ಹೀಗೆ ಆದರೆ ನಿಮ್ಮನ್ನು ಇಂಗ್ಲೆಂಡ್ ಪ್ರವಾಸದಿಂದ ಕೈ ಬಿಡಲಾಗುವುದು : ಭಾರತೀಯ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂಗ್ಲೆಂಡ್ ಗೆ ಭೇಟಿ ನೀಡುವ ಆಟಗಾರರಿಗೆ ಕಠಿಣ ಸೂಚನೆಗಳನ್ನು ನೀಡಿದೆ. ಇಂಗ್ಲೆಂಡ್ ಗೆ ತೆರಳುವ ಮೊದಲು ಆಟಗಾರನು ಪಾಸಿಟಿವ್ ಬಂದರೆ ಅವರನ್ನು ತಂಡದಿಂದ ಕೈಬಿಡಲಾಗುವುದು ಎಂದು ಮಂಡಳಿ ಹೇಳಿದೆ. ಮುಂಬೈ ತಲುಪುವ ಮುಂಚಿತವಾಗಿ ಎಲ್ಲಾ ಆಟಗಾರರು ತೀವ್ರ ಕಾಳಜಿವಹಿಸಬೇಕು ಮತ್ತು ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಳ್ಳಬೇಕು ಎಂದು ತಂಡದ ಫಿಸಿಯೋ ಯೋಗೇಶ್ ಪರ್ಮಾರ್ ಆಟಗಾರರಿಗೆ ಕಠಿಣ ಸೂಚನೆಗಳನ್ನು ನೀಡಿದ್ದಾರೆ.
ಟೀಮ್ ಇಂಡಿಯಾ ಮೇ 19 ರಿಂದ ಮುಂಬೈನಲ್ಲಿ ಬಯೋ ಬಬಲ್ ಪ್ರವೇಶಿಸಬಹುದು. ಇದರ ನಂತರ ವಿರಾಟ್ ಕೊಹ್ಲಿ ಅವರ ತಂಡವು ಇಂಗ್ಲೆಂಡ್ ತಲುಪಿದ ನಂತರ 10 ದಿನಗಳವರೆಗೆ ಕ್ವಾರಂಟೈನ್ ಇರಬೇಕಾಗುತ್ತದೆ. ಬಯೋ ಬಬಲ್ ನಲ್ಲಿ ಒಮ್ಮೆ ಪ್ರವೇಶವಾದರೆ ಆತ ತಂಡವನ್ನು ಬಿಟ್ಟು ಮತ್ತೆಲ್ಲೂ ಹೋಗುವ ಹಾಗಿಲ್ಲ.
ಹೋಟೆಲ್ ಪ್ರವೇಶಿಸಿದ ಕೂಡಲೇ ಕರೋನಾ ಚೆಕ್ ಮಾಡಲಾಗುತ್ತದೆ :
ಭಾರತೀಯ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಬಯೊ ಬಬಲ್ ಪ್ರವೇಶಿಸಿದ ಮೊದಲ ದಿನ ಕರೋನಾ ಪರೀಕ್ಷೆಗೆ ಒಳಗಾಗುತ್ತಾರೆ. ಇದರೊಂದಿಗೆ ಆಟಗಾರರಿಗಾಗಿ ವಿಶೇಷ ಬಯೋ-ಬಬಲ್ ರಚಿಸಲು ಬಿಸಿಸಿಐ ಬಯಸಿದೆ. ಯಾಕೆಂದರೆ ಪ್ರವಾಸಕ್ಕೆ ಹೋಗುವ 20 ಆಟಗಾರರು ದೇಶದ ವಿವಿಧ ರಾಜ್ಯಗಳವರು ಮತ್ತು ಕರೋನಾಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಪರಿಸ್ಥಿತಿ ವಿಭಿನ್ನವಾಗಿದೆ.

