VIDEO : ಸಾಕಿದ ಮಾಲಕಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ನಲ್ಲಿ ಹಿಂದೆಯೇ ಓಡಿ ಆಸ್ಪತ್ರೆ ತಲುಪಿ ಅಲ್ಲೇ ಕಾಯುತ್ತಾ ಕುಳಿತ ನಾಯಿ..! ವಿಡಿಯೊ ನೋಡಿ

ಭೂಮಿಯ ಮೇಲೆ ಮನುಷ್ಯ ಬುದ್ದಿ ಜೀವಿಯಾಗಿರಬಹುದು ಆದರೆ, ಅವನನ್ನು ನಂಬುವುದು ಬಲು ಕಷ್ಟ. ಏಕೆಂದರೆ ಈತ ತನ್ನ ಬುದ್ದಿ ಶಕ್ತಿಯಿಂದ ಒಳ್ಳೆಯ ಕೆಲಸವನ್ನು ಮಾಡಬಹುದು ಅಥವಾ ಕೆಟ್ಟ ಕೆಲಸವನ್ನು. ಆದರೆ ಅದೇ ಭೂಮಿಯ ಮೇಲೆ ಇದೆ ಮನುಷ್ಯ ಸಾಕುತ್ತಿರುವ ಸಾಕು ಪ್ರಾಣಿಗಳು ಮನುಷ್ಯನನ್ನು ಅದೆಷ್ಟು ನಂಬುತ್ತವೆ ಎಂದರೆ, ಆತನಿಗೋಸ್ಕರ ಅಕ್ಷರಶ ಪ್ರಾ ‘ಣ ಬೇಕಾದರೂ ಕೊಡುತ್ತವೆ.

ತನ್ನನ್ನು ಸಾಕಿ ತನಗೆ ಒಂದು ತುತ್ತು ಊಟ ಕೊಟ್ಟ ಮಾಲೀಕನನ್ನು ಒಂದರೆಕ್ಷಣವೂ ಬಿಟ್ಟಿರಲಾರವು, ಅದರಲ್ಲೂ ನಾಯಿಗಳು ಭೂಮಿಯ ಮೇಲಿನ ಅತ್ಯಂತ ನಂಬಿಗಸ್ತ ಪ್ರಾಣಿ. ಇದನ್ನು ಸಾಕಿದ ಮಾಲೀಕನೆ ಇದಕ್ಕೆ ದೇವರು ಇದ್ದಂತೆ. ಆತ ಎಲ್ಲಿಗಾದರೂ ಹೋದರೆ ವಾಪಸ್ ಬರೋವರೆಗೂ ಮನೆಯನ್ನು ಕಾಯುತ್ತವೆ, ಆತನ ಹೊಲ ಗದ್ದೆಗಳನ್ನು ಕೂಡ ಕಾಯುತ್ತವೆ.

ಇಂತಹುದೆ ಒಂದು ಪ್ರಾಣಿ ತನ್ನ ಮಾಲೀಕಳ ಮೇಲೆ ತೋರಿಸಿದ ಪ್ರೀತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ತನ್ನನ್ನು ಸಾಕಿದ ಮಾಲಿಕಳಿಗೆ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯುಲಾಗುತ್ತಿತ್ತು.

ಆಗ ಆ ಆಂಬುಲೆನ್ಸ್ ಹಿಂದೆಯೇ ಗೋಲ್ಡನ್ ರಿಟ್ರಿವರ್ ಜಾತಿಗೆ ಸೇರಿದ ಒಂದು ನಾಯಿ ಓಡುತ್ತಿತ್ತು. ಇದನ್ನು ನೋಡಿದ ಎಂಥವರ ಕಣ್ಣು ಕೂಡ ಒದ್ದೆಯಾಗದೆ ಇರಲಾರವು. ಅಷ್ಟು ಮುಗ್ಧವಾಗಿ ಆ ಆಂಬುಲೆನ್ಸ್ ಹಿಂದೆ ಹಿಂದೆಯೇ ಅದರಷ್ಟೇ ವೇಗವಾಗಿ ಓಡಿ ಕೊನೆಗೂ ಆಸ್ಪತ್ರೆಯನ್ನು ತಲುಪಿಯೇ ಬಿಟ್ಟಿತು..!.

