ವಿಶಿಷ್ಟ ವಿನ್ಯಾಸದ ಫೋಲ್ಡಿಂಗ್ ಸ್ಟೇರ್ ಕೇಸ್ ನೋಡಿ ಬೆರಗಾದ ಆನಂದ್ ಮಹೀಂದ್ರಾ! ಶೇರ್ ಮಾಡಿದರು ಸ್ಪೆಷಲ್ ವಿಡಿಯೋ…
ಭಾರತೀಯ ಜನರಲ್ಲಿ ಟ್ಯಾಲೆಂಟ್ ಗೆ ಏನೂ ಕಮ್ಮಿ ಇಲ್ಲ. ಇದರ ಉದಾಹರಣೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತದೆ. ಮಹಿಂದ್ರ ಮಾಲೀಕರಾದ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಇವರು ತಮ್ಮ ಅಕೌಂಟಿನಿಂದ ಸತತವಾಗಿ ಅಭಿಮಾನಿಗಳಿಗಾಗಿ ಒಳ್ಳೊಳ್ಳೆಯ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಮತ್ತೆ ತಮ್ಮ ಟ್ವಿಟರ್ ಅಕೌಂಟ್ ನಿಂದ ಸ್ಪೆಷಲ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಡಿಯೋ ತುಂಬಾ ಚರ್ಚೆಯಲ್ಲಿದೆ.
ಅವರು ಶೇರ್ ಮಾಡಿರುವ ವಿಡಿಯೋದಲ್ಲಿ ವಿಶಿಷ್ಟ ವಿನ್ಯಾಸದ ಇನೋವೇಟಿವ್ ಸ್ಟೇರ್ ಕೇಸ್ ನೋಡಲು ಸಿಗುತ್ತದೆ. ಇದನ್ನು ನೋಡಿದ ನಂತರ ಆನಂದ್ ಮಹೀಂದ್ರಾ ಅವರು ಸಹ ಬೆರಗಾಗಿದ್ದಾರೆ. ಕಾರಣ ಈ ಸ್ಟೇರ್ ಕೇಸ್ ಅವಶ್ಯಕತೆ ಇದ್ದಾಗ ಮೆಟ್ಟಿಲುಗಳಂತೆ ಉಪಯೋಗ ಮಾಡಬಹುದು. ಅವಶ್ಯಕತೆ ಇಲ್ಲದಾಗ ಇದನ್ನು ತುಂಬಾ ಚೆನ್ನಾಗಿ ಫೋಲ್ಡ್ ಮಾಡಿ ಗೋಡೆಗೆ ಆನಿಸಬಹುದು. ಈ ಆವಿಷ್ಕಾರದ ಮೇಲೆ ವ್ಯಕ್ತಿಯು ಸಹಜವಾಗಿ ಕೆಳಗೆ ನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ನಡೆದು ಬರುವದು ಕಂಡು ಬರುತ್ತದೆ.
ವಿಡಿಯೋ ನೋಡಿ
Outstanding. So simple yet creative. Apart from de-cluttering space, this actually adds an attractive aesthetic element to an otherwise stark exterior wall. Should make Scandinavian designers envious!! (Don’t know where this is from. Received in my #whatsappwonderbox ) pic.twitter.com/IBC6RR591y
— anand mahindra (@anandmahindra) July 16, 2022
ಇದನ್ನು ನೋಡಿದ ಆನಂದ್ ಮಹೇಂದ್ರ ಅವರು ಇದರ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದಾರೆ. ನಿಜಕ್ಕೂ ಇದು ತುಂಬಾ ಅದ್ಭುತವಾಗಿದೆ. ಈ ಅದ್ಭುತ ವಿನ್ಯಾಸ ಎಲ್ಲಿಯದು ಎಂಬುದು ನನಗೆ ಗೊತ್ತಿಲ್ಲ, ಆದರೆ ನನ್ನ ವಾಟ್ಸಪ್ ವಂಡರ್ ಗ್ರೂಪ್ ನಲ್ಲಿ ಬಂದಿದೆ ಎಂದು ಹೊಗಳಿದ್ದಾರೆ.