ತಾಯಿಯಂದು ತಿಳಿದು ಬೇರೊಬ್ಬಳ ಹತ್ತಿರ ನಿಂತ ಮಗುವಿಗೆ ತಾಯಿ ಸನ್ನೆ ಮಾಡಿದಾಗ ಆತನ ಏಕ್ಸ್ ಪ್ರೇಶನ್! ಮಿಸ್ ಮಾಡದೇ ನೋಡಿ.
ಮಕ್ಕಳು ತುಂಬಾ ಮುಗ್ಧವಾಗಿರುತ್ತವೆ. ಅವುಗಳ ಮುಗ್ಧತೆಯನ್ನು ತೋರಿಸುವ ಅನೇಕ ವಿಡಿಯೋಗಳು ನೋಡುಗರ ಮನ ತಟ್ಟುತ್ತವೆ. ಇಂಥ ವಿಡಿಯೋಗಳು ಎಷ್ಟು ಸಲ ನೋಡಿದರೂ ಬೇಸರವೇನಿಸದೆ ಮನಸ್ಸಿಗೆ ಮುದ ನೀಡುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಮುಗ್ಧ ಮಗುವಿನ ವಿಡಿಯೋ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿಯ ದೃಶ್ಯ ನೋಡುಗರ ಮನ ಸ್ಪರ್ಶ ಮಾಡುವದರಲ್ಲಿ ಸಂದೇಹವಿಲ್ಲ.
ರಸ್ತೆ ಬದಿಯ ಫುಟ್ ಪಾತ್ ನ ಒಂದು ಸ್ಥಳದಲ್ಲಿ ಮಗುವೊಂದು ತನ್ನ ತಾಯಿಯೇ ಇದ್ದಾಳೆಂದು ತಿಳಿದು ಬೇರೊಬ್ಬಳು ಮಹಿಳೆಯ ಹತ್ತಿರ ಆಕೆಯ ಕಾಲುಗಳಿಗೆ ಆನಿಸಿ ತುಂಬಾ ರಿಲ್ಯಾಕ್ಸ್ ನಲ್ಲಿ ನಿಂತಿದೆ. ತನ್ನ ತಾಯಿ ಮಗ್ಗುಲಲ್ಲಿ ನಿಂತಿದ್ದಾಳೆ ಈಕೆ ತನ್ನ ತಾಯಿ ಅಲ್ಲ ಎಂಬುದು ಮಗು ಗಮನಿಸಿಯೇ ಇಲ್ಲ. ಕೆಲವು ಕ್ಷಣಗಳ ನಂತರ ತಾಯಿ ತನ್ನ ಮಗುವಿಗೆ ಕೈ ತಾಗಿಸಿ ಸನ್ನೆ ಮಾಡುತ್ತಾಳೆ. ಆಗ ಮಗು ತನ್ನ ತಾಯಿಗೆ ನೋಡಿದಾಗ ಒಮ್ಮೆಲೆ ಬೆಚ್ಚಿ ಬೀಳುತ್ತದೆ, ಅಷ್ಟೆ ಅಲ್ಲ ತಾನು ಯಾರ ಹತ್ತಿರ ನಿಂತಿದ್ದೇನೆ ಮತ್ತು ಇವರು ಯಾರು ಎಂದು ಆಕೆಯ ಮುಖವನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡುವದಷ್ಟೆ ತಡ ಚಂಗನೆ ಹಾರಿ ತನ್ನ ತಾಯಿಯ ಹತ್ತಿರ ಬರುತ್ತದೆ. ಮಗುವಿನ ಈ ದೃಶ್ಯ ನೋಡಲು ಸಖತ್ ಮಾರ್ಮಿಕ ಮತ್ತು ತಮಾಷೆಯಿಂದ ಕೂಡಿದೆ. ನೋಡುಗರಿಗೆ ಸಖತ್ ಇಷ್ಟವಾಗುವ ವಿಡಿಯೋ ಇದಾಗಿದೆ.
ನೋಡಿ ಈ ವಿಡಿಯೋ…
https://twitter.com/Gulzar_sahab/status/1574058763098521600?t=9qYZRz5AHIMavl0D–oIDA&s=09
ಪ್ರಸ್ತುತ ಮನ ತಟ್ಟುವ ಈ ಸುಂದರ ವಿಡಿಯೋವನ್ನು ಟ್ವಿಟರ್ ನಲ್ಲಿ ‘ಜಿಂದಗಿ ಗುಲ್ಜಾರ್ ಹೈ’ ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. “ಮಗು ತನ್ನ ತಾಯಿಗೆ ಗುರುತಿಸುವಲ್ಲಿ ಫುಲ್ ಕನ್ಫ್ಯೂಸ್” ಎಂದು ಕ್ಯಾಪ್ಶನ್ ನಲ್ಲಿ ಬರೆಯಲಾಗಿದೆ.