ಯಾವುದೇ ಆಟಗಾರನಿಗೆ ಪ್ರತ್ಯೇಕವಾಗಿ ಚಾರ್ಟರ್ಡ್ ವಿಮಾನಗಳಿಲ್ಲ :
ಮುಂಬೈಯಲ್ಲಿ ಕರೋನಾ ಪಾಸಿಟಿವ್ಗೆ ಬಂದರೆ ಯಾವುದೇ ಆಟಗಾರನಿಗೆ ಪ್ರತ್ಯೇಕ ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಇರುವುದಿಲ್ಲ ಎಂದು ಆಟಗಾರರಿಗೆ ತಿಳಿಸಲಾಗಿದೆ. ಬೋರ್ಡ್ ಈಗಾಗಲೇ ಆಟಗಾರರಿಗೆ ಈ ಬಗ್ಗೆ ಸೂಚನೆ ನೀಡಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಎಲ್ 2021 ರಲ್ಲಿ ಕರೋನಾ ಪ್ರಕರಣ ಬೆಳಕಿಗೆ ಬಂದಾಗಿನಿಂದ ಮಂಡಳಿಯು ಎಂದಿಗಿಂತಲೂ ಹೆಚ್ಚು ಜಾಗರೂಕವಾಗಿದೆ.
ಇಂಗ್ಲೆಂಡ್ ಗೆ ತೆರಳುವ ಮೊದಲು ಎರಡು ಸಲ ನೆಗೆಟಿವ್ ಬರಲೇಬೇಕು :
ಅಧಿಕಾರಿ ಪ್ರಕಾರ, ಆಟಗಾರರೊಂದಿಗೆ ಅವರ ಕುಟುಂಬಗಳ ಟೆಸ್ಟ್ ಕೂಡ ನಡೆಸಲಾಗುವುದು. ಮುಂಬೈನಿಂದ ಇಂಗ್ಲೆಂಡ್ ಗೆ ತೆರಳುವ ಮೊದಲು ಆಟಗಾರರು ಎರಡು ಸಲ ಟೆಸ್ಟ್ ಮಾಡಿಸಿಕೊಂಡು, ಎರಡೂ ಸಲ ನೆಗೆಟಿವ್ ಬರಬೇಕು. ಇದರಿಂದ ಅವರು ಸೋಂಕಿಲ್ಲದೆ ಬಯೊ ಬಬಲ್ ಗೆ ಬಂದಿದ್ದಾರೆ ಎಂದು ನಮಗೆ ಖಚಿತವಾಗಬೇಕು.
ಕೋವಿಶೀಲ್ಡ್ ಅನ್ನು ಮಾತ್ರ ತಗೆದುಕೊಳ್ಳಲು ಮಂಡಳಿಯು ಸೂಚನೆ ನೀಡಿದೆ :
ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಅನ್ನು ಮಾತ್ರ ತೆಗೆದುಕೊಳ್ಳುವಂತೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವ ಆಟಗಾರರಿಗೆ ಮಂಡಳಿ ಸೂಚನೆ ನೀಡಿದೆ. ಲಸಿಕೆಯ ಎರಡನೇ ಡೋಸ್ ಗಾಗಿ ಮಂಡಳಿಯು ಇಂಗ್ಲೆಂಡ್ ನೊಂದಿಗೆ ಸಂಪರ್ಕದಲ್ಲಿದೆ. ವಾಸ್ತವವಾಗಿ ಆಸ್ಟ್ರೋಜೆನಾ ಲಸಿಕೆ ಇಂಗ್ಲೆಂಡ್ನಲ್ಲಿ ಲಭ್ಯವಿದೆ, ಇದು ಕೋವಿಶೀಲ್ಡ್ ನ ಇನ್ನೊಂದು ಲಸಿಕೆಯಾಗಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ಆಟಗಾರರು ಅಸ್ಟ್ರಾಜೆನೆಕಾವನ್ನು ಎರಡನೇ ಡೋಸ್ ಆಗಿ ತಗೆದುಕೊಳ್ಳಲು ಬಿಸಿಸಿಐ ವ್ಯವಸ್ಥೆ ಮಾಡುತ್ತಿದೆ.

ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ ಮತ್ತು ಉಮೇಶ್ ಯಾದವ್ ಮೊದಲಾದ ಆಟಗಾರರು ಮೊದಲ ಡೋಸ್ ತೆಗೆದುಕೊಂಡಿದ್ದಾರೆ. ಯಾರದಾದರೂ ಊರಲ್ಲಿ ಲಸಿಕೆ ಲಭ್ಯವಿಲ್ಲದಿದ್ದರೆ ನಮ್ಮನ್ನು ಕೇಳಿ ಎಂದು ಮಂಡಳಿ ಹೇಳಿದೆ. ಮಂಡಳಿಯು ಅವರಿಗೆ ಲಸಿಕೆ ನೀಡಲಿದೆ.
ಜೂನ್ 18 ರಿಂದ ನಡೆಯಲಿರುವ ಮೊದಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಎದುರಿಸಲಿದೆ. ಪಂದ್ಯವು ಜೂನ್ 18 ರಿಂದ ಜೂನ್ 22 ರವರೆಗೆ ಸೌತಾಂಪ್ಟನ್ ನಲ್ಲಿ ನಡೆಯಲಿದೆ. ಇದರ ನಂತರ ಟೀಮ್ ಇಂಡಿಯಾ ಯುಕೆಯಲ್ಲಿ ಸುಮಾರು ಒಂದೂವರೆ ತಿಂಗಳು ಕಳೆಯಬೇಕಾಗಿದೆ. ಆಗಸ್ಟ್ 4 ರಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.
ಬಿಸಿಸಿಐ ಜೈವಿಕ ಬಯೊ ಬಬಲ್ ರಚಿಸುತ್ತದೆ :
ಭಾರತೀಯ ಪುರುಷರ ತಂಡ ಮತ್ತು ಮಹಿಳಾ ತಂಡವೂ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಮಹಿಳಾ ತಂಡವು ಜೂನ್ 16 ರಿಂದ ಜುಲೈ 15 ರವರೆಗೆ ಇಂಗ್ಲೆಂಡ್ನಲ್ಲಿ 1 ಟೆಸ್ಟ್, 3 ಏಕದಿನ ಮತ್ತು 3 ಟಿ 20 ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ಇಂಗ್ಲೆಂಡ್ನಲ್ಲಿ ಬಯೋ ಸೆಕ್ಯೂರ್ ಬಬಲ್ಗಾಗಿ ಸ್ವತಃ ತಯಾರಿ ಆರಂಭಿಸಿದೆ. ಬಿಸಿಸಿಐ ಪ್ರಸ್ತುತ ಯುಕೆ ಸರ್ಕಾರದಿಂದ 14 ದಿನಗಳ ಕಟ್ಟುನಿಟ್ಟಿನ ಕ್ಯಾರೆಂಟೈನ್ ನಿಯಮಗಳಿಗೆ ವಿನಾಯಿತಿ ಕೋರಿದೆ. ಬಿಸಿಸಿಐ 14 ದಿನಗಳ ಬದಲು 10 ದಿನಗಳ ಕಟ್ಟುನಿಟ್ಟಿನ ಕ್ಯಾರೆಂಟೈನ್ ಬಯಸಿದೆ.
ಯುಕೆಗೆ ಹೋಗುವ ಮೊದಲು ಆಟಗಾರರನ್ನು ಭಾರತದಲ್ಲಿ ಕೆಲವು ದಿನಗಳವರೆಗೆ ಕ್ಯಾರೆಂಟೈನ್ ಮಾಡಲು ಬಿಸಿಸಿಐ ಬಯಸಿದೆ. ನಂತರ ಮಂಡಳಿಯು ಚಾರ್ಟರ್ಡ್ ಫ್ಲೈಟ್ ನಲ್ಲಿ ಆಟಗಾರರನ್ನು ಯುಕೆಗೆ ಕಳುಹಿಸುತ್ತದೆ. ಕಳೆದ 9 ತಿಂಗಳಿನಿಂದ ಟೀಮ್ ಇಂಡಿಯಾದ ಆಟಗಾರರು ನಿರಂತರವಾಗಿ ಬಯೋ ಬಬಲ್ ನಲ್ಲಿದ್ದಾರೆ.
-Team Infotrend