ಮಾಲೀಕಳನ್ನು ಆಂಬುಲೆನ್ಸ್ ನಲ್ಲಿ ಹತ್ತಿಸಿದಾಗ ಈ ನಾಯಿಯು ಕೂಡ ಆಂಬುಲೆನ್ಸ್ ನ ಒಳಗೆ ಹತ್ತಲು ಪ್ರಯತ್ನ ಮಾಡಿತು, ಆದರೆ ಸ್ವಚ್ಛತೆ ಹಾಗೂ ಇನ್ಫೆಕ್ಷನ್ ಕಾರಣದಿಂದ ಒಳಗೆ ಹತ್ತಿಸಿಕೊಳ್ಳಲಿಲ್ಲ. ನಂತರ ಇದನ್ನು ಬಿಟ್ಟು ಆಂಬುಲೆನ್ಸ್ ಆಸ್ಪತ್ರೆ ಕಡೆಗೆ ಹೊರಟಾಗ ಮನೆ ಕಡೆಗೆ ಹೊರಡದ ಈ ನಾಯಿ ಆ ಆಂಬುಲೆನ್ಸ್ ಹಿಂದೇಯೇ ಓಡತೊಡಗಿತು.

ಅದೇಷ್ಟು ದೂರ ಬರಬಹುದು ವಾಪಸ್ ಹೋಗುತ್ತದೆ ಎಂದೇ ಅಂದುಕೊಂಡಿದ್ದರು ಆ ಆಂಬುಲೆನ್ಸ್ ನಲ್ಲಿದ್ದವರು. ಆದರೆ ಇದು ಆ ಆಂಬುಲೆನ್ಸ್ ನ ಹಿಂದೆಯೇ ಓಡಿ ಓಡಿ ಆಸ್ಪತ್ರೆ ತಲುಪುತ್ತದೆ, ಈ ವಿಡಿಯೋ ಕೊನೆ ಹಂತಕ್ಕೆ ಬಂದಾಗ ನಾಯಿಯು ಆಸ್ಪತ್ರೆಯ ಹೊರಭಾಗದಲ್ಲಿ ನಿಂತಿರುತ್ತದೆ.

ಅದು ನಿಂತಿರುವ ಭಂಗಿ ಹೇಗಿದೆಯೆಂದರೆ, ತನ್ನ ಮಾಲೀಕಳು ಹುಷಾರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರುವವರೆಗೂ ಅಲ್ಲಿಂದ ಕದಲುವ ಹಾಗೆ ಕಾಣಿಸುತ್ತಿಲ್ಲ, ಅದರ ಮುಖದ ಹಾವ ಭಾವ ಹೇಗಿದೆಯೆಂದರೆ ತನ್ನ ಮಾಲೀಕಳು ಹೊರಗೆ ಬರುವವರೆಗೂ ಆಹಾರವನ್ನು ಸಹ ಸೇವಿಸುವಂತೆ ಕಾಣುತ್ತಿಲ್ಲ ಎಂದು ತುಂಬಾ ಜನ ಕಾಮೆಂಟಿಸಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋ ಟರ್ಕಿ ದೇಶದ ಇಸ್ತಾಂಬೂಲ ನಗರದಲ್ಲಿ ನಡೆದ ಘಟನೆಯಾಗಿದ್ದು, ಈ ನಾಯಿಯ ಸ್ವಾಮಿನಿಷ್ಠೆ ಪ್ರತಿಯೊಬ್ಬರ ಮನಸ್ಸು ಮಿಡಿಯುವಂತೆ ಮಾಡಿದ್ದಂತೂ ಸುಳ್ಳಲ್ಲ. ಇದೆ ಕಾರಣಕ್ಕೆ ಅಲ್ಲವಾ ಮನುಷ್ಯನನ್ನು ನಂಬುವ ಬದಲು ಇಂತಹ ಮೂಕ ಪ್ರಾಣಿಗಳನ್ನು ನಂಬಬೇಕು ಎನ್ನುವುದು. ವಿಡಿಯೋ ನೋಡಿ.
-ಮಂಜುನಾಥ್