ವೈರಲ್ ಆಯ್ತು ಚಹಲ್ ಭಾವಿ ಪತ್ನಿ ಧನಾಶ್ರೀ ವರ್ಮಾ ಮಾಡಿದ ನವರಾತ್ರಿ ಸ್ಪೆಷಲ್ ಡಾನ್ಸ್ Video! ನೋಡಿ ಈ ಸಖತ್ ಡಾನ್ಸ್ ವಿಡಿಯೋ

ಒಂದು ಕಡೆ ಯಜ್ವೇಂದ್ರ ಚಹಲ್ ಐಪಿಎಲ್ ನಲ್ಲಿ ತಮ್ಮ ಬೌಲಿಂಗ್ ನ ಸಾಧನೆಯಿಂದ ಸುದ್ದಿಗಳಲ್ಲಿ ಕಾಣಿಸಿಕೊಂಡು ಮಿಂಚುತ್ತಿದ್ದರೆ ಇನ್ನೊಂದು ಕಡೆ ಅವರ ಭಾವೀ ಪತ್ನಿ ಧನಾಶ್ರೀ ವರ್ಮಾ ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿ ಸದ್ದು ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸಿಂಗ್ ಸೆನ್ಸೇಷನ್ ಎಂದರೆ ಅದು ಧನಾಶ್ರೀ ವರ್ಮಾ. ಒಂದಾದ ನಂತರ ಮತ್ತೊಂದು ಎನ್ನುವಂತೆ ಧನಾಶ್ರೀ ವರ್ಮಾ ಅವರ ಡಾನ್ಸಿಂಗ್ ವೀಡಿಯೋಗಳು ನಿರಂತರವಾಗಿ ಭರ್ಜರಿ ಗೆಲುವನ್ನು ಸಾಧಿಸುತ್ತಾ ವೈರಲ್ ಆಗುತ್ತಿವೆ. ಧನಾಶ್ರೀ ವರ್ಮಾ ಅವರಿಗೆ ಯಜ್ವೇಂದ್ರ ಜೊತೆ ನಿಶ್ಚಿತಾರ್ಥ ಆದ ಮೇಲೆ ಧನಾಶ್ರೀ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಒಂದು ದೊಡ್ಡ ಏರಿಕೆಯೇ ಆಗಿರುವುದು ಕೂಡಾ ಸುಳ್ಳಲ್ಲ.

ಧನಾಶ್ರೀ ಬಾಲಿವುಡ್ ಹಾಗೂ ಪಂಜಾಬಿ ಹಾಡುಗಳು ಹಾಗೂ ಇಂಗ್ಲೀಷ್ ನ ಹಾಡು ಗಳಿಗೂ ಕೂಡಾ ತನ್ನದೇ ಆದ ಕೊರಿಯೋಗ್ರಫಿ ಮಾಡಿ ತನ್ನ ಡಾನ್ಸ್ ಮೂವ್ ಗಳು ಹಾಗೂ ಆ ಡಾನ್ಸ್ ಗಾಗಿ ತೊಡುವ ಡ್ರೆಸ್, ಎಕ್ಸ್ ಪ್ರೆಶನ್ ಗಳ ಮೂಲಕ ಅಭಿಮಾನಿಗಳು ಹಾಗೂ ಡಾನ್ಸ ಪ್ರಿಯರ ಎದೆಯಲ್ಲಿ ಕಿಚ್ಚನ್ನು ಹಚ್ಚುತ್ತಿದ್ದಾರೆ. ವೃತ್ತಿಯಿಂದ ಧನಾಶ್ರೀ ಡಾಕ್ಟರ್ ಆದರೆ ಪ್ರವೃತ್ತಿ ಡಾನ್ಸರ್ ಕಮ್ ಕೊರಿಯೋಗ್ರಫರ್ ಆಗಿದ್ದು ಜನಪ್ರಿಯ ಯೂಟ್ಯೂಬರ್ ಕೂಡಾ ಹೌದು. ಧನಾಶ್ರೀ ಅವರ ಡಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆಯುತ್ತದೆ ಎಂದರೆ ಆಕೆಯ ಮೇಲೆ ಕ್ರೇಜ್ ಹೇಗಿದೆ? ಎಂದು ಊಹಿಸಬಹುದು.

