ಚೀನಾ ಸಂಸತ್ತಿನ ವಾರ್ಷಿಕ ಸಭೆಯ ತೀರ್ಮಾನ : ಕರೋನವನ್ನು ಸೋಲಿಸಲು ಹಸುವಿನ ಹಾಲು ಅಸ್ತ್ರ! ತನ್ನ ಪ್ರಜೆಗಳು ಕಡ್ಡಾಯವಾಗಿ ಹಾಲು ಕುಡಿಯಬೇಕೆಂದು ಆದೇಶ
ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ನಡುಗಿಸುತ್ತಿರುವ ಕಣ್ಣಿಗೆ ಕಾಣದ ವೈರಾಣು ಕೋವಿಡ್-19 ಬಂದಾಗಿನಿಂದ ಇಡೀ ಜಗತ್ತೇ ಭಯದಲ್ಲಿ ನಡುಗುತ್ತಿರುವುದು ಅಕ್ಷರಶಃ ಸತ್ಯ. ಅದರಲ್ಲೂ ನಮ್ಮ ತಾಯ್ನಾಡು ಭಾರತವಂತೂ ಈ ಮಹಾಮಾರಿಯ ಎರಡನೇ ಅಲೆಯಿಂದ ಸಾಕಷ್ಟು ಕಷ್ಟ ಅನುಭವಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇರುವ ವಿಚಾರ. ಸದ್ಯ ಇದರಿಂದ ಬಚಾವ್ ಆಗಲು ಜನರು ತರಹೇವಾರಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ಸರ್ಕಾರಗಳು ಲಾಕ್ ಡೌನ್ ಹೇರಿ ಜನರನ್ನು ಮನೆಯಲ್ಲಿ ಕುಳಿತಿರುವಂತೆ ಮಾಡಿ ವೈರಸ್ ಹರಡದಂತೆ ಮಾಡಲು ಹೆಣಗಾಡುತ್ತಿರಬೇಕಾದರೆ, ಜನರು ಕೂಡ ತಮ್ಮ ರಕ್ಷಣೆಗೆ ಬೇಕಾದ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೂ ಕೂಡ ಈ ಮಹಾಮಾರಿಯ ಕಾಟ ಜಾಸ್ತಿಯಾಗುತ್ತಲೇ ಸಾಗಿದೆ.
ಆದರೆ ಕೋವಿಡ್-19 ತವರೂರಾದ ಚೀನಾದ ಜನತೆ ಮಾತ್ರ ಈ ಕರೋನದಿಂದ ಸದ್ಯ ಸೇಫ್ ಆಗಿದ್ದಾರೆ. ಅಲ್ಲಿ ಬರುವ ಕರೋನ ಪಾಸಿಟಿವ್ ಸಂಖ್ಯೆಗಳು ಕೂಡ ತೀರಾ ಕಮ್ಮಿಯಾಗಿ ನೂರರ ಒಳಗೆ ಬಂದು ನಿಂತಿದೆ. ಇದರೊಂದಿಗೆ ಒಂದು ಆಶ್ಚರ್ಯಕರ ಸುದ್ದಿಯೊಂದು ಹೊರ ಬಂದಿದ್ದು ಅದೇನೆಂದರೆ, ಚೀನಾದ ಜನತೆ ಈ ಮಹಾಮಾರಿಯಿಂದ ಪಾರಾಗಲು ಆಕಳಿನ ಹಾಲನ್ನು ಬಳಸುತ್ತಿದ್ದಾರೆ ಎಂಬುದು.

ಇದರ ಹಿಂದಿನ ಕಾರಂವೆನೆಂದು ನೋಡುವುದಾದರೆ… ಆಕಳಿನ ಹಾಲಿನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಇರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಇದರ ಲಾಭ ಪಡೆಯಲು ತೀರ್ಮಾನಿಸಿರುವ ಚೀನಾ ಸರ್ಕಾರ ತನ್ನ ದೇಶದ ಪ್ರಜೆಗಳಿಗೆ ಪ್ರತಿ ದಿನ ಕಡಿಮೆ ಅಂದರೂ 300 ಗ್ರಾಂ ನಷ್ಟು ಹಾಲು ಕುಡಿಯಲೇಬೇಕು ಎಂಬ ಆದೇಶವನ್ನೇ ಹೊರಡಿಸಿದೆ!
ಬ್ಲೂಮ್ ಬರ್ಗ್ ವರದಿಯ ಪ್ರಕಾರ ಚೀನಾದ ಶಾಂಘಯ್ ನಗರದ ಕೆಹೂಆಷಾನ ಆಸ್ಪತ್ರೆಯ ಸಾಂಕ್ರಾಮಿಕ ರೋಗದ ತಜ್ಞ ವೈದ್ಯರಾದ ಜಾಂಗ್ ವೇನ್ ಹೊಂಗ್ ಅವರು ಎಲ್ಲಾ ಪಾಲಕರನ್ನು ಕುರಿತು ಒಂದು ಸಲಹೆ ನೀಡಿದ್ದಾರಂತೆ, ಅದೇನೆಂದರೆ ಪ್ರತಿ ಮಗುವಿಗೂ ದಿನಾಲು ಬೆಳಿಗ್ಗೆ ಬ್ರೇಕ್ ಫಾಸ್ಟ್ ನೊಂದಿಗೆ ಹಾಲು ಹಾಗೂ ಮೊಟ್ಟೆ ಕೊಡಬೇಕು ಎಂದು.
ಇದನ್ನು ಚೀನಾದ ಹಲವಾರು ಸೋಶಿಯಲ್ ಮೀಡಿಯಾ ಯೂಸರ್ಸ್ ವಿರೋಧಿಸಿದರು, ಏಕೆಂದರೆ ಅವರು ತಮ್ಮ ಬೆಳಗಿನ ಉಪಹಾರವಾಗಿ ಯಾವಾಗಲೂ ಬನ್ ಹಾಗೂ ಗಂಜಿ(ಒಂದು ಪ್ರಕಾರದ ವೋಟ್ ಮೀಲ್) ಯನ್ನು ಸೇವಿಸುತ್ತಾರೆ. ಇದು ನಮ್ಮ ರೂಢಿಗತ ಆಹಾರ, ಇದನ್ನು ಬಿಟ್ಟು ಹಾಲು ಮೊಟ್ಟೆ ಸೇವಿಸಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರ ವಾದವಾಗಿತ್ತು.

