Video; ಹುಡುಗ ಸ್ವಿಮ್ಮಿಂಗ್ ಪೂಲ್ ನಲ್ಲಿ ಬ್ಯಾಕ್ ಫ್ಲಿಪ್ ಮಾಡಲು ಹೋಗಿ ಯಾವ ಅವಾಂತರಕ್ಕೆ ಸಿಕ್ಕಿ ಹಾಕಿಕೊಂಡ..! ಒಮ್ಮೆ ನೋಡಿ.
ಸಾಹಸಕ್ಕೆ ಕೈ ಹಾಕುವುದರಲ್ಲಿ ದೊಡ್ಡವರಿಗಿಂತ ಮಕ್ಕಳು ಯಾವತ್ತೂ ಮುಂದಿರುತ್ತಾರೆ. ಕಾರಣ ಯಾವುದೇ ಒಂದು ಸ್ಟಂಟ್ ಮಾಡುವ ಮೊದಲು ಮುಂದಾಲೋಚನೆ ಮಾಡುವದರಲ್ಲಿ ಮಕ್ಕಳು ಹಿಂದೆ ಬೀಳುತ್ತಾರೆ. ಹೀಗಾಗಿ ಅದರ ಪರಿಣಾಮದ ಬಗ್ಗೆ ಒಳ್ಳೆಯದೇ ಆಗಲಿ ಅಥವಾ ಕೆಟ್ಟದ್ದೇ ಆಗಲೇ ಚಿಕ್ಕವರು ಹೆಚ್ಚಾಗಿ ಯೋಚಿಸುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಐಪಿಎಸ್ ಆಫೀಸರ್ ಆದ ದಿಪಾಂಶು ಕಾಬ್ರಾ ಅವರು ಟ್ವಿಟರ್ ಮುಖಾಂತರ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ನಿಮಗಾಗಿ ತಂದಿದ್ದೇವೆ.
ವಿಡಿಯೋದ ದೃಶ್ಯದಲ್ಲಿ ಹುಡುಗನೊಬ್ಬ ಸ್ವಿಮ್ಮಿಂಗ್ ಪೂಲ್ ದಂಡೆಯಲ್ಲಿರುವ ಉಡನ್ ಬೋರ್ಡ್ ಮೇಲೆ ನಿಂತು ಬ್ಯಾಕ್ ಫ್ಲಿಪ್ ಮಾಡಲು ಮುಂದಾಗುತ್ತಾನೆ. ಆದರೆ ಆತನಿಗೆ ಅದರ ಅಂದಾಜು ಸರಿಯಾಗಿ ಹತ್ತದೆ ಎಲ್ಲಿ ಜಂಪ್ ಮಾಡಿದ್ದಾನೆ ಮರಳಿ ಅಲ್ಲಿಯೇ ತಲೆ ಕೆಳಗಾಗಿ ಬೀಳುತ್ತಾನೆ. ಈ ಸಂದರ್ಭದಲ್ಲಿ ಸ್ವಿಮ್ಮಿಂಗ್ ಪೂಲ್ ಮತ್ತು ವುಡನ್ ಬೋರ್ಡ್ (platform) ಮಧ್ಯದಲ್ಲಿ ಇರುವ ಪುಟ್ಟ ಗ್ಯಾಪ್ ನಲ್ಲಿ ಹುಡುಗನ ತಲೆಯು ಒಳಗೆ ಸೇರುತ್ತದೆ.
ವಿಡಿಯೋ ನೋಡಿ
जीवन में Risk लेना चाहिए. पर कभी-कभी Calculated Risk ही लेना चाहिए. pic.twitter.com/No005WD5VM
— Dipanshu Kabra (@ipskabra) July 14, 2022
ದಿಪಾಂಶು ಕಾಬ್ರಾ ಅವರು ಪೋಸ್ಟ್ ಮಾಡಿದ ತಮ್ಮ ವಿಡಿಯೋಗೆ ಇಂಗ್ಲೀಷ್ ನಲ್ಲಿ, ಈ ರೀತಿಯಾಗಿ ಕ್ಯಾಪ್ಷನ್ ನೀಡಿದ್ದಾರೆ. “Risk should be taken in life. But sometimes calculated risk should be taken,” read the caption.