Video; ಬಳುಕುವ ಬಳ್ಳಿಯೂ ನಾಚುವಂತೆ ದೇಹವನ್ನು ಸಹಜವಾಗಿ ಲಾಸ್ಯವಾಡಿಸಿದ ಯುವತಿಯ ಬೆಲ್ಲಿ ಡಾನ್ಸ್ ಆಯಿತು ವೈರಲ್!
ನೃತ್ಯಗಳಲ್ಲಿ ಅನೇಕ ಪ್ರಕಾರಗಳಿವೆ. ಅದರಲ್ಲಿ ಬೆಲ್ಲಿ ಡ್ಯಾನ್ಸ್ ಒಂದು ತುಂಬಾ ಫೇಮಸ್ ನೃತ್ಯ ಶೈಲಿಯಾಗಿದೆ. ಇದರ ಹುಟ್ಟು ಈಜಿಪ್ಟಿನಲ್ಲಿ ಆಗಿದೆ. ಈ ನೃತ್ಯ ಶೈಲಿಯಲ್ಲಿ ದೇಹದ ಸೊಂಟ ಮತ್ತು ಕುತ್ತಿಗೆ ಈ ಎರಡೇ ಭಾಗಗಳ ಮೂವ್ ಮೆಂಟ್ಸ್ ಹೆಚ್ಚಾಗಿ ಕಂಡುಬರುತ್ತದೆ. ಈ ಕುಣಿತಕ್ಕಾಗಿ ಉಪಯೋಗಿಸಲಾಗುವ ಉಡುಪುಗಳು ಆಯಾ ದೇಶದ ಪರಂಪರೆಗೆ, ಸಂಪ್ರದಾಯಕ್ಕೆ ಅನುಸರಿಸಿ ತೊಟ್ಟುಕೊಳ್ಳುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದೀಪಾಲಿ ವಶಿಷ್ಠ ಅವರ ಇದೇ ರೀತಿಯ ಬೆಲ್ಲಿ ಡಾನ್ಸ್ ಒಂದು ಜೋರಾಗಿ ವೈರಲ್ ಆಗುತ್ತಿದೆ. ನೋಡಿ ಮುಂದೆ…
ಪ್ರಸ್ತುತ ವಿಡಿಯೋದಲ್ಲಿ ದೀಪಾಲಿ ಅವರು ಬೆಲ್ಲಿ ಡ್ಯಾನ್ಸ್ ನೃತ್ಯ ಶೈಲಿಗೆ ತಕ್ಕಂತೆ ತುಂಬಾ ಸುಂದರವಾಗಿ ತನ್ನ ಸೊಂಟ ಮತ್ತು ಕುತ್ತಿಗೆ ತುಂಬಾ ಮೆತ್ತಗೆ ಹಾಗೂ ಶಾಲಿನತೆಯಿಂದ ಚಲನವಲನೆ ಮಾಡಿದ್ದಾರೆ. ಇವರ ಹೆಸರು ದೀಪಾಲಿ ವಶಿಷ್ಠ ಇದ್ದು ಈ ಸಂದರ್ಭದಲ್ಲಿ ಇವರು ತೊಟ್ಟ ಟಾಪ್ ಮತ್ತು ಲಂಗದ ಬಣ್ಣಗಳು ಅವರ ಸೌಂದರ್ಯವನ್ನು ಇನ್ನಷ್ಟು ವೃದ್ಧಿ ಮಾಡಿವೆ. ಸಂಗೀತಕ್ಕೆ ತಕ್ಕಂತೆ ದೀಪಾಲಿಯು ಮೈ ಬಳುಕಿಸಿದ ಸ್ಟೈಲ್ ನೋಡಿದರೆ ನಿಜಕ್ಕೂ ಅದ್ಭುತವೆನಿಸುತ್ತದೆ. ಸುಮಧುರವಾದ ಹಾಡಿಗೆ ಅಷ್ಟೇ ಸಮತೋಲನದಿಂದ ದೀಪಾಲಿ ಮೈ ಬಳುಕಿಸಿದ್ದಾರೆ. ಈ ನೃತ್ಯ ಶೈಲಿಯು ಅಷ್ಟೊಂದು ಸಹಜ ಹಾಗೂ ಸರಳವಾಗಿದೆ ಎಂದು ತಿಳಿಯಬೇಡಿ.
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ತುಂಬಾ ಲೈಕ್ಸ್ ಗಳನ್ನು ಪಡೆದಿದೆ.