ರಸ್ತೆ ಬದಿ ನಿಂತು ಸುಂದರ ಧ್ವನಿಯಲ್ಲಿ ರಾಜಕುಮಾರ್ ಅವರ ಹಾಡು ಹಾಡಿದ ಅಂಧ ವ್ಯಕ್ತಿ! 6 ಲಕ್ಷ ಜನರ ವೀಕ್ಷಣೆ ಪಡೆದ ವಿಡಿಯೋ…
ಸ್ಟೇಷನ್ ನಲ್ಲಿ ನಿಂತು ಹಾಡಿ ಸೋಷಿಯಲ್ ಮೀಡಿಯಾದಿಂದ ಪ್ರಸಿದ್ಧಿಯನ್ನು ಪಡೆದ ರಾನು ಮಂಡಲ್ ಅವರನ್ನು ಮರೆಯಲು ಸಾಧ್ಯವೇ? ಸದ್ಯ ಇದೇ ರೀತಿ ಬೇರೆ ವ್ಯಕ್ತಿ ಅಂದರೆ ಒಬ್ಬ ಅಂಧ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಗಾಯನದಿಂದ ಪ್ರಭಾವ ಬೀರಿದ್ದಾನೆ. ಕನ್ನಡ ಚಿತ್ರರಂಗದ ದೇವರು ರಾಜಕುಮಾರ್ ಅವರ ಸೂಪರ್ ಹಿಟ್ ಹಾಡನ್ನು ತುಂಬಾ ಇಂಪಾಗಿ ಹಾಡಿದ ಈ ಅಂಧ ವ್ಯಕ್ತಿಯ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ನೆಟ್ಟಿಗರಿಗೆ ಸಖತ್ ಇಷ್ಟವಾದ ಕಂಟೆಂಟ್ ಆಗಿದೆ.
ರಸ್ತೆಯ ಬದಿಯಲ್ಲಿ ನಿಂತುಕೊಂಡು ರಾಜಕುಮಾರ್ ಅವರ ಸುಪ್ರಸಿದ್ಧ ಹಾಡೊಂದನ್ನು ಹಾಡಿ ರಸಿಕರಿಗೆ ಮಂತ್ರ ಮುಗ್ಧ ಮಾಡಿದ್ದಾರೆ. ವ್ಯಕ್ತಿಯ ಈ ಇಂಪಾದ ದನಿ ಲಕ್ಷಾವಧಿ ಜನರಿಗೆ ಸಂಮ್ಮೋಹನಗೊಳಿಸಿದೆ. ವಿಡಿಯೋದ ಕ್ಯಾಪ್ಶನ್ ನಲ್ಲಿ ‘ಈ ಅಂಧ ಗಾಯಕನ ಹಾಡಿಗೆ ಒಂದು ಮೆಚ್ಚಿಗೆ ಇರಲಿ” ಎಂದು ಬರೆಯಲಾಗಿದೆ. ದಯವಿಟ್ಟು ಈ ಅಂಧ ವ್ಯಕ್ತಿಗೆ ಸಪೋರ್ಟ್ ಮಾಡಿ ಎಂದು ಬೇರೆ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ವ್ಯಕ್ತಿ ಡಾ.ರಾಜಕುಮಾರ್ ಅವರ ಸೂಪರ್ ಹಿಟ್ ಚಲನಚಿತ್ರ ಎರಡು ಕನಸು ಚಿತ್ರದಲ್ಲಿಯ ‘ಬಾಡಿ ಹೋದ ಬಳ್ಳಿಯಿಂದ” ಎಂಬ ಹಾಡನ್ನು ಹಾಡಿದ್ದಾನೆ.
ವಿಡಿಯೋ ನೋಡಿ.
View this post on Instagram
ವಿಡಿಯೋ ನೋಡಿದ ನಂತರ ನೆಟ್ಟಿಗರು ಸಖತ್ ಒಳ್ಳೆಯ ರಿಯಾಕ್ಷನ್ ನೀಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ನಂತರ ಇಲ್ಲಿಯವೆರೆಗೆ 7 ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಣೆಯನ್ನು ಪಡೆದಿದೆ. ಮತ್ತು 90 ಸಾವಿರಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಈ ಟ್ಯಾಲೆಂಟ್ ರೈಲ್ವೆ ಒಬ್ಬ ನೆಟ್ಟಿಗ ‘ಸ್ಟೇಷನ್ ನಲ್ಲಿ ನಿಂತು ಹಾಡಿದ ರಾನು ಮಂಡಲ್ ಗಿಂತಲೂ 10 ಪಟ್ಟು ಸೊಗಸಾಗಿದೆ’ ಎಂದರೆ , ಇನ್ನೊಬ್ಬ ‘ಓ ದೇವರೇ ಈ ಅಂಧ ವ್ಯಕ್ತಿಯಲ್ಲಿ ನಿಜಕ್ಕೂ ಟ್ಯಾಲೆಂಟ್ ಇದೆ ಈತನಿಗೆ ಪ್ರೋತ್ಸಾಹ ನೀಡಿ’ ಎಂದಿದ್ದಾನೆ.