‘Bom Diggy Diggy’ ಹಾಡಿಗೆ ಫುಲ್ ಎನರ್ಜಿಟಿಕ್ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಾಶ್ರೀ ವರ್ಮಾ; Video ಸಖತ್ ವೈರಲ್
ಭಾರತೀಯ ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಅವರ ಭಾವೀ ಪತ್ನಿ ಧನಾಶ್ರೀ ವರ್ಮಾ ಡಾನ್ಸ್ ಪ್ರಿಯರ ಹೃದಯವನ್ನು ಗೆಲ್ಲುವ ಯಾವುದೇ ಅವಕಾಶ ಇದ್ದರೂ ಅದನ್ನು ಬಿಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಡಾನ್ಸ್ ವಿಷಯ ಅಥವಾ ಡಾನ್ಸ್ ವೀಡಿಯೋಗಳ ವಿಷಯ ಬಂದರೆ ಅಲ್ಲೊಂದು ಸಂಚಲನವನ್ನು ಉಂಟು ಮಾಡುವ ವೀಡಿಯೋ ಆಗಿ ಧನಾಶ್ರೀ ವರ್ಮಾ ವೀಡಿಯೋ ಟಾಪ್ ನಲ್ಲಿ ಇರುತ್ತದೆ. ಧನಾಶ್ರೀ ಡಾನ್ಸ್ ಯಾವ ಮಟ್ಟಕ್ಕೆ ಕ್ರೇಜ್ ಪಡೆದಿದೆ ಎಂದರೆ ಅವರು ತಮ್ಮ ಡಾನ್ಸ್ ಗಳ ವೀಡಿಯೋಗಳನ್ನು ಶೇರ್ ಮಾಡಿದ ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗಿ ಸಂಚಲನವನ್ನು ಸೃಷ್ಟಿಸುತ್ತಿವೆ.
ಈಗ ಇದೇ ಭರ್ಜರಿ ವೀಡಿಯೋಗಳ ಸಾಲಿನಲ್ಲಿ ಧನಾಶ್ರೀ ಅವರ ಹೊಸ ವೀಡಿಯೋ ಒಂದು ವೈರಲ್ ಆಗಿ ಸಂಚಲನ ಸೃಷ್ಟಿಸಿದ ವೀಡಿಯೋಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಬಾರಿ ಧನಾಶ್ರೀ ವರ್ಮಾ ಯಾವ ಹಾಡಿಗೆ ಡಾನ್ಸ್ ಮಾಡಿದ್ದಾರೆ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಈಗಾಗಲೇ ಮೂಡಿರಬಹುದು. ಹಾಗಾದರೆ ಬನ್ನಿ ಅದರ ವಿವರವನ್ನು ಕೂಡಾ ನೀಡುತ್ತೇವೆ. ಧನಾಶ್ರೀ ವರ್ಮಾ ಈ ಬಾರಿ ಕೂಡಾ ಡಾನ್ಸ್ ಪ್ರಿಯರು ಹುಚ್ಚೆದ್ದು ಕುಣಿಯುವ ಹಾಗೆ ಮಾಡುವಂತಹ ಒಂದ ಜೋಶ್ ಇರುವ ಹಾಡಿಗೆ ಹೆಜ್ಜೆ ಹಾಕಿದ್ದು, ಅವರ ಡಾನ್ಸ್ ಮೂವ್ ಗಳು ಎಂದಿನಂತೆ ಅತ್ಯದ್ಭುತ ಎನಿಸುವ ಹಾಗೆ ಇದೆ.
