Video:ಕಂಪೆನಿಯಲ್ಲಿ “ಬೆಸ್ಟ್ ಎಂಪ್ಲಾಯ್ ದಿ ಇಯರ್” ಎಂಬ ಪ್ರಶಸ್ತಿ ಸಿಕ್ಕಾಗ, ಈ ಮಹಿಳಾ ಸಿಬ್ಬಂದಿ ಎಲ್ಲರ ಮುಂದೆ ಮಾಡಿದ್ದೇನು ನೋಡಿ?

ಇಂದು ಪ್ರತಿಯೊಬ್ಬರೂ ಒಂದು ಉನ್ನತ ಹುದ್ದೆಯಲ್ಲಿ ನೌಕರಿ ಮಾಡಲು ಬಯಸುತ್ತಾರೆ. ಉತ್ತಮ ಸಂಬಳದೊಂದಿಗೆ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಕಂಪೆನಿಗಳು ಜನರನ್ನು ತಮ್ಮ ಕಡೆಗೆ ಸೆಳೆದು ಕೊಳ್ಳುತ್ತವೆ. ಇಂದು ಪ್ರತಿಯೊಬ್ಬರೂ ಸಹ ಕಂಪೆನಿಯಲ್ಲಿ ಸೇರಿಕೊಳ್ಳುವ ಮುನ್ನ ಕಂಪೆನಿಯ ಬಗ್ಗೆ, ಸಂಬಳದ ಬಗ್ಗೆ ತಿಳಿದುಕೊಂಡು ಅದರಲ್ಲಿ ಪ್ರವೇಶ ಮಾಡುತ್ತಾರೆ. ಉತ್ತಮ ಸಂಬಳ ನೀಡಿದರೆ ಸಾಕು ಅದೆಷ್ಟೇ ಕೆಲಸ ಮಾಡಲು ಸಜ್ಜ ಆಗಿರುತ್ತಾರೆ ಇಂದಿನ ಜನರು.

ಸಾಮಾನ್ಯವಾಗಿ ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಮ್ಮ ಮೇಲಿನ ಅಧಿಕಾರಿಯನ್ನು ಕಂಡು ನಾವು ಸಹ ಇವರ ಹಾಗೆ ಆಗಬೇಕು ಅನ್ನೋ ಕನಸ್ಸು ಕಾಣುತ್ತೇವೆ. ಆ ಕನಸ್ಸು ಕಾಣುವದರಲ್ಲಿ ತಪ್ಪೇನಿಲ್ಲ. ನಮ್ಮ ಜೊತೆಗೆ ಕೆಲಸ ಮಾಡುವ ವ್ಯಕ್ತಿಗಳೊಂದಿಗೆ ಉತ್ತಮವಾದ ಒಡನಾಟ ಹೊಂದಿರುವದು ತುಂಬಾ ಮುಖ್ಯವಾಗಿದೆ. ನಮ್ಮ ಮೇಲಾಧಿಕಾರಿಗಳ ಜೊತೆಗೆ ಉತ್ತಮವಾದ ಒಡನಾಟ ಹೊಂದಿರುವದರಿಂದ ನಮ್ಮ ಕ್ಷೇತ್ರದ ಬಗ್ಗೆ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಕಂಪೆನಿಯಲ್ಲಿ ಉತ್ತಮವಾದ ಕೆಲಸ ಮಾಡಿ ನಮ್ಮ ಉನ್ನತ ಅಧಿಕಾರಿಗಳಿಂದ ಹೊಗಳಿಕೆ ಪಡೆದರೆ ತುಂಬಾನೇ ಖುಷಿಯಾಗುತ್ತದೆ. ಅದಲ್ಲದೆ ಕಂಪೆನಿಯಲ್ಲಿಯ ಬೆಸ್ಟ್ ಎಂಪ್ಲಾಯ್ ಎಂಬ ಆವರ್ಡ್ ಸಿಕ್ಕರೆ ಸಾಕು ಎಷ್ಟೆಲ್ಲಾ ಸಂತೋಷ ವಾಗುತ್ತೆ ಅನ್ನೋದು ಈ ವಿಡಿಯೋ ನೋಡಿದ ಮೇಲೆ ಗೊತ್ತಾಗುತ್ತೆ. ಕಂಪೆನಿಯಲ್ಲಿ ಒಬ್ಬ ಮಹಿಳಾ ಸಿಬ್ಬಂದಿಗೆ ಈ ವರ್ಷದ ಅತ್ಯುತ್ತಮ ಸಿಬ್ಬಂದಿ ಎಂಬ ಅವಾರ್ಡ್ ಕೊಟ್ಟಾಗ ಆಕೆ ಪಟ್ಟ ಸಂತಸ ಊಹೆಗೂ ನಿಲುಕದ್ದು. ಸಂತಸದಲ್ಲಿ ಕಂಪೆನಿಯಲ್ಲಿಯ ಎಲ್ಲ ಸಿಬ್ಬಂದಿಗಳ ಎದುರೇ ಪ್ರಸಿದ್ಧ ಹಿಂದಿ ಕಾಮೆಡಿ ಕಾರ್ಯಕ್ರಮದಲ್ಲಿ ಒಂದಾದ ‘ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ’ ದಲ್ಲಿಯ ಪ್ರಸಿದ್ಧ ದಂಪತಿ ಜೇಟಾಲಾಲ್ ಪತ್ನಿ ದಯಾಳ್ ಪ್ರಸಿದ್ಧ ಡ್ಯಾನ್ಸ್ ಗರ್ಬಾ ನೃತ್ಯ ಈ ಮಹಿಳೆ ಮಾಡಿದ್ದಾಳೆ. ಈಕೆ ನೃತ್ಯ ಮಾಡುವ ಮೂಲಕ ಕಾರ್ಯಕ್ರಮದಲ್ಲಿಯ ದಯಾಳನ್ನು ಸಹ ಸೋಲಿಸಿದ್ದಾಳೆ. ಇದನ್ನು ಕಂಡು ನೆಟ್ಟಿಗರು ದಯಾ ಇವಳ ಮುಂದೆ ಫೆಲ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ನೋಡಿ.

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ hennashivangi ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಎರಡು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಲ್ಲದೆ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.