Video; ಡಾನ್ಸ್ ಬರದೇ ಇದ್ದರೂ ವರನ ಮಿತ್ರರ ಜೊತೆಗೆ ನಡು ರಸ್ತೆಯಲ್ಲಿ ಸೊಂಟ ಬಳುಕಿಸಿಯೇ ಬಿಟ್ಟಳು ನವವಧು.

ಮದುವೆಯ ಪ್ರಸಂಗಗಳ ಎಲ್ಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿವೆ. ಮದುವೆ ಸಂದರ್ಭದಲ್ಲಿಯ ಎಲ್ಲ ಪ್ರಸಂಗಗಳಲ್ಲಿಯ ವಿಡಿಯೋಗಳನ್ನು ಮಾಡುವುದು ಮತ್ತು ಸೋಶಿಯಲ್ ಮೀಡಿಯಾ ಸೈಟ್ ಗಳಲ್ಲಿ ಅವುಗಳನ್ನು ಹರಿಬಿಡುವುದು ಈಗ ತುಂಬಾ ಸಾಮಾನ್ಯವಾಗಿ ಬಿಟ್ಟಿದೆ.

ಮದುವೆಯು ವರ ಮತ್ತು ವಧುವಿನ ಜೀವನದಲ್ಲಿ ಎಲ್ಲಕ್ಕೂ ಮಹತ್ವದ ಕ್ಷಣವಾಗಿರುತ್ತದೆ. ಇತ್ತೀಚೆಗಂತೂ ಮದುವೆಗಳು ತುಂಬಾ ವಿಜ್ರಂಬಣೆಯಿಂದ ನಡೆಯುತ್ತಿವೆ. ಮದುವೆಯ ಪ್ರತಿಯೊಂದು ಸೀನ್ಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತಿವೆ. ಮದುವೆಯಲ್ಲಿ ನಡೆದ ಅನೇಕ ವಿಶೇಷ ದೃಶ್ಯಗಳು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುವುದುಂಟು. ಈಗ ಇಲ್ಲಿ ನೋಡಲಿರುವ ಮದುವೆಯ ದೃಶ್ಯದಲ್ಲಿ ವಧು ಮತ್ತು ವರ ಸಕ್ಕತ್ತಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ.

ಪ್ರಸ್ತುತ ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಮದುವೆ ಸಂದರ್ಭದಲ್ಲಿ ಮೆರವಣಿಗೆ ನಡೆಯುತ್ತಿರುವಾಗ ವಧು ತನ್ನ ಭಾವಿಪತಿ ಹಾಗೂ ಆತನ ಮಿತ್ರರೊಂದಿಗೆ ಹೆಜ್ಜೆ ಇಡುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ವರನ ಮಿತ್ರರು ಡಾನ್ಸ್ ಮಾಡಲು ಶುರುಮಾಡುತ್ತಾರೆ. ಅವರ ಜೊತೆಗೆ ಮೊದಲು ವರ ನಂತರ ವಧು ಇಬ್ಬರು ಡಾನ್ಸ್ ಶುರುಮಾಡುತ್ತಾರೆ. ಈ ಸಂದರ್ಭದಲ್ಲಿ ವಧುವಿಗೆ ಕುಣಿಯಲು ಬಾರದೆ ಇದ್ದರೂ ವರ ಹಾಗೂ ಆತನ ಮಿತ್ರರ ಜೊತೆಗೆ ಒಂದು ಕೈ ನೋಡಿಯೇ ಬಿಡುತ್ತಾಳೆ ವಧು. ಪ್ರಸ್ತುತ ಇಬ್ಬರ ಈ ಮುಕ್ತ ನೃತ್ಯ ಸೋಶಿಯಲ್ ಮೀಡಿಯಾದ ಯೂಸರ್ಸ್ಗಳಿಗೆ ತುಂಬಾ ಇಷ್ಟವಾಗುತ್ತಿದೆ.

ವೀಡಿಯೋ ನೋಡಿ

ವಧು-ವರ ಇಬ್ಬರು ಕೂಡಿ ಮಾಡಿದ ಈ ಸಿಂಪಲ್ ಡ್ಯಾನ್ಸ್ ನ ವಿಡಿಯೋವನ್ನು ganu_mayu_patil_0491 ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 8 ಲಕ್ಷ 89 ಸಾವಿರ ವೀಕ್ಷಣೆಯನ್ನು ಪಡೆದಿದ್ದು 41 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಕಮೆಂಟ್ ಸೆಕ್ಷನ್ ಬಗ್ಗೆ ಹೇಳುವುದಾದರೆ ಒಬ್ಬ ಯೂಸರ್ ತುಂಬಾ ಚೆನ್ನಾಗಿ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾನೆ. ಆತ ಹೇಳುವ ಪ್ರಕಾರ, “ಮದುವೆಯನ್ನು ಇಷ್ಟಪಡುವ ಹುಡುಗಿಯ ಜೊತೆ ಮದುವೆಯಾದರೆ ಮದುವೆ ಹೀಗೆಯೇ ಆಗುತ್ತದೆ” ಎಂದಿದ್ದಾನೆ. ಇನ್ನೊಬ್ಬ ಯೂಸರ್ ಈ ಡಾನ್ಸ್ ನೋಡಿ, ಇಬ್ಬರದ್ದು 36 ರಲ್ಲಿ ಮುವತ್ತಾರೂ ಗುಣಗಳು ಕೂಡಿರಬೇಕು ಎಂದಿದ್ದಾನೆ.