Articles

ಗರುಡರಾಜ ನೀರಿನಲ್ಲಿ ಬಿಂಕದಿಂದ ಬೇಟೆಯಾಡಿದ ಪರಿಯನ್ನೊಮ್ಮೆ ನೋಡಿ ಈ ಸೂಪರ್ ವಿಡಿಯೋದಲ್ಲಿ…

ಮಾಂಸಾಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇನ್ನೊಂದು ಪ್ರಾಣಿಗಳ ಬೇಟೆಯಾಡದೆ ಬೇರೆ ಮಾರ್ಗವೇ ಇಲ್ಲ. ಈ ಕಾಡು ಪ್ರಾಣಿಗಳು ಅಸಹಾಯಕ ಪ್ರಾಣಿಗಳ ಬೇಟೆ ಆಡುವ ವಿಡಿಯೋಗಳನ್ನು ನೋಡುವಾಗ ಎಷ್ಟೋ ಸಲ ಮನ ಕಲಕುತ್ತದೆ. ಆದರೆ ಈ ಪ್ರಾಣಿಗಳ ಆಹಾರವೇ ಮಾಂಸವಾಗಿರುವದರಿಂದ ಇನ್ನೊಂದು ಜೀವಿಯ ಬೇಟೆಯಾಡಿಯೇ ಬದುಕಬೇಕಾಗುತ್ತದೆ. ಇಲ್ಲವಾದರೆ ಈ ಜೀವಿಗಳು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ.

ಈ ಕಾಡುಪ್ರಾಣಿ ಮತ್ತು ಪಕ್ಷಿಗಳು ಆಹಾರಕ್ಕಾಗಿ ಕೆಲವೊಮ್ಮೆ ಮಾಡುವ ಬೇಟೆಗಾರಿಕೆ ತುಂಬಾ ಭ#ಯಂಕರವಾಗಿ ಇರುತ್ತದೆ. ಕಾಡಿನಲ್ಲಿ ಬದುಕುಳಿಯಲು ಸದಾಕಾಲ ಸಂಘರ್ಷ ನಡೆದೇ ಇರುತ್ತದೆ. ಪಕ್ಷಿಗಳ ರಾಜನೆಂದು ಕರೆಸಿಕೊಳ್ಳುವ ಗರುಡ ಪಕ್ಷಿಯ ಬೇಟೆಯಾಡುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನೋಡಲು ಸಿಗುತ್ತಿದೆ.

ಈ ವಿಡಿಯೋದಲ್ಲಿ ಗರುಡ ಆಕಾಶದಿಂದ ನೇರ ನೀರಿನಲ್ಲಿಯೇ ಲ್ಯಾಂಡ್ ಮಾಡುತ್ತದೆ. ಬೇಟೆಯನ್ನು ಗರುಡ ಮೇಲಿನಿಂದಲೇ ತನ್ನ ಕಣ್ಣುಗಳಲ್ಲಿ ಸೇವ್ ಮಾಡಿ ಒಮ್ಮೆಲೆ ಅಟ್ಯಾಕ್ ಮಾಡಿದೆ ಎಂದು ಹೇಳಬಹುದು. ನೀರಿನಲ್ಲಿ ಜಿಗಿದ ತಕ್ಷಣ ಗರುಡ ತನ್ನ ಬೇಟೆಯನ್ನು ಬಲವಾಗಿ ಹಿಡಿದಿದೆ. ಆದರೆ ಬೇಟೆ ತುಂಬಾ ದೊಡ್ಡದು ಮತ್ತು ಭಾರವಾದ ಕಾರಣ ಗರುಡಕ್ಕೆ ನೀರಿನಲ್ಲಿ ಚಲನವಲನೆ ಮಾಡುವದು ಕಷ್ಟಕರವಾಗಿ ಬಿಟ್ಟಿದೆ. ಆದರೂ ತನ್ನನ್ನು ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ ಗರುಡ ಕಾಲಿನಲ್ಲಿ ಹಿಡಿದ ಬೇಟೆಯನ್ನು ಹಾಗೆಯೇ ಹೋಗಲು ಬಿಟ್ಟಿಲ್ಲ. ಗರುಡ ದಡಕ್ಕೆ ಸೇರಿದಾಗ ನೋಡುಗರಿಗೆ ಗೊತ್ತಾಗುತ್ತದೆ ಗರುಡ ತನ್ನ ಕಾಲುಗಳಲ್ಲಿ ದೊಡ್ಡದಾದ ಮೀನು ಹಿಡಿದಿದೆ ಎಂದು.

ನೋಡಿ ಈ ವಿಡಿಯೋ…

 

View this post on Instagram

 

A post shared by Ahmad MAchlouche (@ahmad_machlouche)

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಸಾವಿರಾರು ಜನರು ಈ ವೀಡಿಯೋವನ್ನು ನೋಡಿ ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸುಮಾರು 45 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *