Articles

ಶಿಕ್ಷಕಿಯ ಬೆಲ್ಲಿ ಡ್ಯಾನ್ಸ್ ಆಯಿತು ವೈರಲ್! ನೌಕರಿ ಕಳೆದುಕೊಳ್ಳುವುದರ ಜೊತೆಗೆ ಪತಿಯು ನೀಡಿದನು…

ಶಿಕ್ಷಕಿಯೊಬ್ಬಳು ಮಾಡಿದ ಡ್ಯಾನ್ಸ್ ನಿಂದಾಗಿ ತನಗೆ ತಾನೇ ಆಪತ್ತು ತಂದುಕೊಂಡಿದ್ದಾಳೆ. ಆಕೆಗೆ ತಕ್ಷಣ ನೌಕರಿಯ ಮೇಲಿಂದ ವಜಾ ಮಾಡಲಾಗಿದೆ. ಜೊತೆಗೆ ಇದು ಆಕೆಯ ಪತಿಗೂ ಇಷ್ಟವಾಗದ ಕಾರಣ ಆತನೂ ಸಹ ಆಕೆಗೆ ವಿಚ್ಚೇದನೆಯನ್ನು ನೀಡಿದ್ದಾನೆ.

ಪ್ರಸ್ತುತ ಘಟನೆ ಈಜಿಪ್ಟ್ ನಿಂದ ವರದಿಯಾಗಿದೆ. ವಜಾಗೊಂಡ ಶಿಕ್ಷಕಿಯ ಹೆಸರು ಆಯಾ ಯುಸುಫ್ ಇದ್ದು ಶಾಲೆಯೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಕೆಲವೇ ದಿವಸಗಳ ಹಿಂದೆ ನೈಲ್ ನದಿಯ ದಂಡೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಯಾ ಬೆಲ್ಲಿ ಡ್ಯಾನ್ಸ್ ನೃತ್ಯ ಪ್ರಕಾರವನ್ನು ಮಾಡಿ ತೋರಿಸಿದ್ದಳು. ಆ ಡಾನ್ಸಿನ ವಿಡಿಯೋ ವೈರಲ್ ಆಗಿತ್ತು.

ವಾಸ್ತವಿಕವಾಗಿ ಆ ವಿಡಿಯೋದಲ್ಲಿ ಆಯಾ ಯುಸುಫ್ ಯಾವುದೇ ರೀತಿಯ ಅಶ್ಲೀಲ ಪ್ರಕಾರ ಮಾಡಿರಲಿಲ್ಲ. ಆದರೆ ವ್ಯವಸಾಯಿಕವಾಗಿ ಶಿಕ್ಷಕಿಯ ಕೆಲಸ ಮಾಡುವ ಮಹಿಳೆ ಸಾರ್ವಜನಿಕವಾಗಿ ಈ ರೀತಿ ಮಾಡಿದ್ದು ಅಲ್ಲಿಯ ಸಾಂಪ್ರದಾಯಿಕ ವಿಚಾರಸರಣಿಯ ಜನರಿಗೆ ಇಷ್ಟವಾಗಿಲ್ಲ. ಹೀಗಾಗಿ ಈ ಶಿಕ್ಷಕಿ ಟೀಕೆಗೆ ಗುರಿಯಾದರು.

ಇನ್ನೊಂದು ಕಡೆ ಈಜಿಪ್ತಿನ ಮಹಿಳಾ ಹಕ್ಕು ಕಾರ್ಯಕರ್ತರು ಮಾತ್ರ ಶಿಕ್ಷಕಿಯ ಈ ಕೃತ್ಯಕ್ಕೆ ಸಮರ್ಥನೆಯನ್ನು ನೀಡಿದ್ದಾರೆ. ವಿಡಿಯೋದಲ್ಲಿ ಅಶ್ಲೀಲವಾದ ಯಾವುದೇ ರೀತಿಯ ಆಕ್ಷೇಪ ತೆಗೆದುಕೊಳ್ಳುವಂತಹ ದೃಶ್ಯಗಳು ಇಲ್ಲದಿದ್ದಾಗ್ಯೂ ಅವರನ್ನು ಟೀಕೆಗೆ ಯಾಕೆ ಗುರಿ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಕೇಳಿದ್ದಾರೆ. ಅವರು ಮಾಡಿದ ಡ್ಯಾನ್ಸಿನ ಈ ವಿಡಿಯೋದಿಂದ ವೈಯಕ್ತಿಕವಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಾರಣ ಅವರಿಗೆ ನೌಕರಿಯಿಂದ ವಜಾ ಮಾಡಲಾಗಿದೆ. ಅಷ್ಟೇ ಅಲ್ಲ ಪತಿಯು ಸಹ ವಿಚ್ಛೇದನೆ ನೀಡಿದ್ದಾನೆ.

ಎಲ್ಲ ಪ್ರಕರಣದಿಂದಾಗಿ ಶಿಕ್ಷಕಿಯು ತುಂಬಾ ವ್ಯಥೆಗೆ ಒಳಗಾಗಿದ್ದಾರೆ. ಜೊತೆಗೆ ವೀಡಿಯೊ ಮಾಡಿದ ವ್ಯಕ್ತಿಯ ವಿರುದ್ಧ ಸಂತಾಪವನ್ನು ವ್ಯಕ್ತ ಮಾಡಿದ್ದಾರೆ. ಆತ ಮಾಡಿದ ಈ ವಿಡಿಯೋದಿಂದ ನನ್ನ ಜೀವನವು ಕಷ್ಟಕ್ಕೆ ಸಿಲುಕಿತು ಎಂದು ಗೋಗರೆದಿದ್ದಾರೆ.

ಸುದೈವದಿಂದ ಆಯಾಳಿಗೆ ಈಗ ಮತ್ತೊಂದು ಶಾಲೆಯಲ್ಲಿ ನೌಕರಿ ಸಿಕ್ಕಿದೆ. ಜೀವನ ಮತ್ತೆ ದಾರಿಗೆ ಬಂದಿದೆ ಎಂಬ ಸುದ್ದಿ ಬಂದಿದೆ.

Leave a Comment

Your email address will not be published. Required fields are marked *