ನವರಾತ್ರಿ ಆಗಮನದ ಹಿನ್ನೆಲೆಯಲ್ಲಿ ಧನಾಶ್ರೀ ಅವರು ಹೊಸ ಡಾನ್ಸ್ ವೀಡಿಯೋ ಒಂದನ್ನು ಮಾಡಿದ್ದಾರೆ. ಈ ಬಾರಿ ಅವರು ವೀಡಿಯೋದಲ್ಲಿ ವೈಶಾಲಿ ಸಾಗರ್ ಜೊತೆ ಸೇರಿ ಡಾನ್ಸ್ ಮಾಡಿದ್ದಾರೆ. ಈ ಡಾನ್ಸ್ ನಲ್ಲಿ ಸೊಂಟ ಬಳುಕಿಸಿ ಕುಣಿದಿರುವ ಧನಾಶ್ರೀ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಈ ಹೊಸ ಡಾನ್ಸ್ ವೀಡಿಯೋದ ಒಂದು ಝಲಕ್ ಅನ್ನು ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದ ಅವರ ಅಭಿಮಾನಿಗಳು ಆಕೆಯ ನೃತ್ಯ ಶೈಲಿಗೆ ಫಿದಾ ಆಗಿದ್ದು, ಮೆಚ್ಚುಗೆಗಳ ಮಳೆಯನ್ನೇ ಸುರಿಸುತ್ತಿದ್ದು, ವೈರಲ್ ವೀಡಿಯೋಗಳ ಪಟ್ಟಿಗೆ ಧನಾಶ್ರೀ ಅವರ ಈ ಹೊಸ ವೀಡಿಯೋ ಕೂಡಾ ಸೇರ್ಪಡೆ ಆಗೋದಿಕ್ಕೆ ಸಜ್ಜಾಗಿದೆ.

ನವರಾತ್ರಿ ಹಿನ್ನೆಲೆಯಲ್ಲಿ ಫಾಲ್ಗುಣಿ ಪಾಥಕ್ ಅವರ ಮೈನೇ ಪಾಯಲ್ ನೇ ಚನ್ಕಾಯಿ ಮತ್ತು ಪರಿ ಹೂ ಮೇ ಹಾಡಿಗೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದಾರೆ ಧನಾಶ್ರೀ. ಮೊದಲಿಗೆ ಬಿಳಿ ಬಣ್ಣದ ಲೆಹಂಗಾದಲ್ಲಿ ಕಾಣಿಸಿಕೊಂಡ ಅವರು, ನಂತರ ನಂತರ ಕೆಂಪು ಮತ್ತು ಕಂದು ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದಾರೆ. ಅವರ ಡಾನ್ಸ್ ಮೂವ್ ಗಳು ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಡುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ. ಗುಜರಾತಿ ಸಾಂಪ್ರದಾಯಿಕ ನೃತ್ಯ ವಾದ ಗಾರ್ಭಾ ನೃತ್ಯದ ಝುಲಕ್ ಕೂಡಾ ಅವರ ಈ ಹೊಸ ಡಾನ್ಸ್ ನಲ್ಲಿ ಸೇರಿದ್ದು ನವರಾತ್ರಿ ವಿಶೇಷ ವೀಡಿಯೋ ಇದಾಗಿದೆ.‌

ವಿಡಿಯೋ ನೋಡಿ

ಧನಾಶ್ರೀ ಅವರ ಎಕ್ಸಪ್ರೆಶನ್ ಈ ಡಾನ್ಸ್ ವೀಡಿಯೋದಲ್ಲಿ ಪ್ಲಸ್ ಪಾಯಿಂಟ್ ಆಗಿದೆ. ಧನಾಶ್ರೀ ವರ್ಮಾ ಅವರ ಡಾನ್ಸ್ ವೀಡಿಯೋಗಳು ಮೊದಲಿನಿಂದ ಇತ್ತಾದರೂ ಆಕೆ ಜನಪ್ರಿಯತೆಯನ್ನು ಪಡೆದಿರುವುದು ಇತ್ತೀಚಿನ ಕೆಲವು ತಿಂಗಳುಗಳಿಂದ. ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಜೊತೆ ನಿಶ್ಚಿತಾರ್ಥ ಆಗಿ ಆ ಫೋಟೋಗಳು ಎಲ್ಲೆಡೆ ವೈರಲ್ ಅದ ಬಳಿಕ ಧನಾಶ್ರೀ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರ ಅಭಿಮಾನಿಗಳು, ಹಿಂಬಾಲಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು ಮಾತ್ರವೇ ಅಲ್ಲದೇ ಅವರ ವೀಡಿಯೋಗಳು ಭರ್ಜರಿ ವೈರಲ್ ಆಗುತ್ತಲೇ ಇವೆ.