ಚೀನಾದ ಜನರ ವಾದದ ಪ್ರಕಾರ, ತಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಪ್ರಾಣಿಜನ್ಯ ಪ್ರೊಟೀನ್ ಇದ್ದೆ ಇರುತ್ತದೆ, ಕೇವಲ ಊಟದ ಡಯಟ್ ಬದಲಿಸುವದರಿಂದ ಕರೋನ ವೈರಸ್ ನಿಂದ ಪಾರಾಗುವುದು ಹೇಗೆ ಸಾಧ್ಯ, ಅದರಲ್ಲೂ ಊಟದಲ್ಲಿ ಪ್ರೊಟೀನ್ ಸೇರ್ಪಡೆ ಇನ್ನೂ ಅಸಂಬದ್ಧ ನಿರ್ಧಾರ ಎಂದು ವಾದಿಸಿದರು.
ಆದರೂ ಕೂಡ ಚೀನಾ ಸರ್ಕಾರದ ಗುರಿ 2025 ರ ಹೊತ್ತಿಗೆ 450 ಟನ್ ಹಾಲು ಉತ್ಪಾದನೆ ಮಾಡುವುದೇ ಆಗಿದೆ. ಅಷ್ಟೇ ಅಲ್ಲದೇ ಆಕಳುಗಳ ಪಾಲನೆ ಪೋಷಣೆಯ ಮೇಲೂ ಇಲ್ಲಿನ ಸರ್ಕಾರ ಕಣ್ಣು ಇಟ್ಟಿದೆ. ಇನ್ನೊಂದು ಕಡೆ ಅದೇ ದೇಶದ ಹಲವಾರು ಜನರು ಹಾಲು ಹಾಗೂ ಹಾಲಿನಿಂದ ಮಾಡಿದ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸುತ್ತಿರುವುದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನ ಶೇರ್ ಮಾಡುತ್ತಿದ್ದಾರೆ.
ಕೆಲವು ಜನರಿಗೆ ಹಾಲು ಪಚನವಾಗದ ಕಾರಣ ಅರ್ಧ ಹಾಲು ಅರ್ಧ ನೀರು ಬೆರೆಸಿ ಕುಡಿಯುತ್ತಿದ್ದಾರೆ. ಇವೆಲ್ಲ ವಾದಗಳ ನಂತರ ರಿಸರ್ಚ್ ಗಳ ವರದಿ ಪ್ರಕಾರ ಆಕಳಿನ ಹಾಲು ಹೆಚ್ಚು ನ್ಯೂಟ್ರಿಷನ್ ಹೊಂದಿರುವುದು ಖಚಿತವಾಗಿದೆ ಹಾಗೂ ಪ್ರಾಣಿಗಳ ದೇಹದಲ್ಲಿ ಒಂದು ರೀತಿಯಾದ ವಿಶೇಷ Antibodies ಇರುತ್ತವೆ ಆ ಕಾರಣದಿಂದ ಅವುಗಳ ಹಾಲು ಕುಡಿದರೆ ಆ Antibodies ಮಾನವನ ದೇಹ ಸೇರಿ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ ಎಂದು ಸಾಬೀತಾಗಿದೆ.

ಚೀನಾದ ಈ ತಂತ್ರವನ್ನು ನಾವೂ ನಮ್ಮಲ್ಲಿ ಅಳವಡಿಸಿಕೊಳ್ಳಬಹುದು. ಸಾಮಾನ್ಯವಾಗಿ ನಮ್ಮಲ್ಲಿ ಮೊದಲಿನಿಂದಲೂ ಮನೆಯಲ್ಲಿ ಮಕ್ಕಳಿಗೆ ಹಾಲು ಕೊಡುವುದು ಅಭ್ಯಾಸ ಇದೆಯಾದರೂ, ಬಿಟ್ಟಿರುವ ಕೆಲವರು ಅದನ್ನು ಕಂಟಿನ್ಯೂ ಮಾಡಬೇಕು ಹಾಗೂ ದೊಡ್ಡವರು ಕೂಡ ಸೇವಿಸಬೇಕು.
-Team Infotrend