Articles

Funny Video: ಇಂಥ ಶಾಪಗ್ರಸ್ತ ರೋಡ್ ಈ ಮೊದಲು ಎಲ್ಲಿಯೂ ನೋಡಲಿಕ್ಕಿಲ್ಲ. ಮನುಷ್ಯ, ವಾಹನ ಎಲ್ಲರ ಜೊತೆಗೂ ಹೀಗೆಯೇ ಆಗುತ್ತದೆ…

ಸೋಶಿಯಲ್ ಮೀಡಿಯಾದಲ್ಲಿ ನಂಬಲು ಅಸಾಧ್ಯವಾದ ಕೆಲವೊಂದು ವಿಡಿಯೋಗಳು ಆಗಾಗ ಶೇರ್ ಆಗುತ್ತಿರುತ್ತವೆ. ಈ ವಿಡಿಯೋಗಳನ್ನು ನೋಡಿದಾಗ ನಿಜಕ್ಕೂ ನಮ್ಮ ಕಣ್ಣುಗಳಿಗೆ ವಿಶ್ವಾಸವಿಡಲು ಸಾಧ್ಯವೇ ಆಗುವುದಿಲ್ಲ. ಅಷ್ಟೊಂದು ಕನ್ಫ್ಯೂಸ್ ಮಾಡುತ್ತವೆ ಈ ವಿಡಿಯೋಗಳು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಂಬಾ ರೋಚಕತೆಯಿಂದ ಕೂಡಿದೆ. ಈ ವಿಡಿಯೋ ನೋಡಿದಾಗ ಪ್ರಸ್ತುತ ರಸ್ತೆಯಲ್ಲಿ ಏನಾದರೂ ಒಂದು ರಹಸ್ಯ ಅಡಗಿದೆಯೇನೋ ಎಂಬಂತೆ ಪ್ರಶ್ನೆ ಹುಟ್ಟುತ್ತದೆ. ವಿಡಿಯೋದಲ್ಲಿ ಕಾಣಿಸುವ ದೃಶ್ಯ ನೋಡಿದಾಗ ಇದು ಹೇಗೆ ಆಗಲು ಸಾಧ್ಯ ಎಂಬ ಪ್ರಶ್ನೆ ಹುಟ್ಟಿ ನೆಟ್ಟಿಗರು ಪ್ರಸ್ತುತ ವಿಡಿಯೋವನ್ನು ಮೇಲಿಂದ ಮೇಲೆ ನೋಡುತ್ತಿದ್ದಾರೆ. ಜೊತೆಗೆ ತಮ್ಮ ನಗುವನ್ನು ನೋಡುಗರಿಗೆ ನಿಲ್ಲಿಸಲು ಸಹ ಸಾಧ್ಯವಾಗುತ್ತಿಲ್ಲ. ಕಾರಣ ವಿಡಿಯೋದಲ್ಲಿ ಯಾರು ಕಾಣುತ್ತಾರೆ ಅವರೆಲ್ಲರೂ ಜಾರಲು ಶುರು ಮಾಡುತ್ತಾರೆ.

ವಾಹನಗಳ ಅವಸ್ಥೆಯಂತೂ ದುರವಸ್ಥೆಯಾಗಿಬಿಟ್ಟಿದೆ.

ವಿಡಿಯೋದ ಪ್ರಾರಂಭದಲ್ಲಿ ಕಂಡುಬರುವ ಹಾಗೆ ಕಾರೊಂದು ಆಕಸ್ಮಿಕವಾಗಿ ರೋಡ್ ಮೇಲೆ ಜಾರಿಕೊಂಡು ಹೋಗಲು ಶುರು ಮಾಡುತ್ತದೆ. ಹೀಗೆಯೇ ಜಾರುತ್ತ ಜಾರುತ್ತಾ ಸೈಡ್ ನಲ್ಲಿರುವ ರೇಲಿಂಗ್ ಗೆ ಹೋಗಿ ಡಿಕ್ಕಿ ಹೊಡೆಯುತ್ತದೆ. ಇದು ಹೋಗಿ ಡಿಕ್ಕಿ ಹೊಡೆಯುವುದೇ ತಡ ಹಿಂದಿನಿಂದ ಒಂದರ ನಂತರ ಒಂದು ಹೀಗೆ ಎರಡು ವಾಹನಗಳು ಬಂದು ಮೊದಲಿನ ವಾಹನಕ್ಕೆ ಡಿಕ್ಕಿ ಹೊಡೆಯುತ್ತವೆ. ಅದೇ ರೀತಿ ಅನೇಕ ಘಟನೆಗಳು ಈ ವಿಡಿಯೋದಲ್ಲಿ ಒಂದಾದ ನಂತರ ಒಂದು ಘಟಿಸುವದು ಕಂಡುಬರುತ್ತಿವೆ.

ಮೊದಲು ಈ ವಿಚಿತ್ರವಾದ ವಿಡಿಯೋವನ್ನು ನೋಡಿ.

ಜನರು ಸಹ ಜಾರಿ ಜಾರಿ ಬೀಳುತ್ತಾರೆ.

ಪ್ರಸ್ತುತ ವಿಡಿಯೋದಲ್ಲಿ ಬೈಕ್ ಸಹ ಸ್ಲೈಡ್ ಮಾಡುತ್ತಿರುವದು ಕಂಡುಬರುತ್ತಿದೆ. ಈ ರೀತಿಯ ಘಟನೆಗಳು ಯಾಕೆ ಆಗುತ್ತಿವೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಅಷ್ಟೇ ಅಲ್ಲ ಒಂದು ಟ್ರಕ್ ಇನ್ನೇನು ಬೀಳುತ್ತದೆ ಬೀಳುತ್ತದೆ ಎನ್ನುವಷ್ಟರಲ್ಲಿ ಮತ್ತೆ ಬೀಳದೆ ಹಾಗೆಯೇ ನಿಂತುಬಿಟ್ಟಿತು. ವಾಹನಗಳಾದರೆ ಒಳ್ಳೆಯದು ಮನುಷ್ಯರು ಸಹ ಇಲ್ಲಿ ಮೇಲಿಂದ ಮೇಲೆ ಜಾರಿಕೊಂಡು ಬೀಳುತ್ತಿದ್ದಾರೆ.

ವಿಡಿಯೋದಲ್ಲಿ ಕಾಣಿಸುವ ಈ ರೋಡ್ ಕೆನಡಾದ ಮೆಕ್ಸಿಕೋ ಪಟ್ಟಣದಲ್ಲಿ ಇದೆ. ಪ್ರಸ್ತುತ ಈ ರೋಡ್ ಹೈಡ್ರಾಲಿಕ್ ಕೊಂಕ್ರಿಟ್ ನಿಂದ ತಯಾರಿಸಲಾಗಿದೆ. ಹೀಗಾಗಿ ಮಳೆಯಲ್ಲಿಯ ವಾತಾವರಣದಿಂದ ರೋಡ್ ಮೇಲೆ ಜಾರಿಕೆ ಉಂಟಾಗುತ್ತದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 4 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲ ಕೆಲವೇ ಕ್ಷಣಗಳ ಈ ವಿಡಿಯೋ ಸಾವಿರಾರು ಲೈಕ್ ಗಳನ್ನು ಪಡೆಯುವದರ ಜೊತೆಗೆ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ರೀಟ್ವಿಟ್ ಪಡೆದಿದೆ. ಕಮೆಂಟ್ ಸೆಕ್ಷನಲ್ಲಿ ಜನರು ಅನೇಕ ರೀತಿಯ ತಮ್ಮ ವಿಧವಿಧ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *