Articles

Viral Video: ರಿಯಲ್ ಬಾಹುಬಲಿ ಅಂದರೆ ಈತನೇ ನೋಡಿ, ಬೈಕ್ ತನ್ನ ತಲೆಯಮೇಲಿಟ್ಟುಕೊಂಡು ಎರಡು ಕೈಗಳನ್ನು ಬಿಟ್ಟು ಬಸ್ಸಿನ ಮೇಲೆ ಹತ್ತಿದ ವ್ಯಕ್ತಿ!!

ಮನುಷ್ಯ ಏನನ್ನು ಸಹ ಸಾಧ್ಯ ಮಾಡಬಹುದು ಅನ್ನೋ ಎಷ್ಟೋ ಉದಾಹರಣೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಅವುಗಳಲ್ಲಿಯ ಮನುಷ್ಯರ ಸಾಹಸ ನೋಡಿ ಜನರು ಆಶ್ಚರ್ಯವನ್ನು ಪಡುತ್ತಾರೆ ಅಲ್ಲದೆ ಕೆಲವೊಂದು ಸಲ ಅವರ ಕೃತ್ಯವನ್ನು ನೋಡಿ ನಗುವರು.  ಈ ರೀತಿಯಾಗಿ ವಿಭಿನ್ನವಾದ ವೀಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಾನೆ ಇವೆ.  ಸದ್ಯಕ್ಕೆ ಇಂತಹದೇ ಒಂದು ಆಶ್ಚರ್ಯಪಡಿಸುವಂತ ವಿಡಿಯೋ  ಚರ್ಚೆಯಲ್ಲಿದೆ.

ಪ್ರಸ್ತುತ ವೈರಲ್ ಆಗುತ್ತಿರುವ  ವಿಡಿಯೋದಲ್ಲಿ ನೀವು ನೋಡಬಹುದು,  ಬಾಹುಬಲಿ ಚಿತ್ರದಲ್ಲಿ ಹೀರೋ ದೊಡ್ಡದಾದ ಲಿಂಗವನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಹೇಗೆ ಮುಂದೆ ಸಾಗುತ್ತಾನೆ ಅದೇ ತರ ಈ ವಿಡಿಯೋದಲ್ಲಿ ಸಹ ಒಬ್ಬ ವ್ಯಕ್ತಿ ಸುಮಾರು ಅರ್ಧ ಟನ್ ಗಿಂತಲೂ  ಹೆಚ್ಚು ತೂಕ ಹೊಂದಿರುವ ಮೋಟಾರ್ ಬೈಕ್ ಅನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ.  ಆತನು ಬೈಕನ್ನು ತಲೆಯ ಮೇಲಿಟ್ಟುಕೊಂಡು  ಏಣಿಯ ಸಹಾಯದಿಂದ  ಬಸ್ಸಿನ ಮೇಲೆ ಹತ್ತುತ್ತಾನೆ.  ವಿಚಿತ್ರವೆಂದರೆ ಏಣಿ ಹತ್ತುವಾಗ ಈ ವ್ಯಕ್ತಿ ತನ್ನ ಎರಡು ಕೈಗಳಿಂದ ಬೈಕನ್ನು ಬಿಟ್ಟು ಏಣಿಗೆ ಹಿಡಿದುಕೊಂಡು ಅಂದರೆ ಬೈಕ್ ಕೇವಲ ತಲೆಯ ಮೇಲೆ ಇಟ್ಟುಕೊಂಡು ಅದಕ್ಕೆ ಯಾವುದೇ ಆಧಾರವಿಲ್ಲದೆ ಧಾರಾಳವಾಗಿ ಬಸ್ಸಿನ ಮೇಲೆ ಹತ್ತುತ್ತಾನೆ.  ತದನಂತರ ಮೇಲೆ ನಿಂತ ಇಬ್ಬರು ವ್ಯಕ್ತಿಗಳು ಈ ವ್ಯಕ್ತಿಯ ತಲೆಯ ಮೇಲಿನ ಬೈಕನ್ನು ಇಳಿಸಿಕೊಳ್ಳುತ್ತಾರೆ. ಸದ್ಯಕ್ಕೆ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ವೀಡಿಯೋ ನೋಡಿ

https://twitter.com/Gulzar_sahab/status/1596038884886212608?t=wy2mGEEcr_Fp6FhWyr10CQ&s=19

ಈತನ ಈ ಕರಾಮತಿಯನ್ನು ಅಲ್ಲಿದ್ದ ಜನರು ಆಶ್ಚರ್ಯಗೊಂಡು ನೋಡುತ್ತಾ ನಿಂತಿರುತ್ತಾರೆ.  ಹಾಗೆ ನೋಡಿದರೆ ಈತನು ಒಂದೂ ಕೈ ಸಹ  ಬೈಕಿಗೆ ಹಿಡಿಯದೆ ತಲೆಯ ಮೇಲೆ ಇಷ್ಟೊಂದು ಭಾರವಾದ ಬೈಕನ್ನು ಹೇಗೆ ಬ್ಯಾಲೆನ್ಸ್ ಮಾಡಿದನು? ಅಲ್ಲದೆ ಇಷ್ಟೊಂದು ಭಾರ ಆತನು ಹೇಗೆ ಹೊತ್ತನು?  ಎಂಬುದು ಜನರ ಪ್ರಶ್ನೆಯಾಗಿವೆ.  ಟ್ವಿಟರ್ ನಲ್ಲಿ ಶೇರ್ ಮಾಡಿದ ನಂತರ ಈ ವಿಡಿಯೋ ತುಂಬಾನೇ ವೈರಲ್ ಆಗಿದೆ ಅಲ್ಲದೆ ನೆಟ್ಟಿಗರು ಈ ವಿಡಿಯೋವನ್ನು ನೋಡಿ ಈತನೇ ನಿಜವಾದ ಬಾಹುಬಲಿಯಂದು ಕಮೆಂಟ್ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *