Brain Teaser Puzzle: ಈ ಬಸ್ ಯಾವ ಡೈರೆಕ್ಷನ್ ನಲ್ಲಿ ಚಲಿಸುತ್ತಿದೆ? ಬರೀ 20 ಸೆಕೆಂಡುಗಳಲ್ಲಿ ಉತ್ತರಿಸಲು ಸಾಧ್ಯವೇ?
ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಈಗ ನೇಟಿಜನ್ಸ್ ಗಳ ತಲೆ ಕೆಡಿಸುವ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ನೀವು ಬರೀ 20 ಸೆಕೆಂಡುಗಳಲ್ಲಿ ಉತ್ತರಿಸಬೇಕು. ಸ್ವೀಕರಿಸುವಿರಾ ಈ ಚಾಲೆಂಜ್?
ಪ್ರಸ್ತುತ ಈ ಲೇಖನದಲ್ಲಿ ಒಂದು ಚಿತ್ರವಿದೆ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಒಂದು ಬಸ್ ಕಂಡು ಬರುತ್ತಿದೆ. ವಿಶೇಷವೆಂದರೆ ಆ ಬಸ್ ನಿಂತಿಲ್ಲ, ಅದು ಚಲಿಸುತ್ತಿದೆ ಎಂದಾಗ ನಿಮಗೆ ಈ ಬಸ್ ಯಾವ ದಿಕ್ಕಿನೆಡೆಗೆ ಅಥವಾ ಡೈರೆಕ್ಷನ್ ನಲ್ಲಿ ಚಲಿಸುತ್ತಿದೆ ಎಂದು ಉತ್ತರಿಸಬೇಕಾಗಿದೆ.
ಹಾಗೆ ನೋಡಲಾಗಿ ಈ ಪ್ರಶ್ನೆಯ ಉತ್ತರ ತುಂಬಾ ಸರಳವೇ ಆಗಿದೆ. ಆದರೆ ಇದು ನಿಮ್ಮ ಬ್ರೈನ್ ಮೇಲೆ ಆಧಾರಿತವಾಗಿದೆ. ಕಾರಣ ನಿಮ್ಮ ಮೈಂಡ್ ಎಷ್ಟು ಶಾರ್ಪ್ ಇದೇ ಎಂಬುದು ಈ ಪಜಲ್ ಮುಖಾಂತರ ನಿಮಗೆ ತಿಳಿಯಲಿದೆ.

ಇನ್ನೊಂದು ನಿಮಗೆ ಚಾಲೆಂಜ್ ಏನೆಂದರೆ, ಈ ಪ್ರಶ್ನೆಯ ಉತ್ತರ ಬರೀ 20 ಸೆಕೆಂಡುಗಳಲ್ಲಿ ಉತ್ತರಿಸಲು ಪ್ರಯತ್ನಿಸಿ ಆಗ ಗೊತ್ತಾಗುತ್ತದೆ ನಿಮ್ಮ ಮೈಂಡ್ ಎಷ್ಟೊಂದು ಸ್ಪೀಡ್ ಓಡುತ್ತೆ ಎಂದು. ಕ್ರಿಯೇಟಿವ್ ಮೈಂಡ್ ಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಲು ಬರೀ 2 ರಿಂದ 3 ಸೆಕೆಂಡುಗಳು ಸಾಕು. ಚಿತ್ರವನ್ನು ನೋಡಲಾಗಿ ಈ ಪ್ರಶ್ನೆ ತುಂಬಾ ಸರಳವಾಗಿದೆ ಎಂದೂ ತಿಳಿಯಬೇಡಿ.
ಒಂದು ಕ್ಲೂ (ಹಿಂಟ್) ನೀಡುತ್ತೇವೆ ನೋಡಿ…
ಪ್ರಸ್ತುತ ಬಸ್ಸಿನ ಡ್ರೈವರ್ ನಮ್ಮಲ್ಲೇ ಅಂದ್ರೆ ಇಂಡಿಯನ್ ರೋಡ್ ಮೇಲೆಯೇ ನಡೆಸುತ್ತಿದ್ದಾನೆ ಎಂಬುದು ತಿಳಿದುಕೊಳ್ಳಿ.
ಮಿತ್ರರೇ, ಇಲ್ಲಿ ನೀಡಿದ ಪ್ರಶ್ನೆಗೆ ನೀವು ಒಂದು ವೇಳೆ ಸರಿಯಾದ ಉತ್ತರವನ್ನು ಹುಡುಕಿದ್ದೇ ಆದರೆ ನೀವು ಸೂಪರ್ ಹಾಗೂ ನಿಮ್ಮ ಮೈಂಡ್ ಡಬಲ್ ಸೂಪರ್ ಶಾರ್ಪ್ ಅಂತಲೇ ಹೇಳಬಹುದು. ಮತ್ತು ನಿಮಗೆ ಅಭಿನಂದನೆಗಳು. ಒಂದು ವೇಳೆ ನಿಮಗೆ ಈ ಪ್ರಶ್ನೆ ತುಂಬಾ ಕನ್ಫ್ಯೂಸ್ ಮಾಡಿದ್ದೇ ಆದರೆ ಉತ್ತರ ಹುಡುಕಲು ಸಾಧ್ಯವಾಗದಿದ್ದರೆ ನಾವೇ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ ನೋಡಿ.
ಉತ್ತರ…

ಬಸ್ಸಿನ ಈ ಚಿತ್ರದಲ್ಲಿ ಬಾಗಿಲು (ಡೋರ್) ಕಾಣಿಸುತ್ತಿಲ್ಲ. ಇದರ ಅರ್ಥ ಬಸ್ಸು ಬಲಬದಿಯ ಡೈರೆಕ್ಷನ್ ನಲ್ಲಿ ಚಲಿಸುತ್ತಿದೆ ಎಂದು ಗೊತ್ತಾಗುತ್ತದೆ. ಕಾರಣ ಭಾರತದಲ್ಲಿ ಸ್ಟೇರಿಂಗ್ ಬಸ್ಸಿನ ಬಲಬದಿಗೆ ಇದ್ದರೆ ಡೋರ್ ಎಡಬದಿಗೆ ಇರುತ್ತದೆ. ಹಾಗಾಗಿ ಈ ಇಮೇಜ್ ನಲ್ಲಿಯ ಬಸ್ಸು ಬಲಬದಿಯ ಡೈರೆಕ್ಷನ್ ನಲ್ಲಿ ಸಾಗುತ್ತಿದೆ, ಅಲ್ವಾ?