ಧನಾಶ್ರೀ ವರ್ಮಾ ಈ ಬಾರಿ ಬಮ್ ಡಿಗಿ ಬಮ್ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಹಾಡಿಗೆ ತಕ್ಕಂತಹ ಹಾಕಿದ ಹೆಜ್ಜೆಗಳು ಹಾಗೂ ಡಾನ್ಸ್ ಮೂವ್ ಗಳು ನೋಡುಗನ ಹೃದಯಕ್ಕೆ ಕನ್ನ ಹಾಕುವುದು ಖಚಿತ ಎನ್ನುವ ಹಾಗಿದೆ ಧನಾಶ್ರೀ ಅವರ ಡಾನ್ಸ್. ಧನಾಶ್ರೀ ಅವರ ಈ ಡಾನ್ಸ್ ವೀಡಿಯೋವನ್ನು ಡಾನ್ಸಿಂಗ್ ಫಾರೆವರ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಡಾನ್ಸ್ ನಲ್ಲಿ ಧನಾಶ್ರೀ ಅವರು ಡಾನ್ಸ್ ಮಾಡುತ್ತಾ ನೀಡಿರುವ ಎಕ್ಸ್ ಪ್ರೆಶನ್ ಗಳು ಅವರ ಅಭಿಮಾನಿಗಳನ್ನು ನಿದ್ದೆಗೆಡಿಸುವಂತೆ ಮಾಡಿದ್ದು, ಹಾಡಿಗೆ ಅನುಗುಣವಾಗಿ ಡಾನ್ಸ್ ನೋಡುತ್ತಿದ್ದರೆ ನೋಡುಗರ ಕಾಲುಗಳು ಕೂಡಾ ಚಲನಶೀಲವಾಗುತ್ತದೆ.
ಡಾನ್ಸ್ ನಲ್ಲಿ ಧನಾಶ್ರೀ ಅವರ ಡಾನ್ಸ್ ಸ್ಕಿಲ್ಸ್ ನೋಡಿದ ಅವರ ಅಭಿಮಾನಿಗಳು ಅದನ್ನು ಬಹಳವಾಗಿ ಮೆಚ್ಚಿಕೊಂಡಿರುವುದು ಮಾತ್ರವೇ ಅಲ್ಲದೇ ತಮ್ಮ ಮೆಚ್ಚುಗೆಯನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸುತ್ತಾ ಹೊಗಳಿಕೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇಂತಹ ಹೊಗಳಿಗೆ ಹಾಗೂ ಮೆಚ್ಚುಗೆಗಳು ಇದೇ ಮೊದಲಲ್ಲ ಎಂಬುದು ಕೂಡಾ ನಿಜ. ಧನಾಶ್ರೀ ವರ್ಮಾ ಅವರ ಒಂದೊಂದು ಡಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದಾಗಲೂ ಕೂಡಾ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ ಹಾಗೂ ವೀಡಿಯೋಗಳು ಸಖತ್ ವೈರಲ್ ಆಗುತ್ತಿವೆ ಕೂಡಾ
ವಿಡಿಯೋ ನೋಡಿ
ಧನಾಶ್ರೀ ವರ್ಮಾ ತಮ್ಮದೇ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೂಮ್ ಬೂಮ್ ಸಾಂಗ್ ಗೆ ಡಾನ್ಸ್ ಮಾಡಿರುವ ವೀಡಿಯೋ ಹಂಚಿಕೊಂಡು ಆ ವೀಡಿಯೋ ಕೂಡಾ ವೈರಲ್ ಆಗಿ ಸುದ್ದಿಯಾಗಿತ್ತು. ನಿಜ ಹೇಳಬೇಕೆಂದರೆ ಧನಾಶ್ರೀ ವರ್ಮಾ ಅವರ ಮುಖ್ಯ ವೃತ್ತಿ ಡಾಕ್ಟರ್. ಆದರೆ ಆಕೆ ಜನಪ್ರಿಯತೆ ಪಡೆದಿರುವುದು ಮಾತ್ರ ಒಬ್ಬ ಸೂಪರ್ ಕೊರಿಯೋಗ್ರಫರ್ ಹಾಗೂ ಪ್ರಸಿದ್ಧ ಯೂಟ್ಯೂಬರ್ ಆಗಿ. ಯಜ್ವೇಂದ್ರ ಚಹಲ್ ಜೊತೆ ನಿಶ್ಚಿತಾರ್ಥ ಆದ ನಂತರ ಧನಾಶ್ರೀ ಅವರು ಮತ್ತಷ್ಟು ಪಾಪುಲಾರಿಟಿ ಪಡೆದುಕೊಂಡಿದ್ದಾರೆ. ಅವರ ಡಾನ್ಸ್ ವೀಡಿಯೋಗಳು ಸದ್ಯಕ್ಕೆ ಟ್ರೆಂಡ್ ಆಗುತ್ತಿವೆ.