಾವುದೇ ರನ್ ನೀಡಲಿಲ್ಲ. ತದನಂತರ ಸತತ ಎರಡು ಚೆಂಡುಗಳಲ್ಲಿ ಸರ್ಫರಾಜ್ ಅಹ್ಮದ್ ಮತ್ತು ಹೈದರ್ ಅಲಿ ಇಬ್ಬರ ವಿಕೆಟ್ ಕಿತ್ತುವಲ್ಲಿ ಮೊಹಮ್ಮದುಲ್ಲಾ ಯಶಸ್ವಿಯಾದರು. ಇದರಿಂದ ಪಂದ್ಯದಲ್ಲಿ ಒಮ್ಮೆಲೆ ರೋಮಾಂಚನ ಹುಟ್ಟಿತು. ನಾಲ್ಕನೇ ಬಾಲ್ ನಲ್ಲಿ ಇಫ್ತಿಕಾರ್ ಅಹಮದ್ ಸಿಕ್ಸ್ ಬಾರಿಸಿ ಪಾಕಿಸ್ತಾನದ ಮೇಲಿನ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡುವಲ್ಲಿ ಯಶಸ್ವಿಯಾದರು. ಆದರೆ ನೆಕ್ಸ್ಟ್ ಬಾಲ್ ನಲ್ಲಿ ಮೊಹಮ್ಮದುಲ್ಲಾ ಇಫ್ತಿಕಾರ್ ಅಹಮದ್ ಅವರ ವಿಕೆಟ್ ಕಿತ್ತರು. ಕೊನೆಯ ಬಾಲ್ ನಲ್ಲಿ ಗೆಲ್ಲಲು ಎರಡೇ ಎರಡು ರನ್ನುಗಳು ಬೇಕಾಗಿರುವಾಗ ಮೊಮ್ಮದ್ ನವಾಜ್ ಫೋರ್ ಹೊಡೆದು ಪಾಕಿಸ್ತಾನಕ್ಕೆ ವಿಜಯದ ಕೇಕೆ ಹಾಕುವಂತೆ ಮಾಡಿದರು. ಆಗ ನಾಯಕ ಬಾಬರ್ ಸಹಿತ ಪಾಕಿಸ್ತಾನ ತಂಡವು ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.