Articles

VIDEO : ದೆವ್ವ – ಭೂತ ಇದ್ದಾವಾ? ಈ ವಿಡಿಯೊ ನೋಡಿದ ಮೇಲೆ ಕಾಮೆಂಟ್ ಮಾಡಿ

ನಿಮಗೆ ವಿಸ್ಮಯ ಸಂಗತಿಗಳು ಎಂಬ ಫೆಸ್ಬುಕ್ ಪೇಜ್ ಹಾಗೂ ಯೂಟ್ಯೂಬ್ ಚಾನೆಲ್ ಬಗ್ಗೆ ಗೊತ್ತಿರಬಹುದು. ಹಲವಾರು ವಾಟ್ಸಪ್ ಗ್ರುಪ್ ಮಾಡಿ ಆ ಮೂಲಕ ಸಾಕಷ್ಟು ಜ್ಞಾನ ಹರಡುವ ಕೆಲಸ ಮಾಡುತ್ತಿದ್ದಾರೆ. ಇಮೇಜಸ್ ಮೂಲಕ ಅವರ ಸಾಕಷ್ಟು ಮಾಹಿತಿಯುಳ್ಳ ಚಿತ್ರ ನೀವು ನೋಡಿರಬಹುದು. ಈಗ ಅವರದೇ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೊ ಅಪ್ ಲೋಡ್ ಮಾಡಲಾಗಿದೆ.

ಕ್ಯಾಮೆರಾದಲ್ಲಿ ಸೆರೆಸಿಕ್ಕ ಭೂತದ ಚೇಷ್ಟೆಗಳು ಎಂಬ ಶೀರ್ಷಿಕೆಯಡಿ ಈ ವಿಡಿಯೊ ಹಾಕಲಾಗಿದ್ದು, ಅದರಲ್ಲಿ ಭಾರತ ಹಾಗೂ ವಿದೇಶಗಳಲ್ಲಿ ಕಾಣಿಸಿದ್ದಾವೆ ಎನ್ನಲಾದ ಕೆಲವು ಭೂತ – ದೆವ್ವದ ದೃಶ್ಯದ ತುಣುಕುಗಳಿವೆ. ತುಂಬಾ ಜನ ದೆವ್ವ – ಭೂತ ಇವನ್ನೆಲ್ಲ ನಂಬಲ್ಲ, ಅವೆಲ್ಲ ನಮ್ಮ ಭ್ರಮೆ ಎನ್ನುತ್ತಾರೆ.

ಅದರಲ್ಲೂ ನಗರ ಪ್ರದೇಶದ ಜನ ಯಾವತ್ತೂ ಇಂಥವುಗಳನ್ನು ನಂಬುವುದಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಜನ ದೆವ್ವ – ಭೂತದ ಇರುವಿಕೆಯನ್ನು ನಂಬುತ್ತಾರೆ. ಕಾರಣ ಅವರಿಗೆ ಈ ಬಗ್ಗೆ ಹಲವು ಸಲ ಅನುಭವ ಆಗಿರುತ್ತದೆ. ಯಾವುದಾದರೂ ಅಂಥ ದೆವ್ವ ಭೂತದ ಪ್ರಶ್ನೆ ಎದ್ದಾಗಲೆಲ್ಲ, ವಿಜ್ಞಾನ ಬಲ್ಲವರು ಅಲ್ಲಿ ಹೋಗಿ ಪವಾಡ ಬಯಲು ಮಾಡಿದ ಉದಾಹರಣೆಗಳಿವೆ.

ಆದರೆ ಅವರನ್ನು ಮತ್ತೆ ಕೆಲವು ಪ್ರದೇಶಗಳಿಗೆ ಬನ್ರಪ್ಪಾ ಬಯಲು ಮಾಡಬನ್ನಿ ಎಂದರೆ ಬರುವುದಿಲ್ಲ. ಕಾರಣ ನಿರ್ಧಿಷ್ಟವಾಗಿ ಇಂಥದೇ ಆಕೃತಿಯ ಇಂಥದೇ ಶಕ್ತಿ ಇಲ್ಲವೆನ್ನಬಹುದಾದರೂ ಒಟ್ನಲ್ಲಿ ಅಂಥ ಒಂದು ಶಕ್ತಿ ಇರುವುದಂತೂ ನಿಜ. ಇನ್ನೂ ಕೆಲವರ ಪ್ರಕಾರ, ದೇವರು ಇದ್ದಾನೆ ಅಂತ ನೀವು ನಂಬುವುದಾದರೆ, ದೆವ್ವ ಕೂಡ ಇದೆ ಅಂತ ಹೇಳುತ್ತಾರೆ.

ಇದನ್ನು ಒಪ್ಪಬಹುದು. ಆ ಶಕ್ತಿ ಇದೆ ಅಂದ ಮೇಲೆ ಈ ಶಕ್ತಿಯೂ ಇರಲೇಬೇಕು. ಭೂತ ಭಂಗಲೆ ಎಂದು ಕರೆಸಿಕೊಳ್ಳುವ ಅದೆಷ್ಟೋ ಜಾಗಗಳಿಗೆ ಇದುವರೆಗೂ ಜನ ಹೋಗಲು ಹೆದರುತ್ತಾರೆ, ಪವಾಡ ಬಯಲು ಮಾಡುವವರೂ ಜಾಣಕುರುಡು ಪ್ರದರ್ಶಿಸುತ್ತಾರೆ.ಅಂಥ ಕೆಲವು ವಿಡಿಯೊ ತುಣುಕು ಇಲ್ಲಿವೆ ನೋಡಿ…
-Team Infotrend

Leave a Comment

Your email address will not be published. Required fields are marked *