ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ಡ್ಯಾನ್ಸ್ ಗಳು ವೈರಲ್ ಆಗುತ್ತಿರುತ್ತವೆ. ಕೆಲವರು ತುಂಬಾ ಟೆಕ್ನಿಕ್ ಆಗಿ ಡಾನ್ಸ್ ಮಾಡಿದರೆ ಇನ್ನು ಕೆಲವರು ಅದಕ್ಕೆ ತೀರ ವಿರುದ್ಧವಾಗಿ ಡಾನ್ಸ್ ಮಾಡುತ್ತಾರೆ. ಆದರೆ ಇಲ್ಲಿ ಮಹಿಳೆಯೊಬ್ಬಳು ತೋಟದ ದಿಬ್ಬದ ಮೇಲಿಂದ ಬರುತ್ತಿರುವಾಗ ಮಾಡಿದ ತುಂಬಾ ಸರಳವಾದ ಈ ಡಾನ್ಸ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.
ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ itk_meenu ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 9 ಲಕ್ಷ 83 ಸಾವಿರ ವೀಕ್ಷಣೆಯನ್ನು ಪಡೆದಿದೆ. ಹಾಗೆ ಒಟ್ಟು 40 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಹೊಂದಿದೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋದಲ್ಲಿ ಯುವತಿಯು ತೋಟದಲ್ಲಿ ದಿಬ್ಬದ ಮೇಲಿಂದ ನಡೆದು ಬರುವಾಗ ಬಾಲಿವುಡ್ ಹಾಡಿಗೆ ಮೈ ಬಳುಕಿಸಿದ್ದಾಳೆ. ಈ ಸುಂದರವಾದ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾದಂತಿದೆ. ಇಲ್ಲಿ ಯುವತಿ ಗ್ರೇ ಬಣ್ಣದ ಸೀರೆಯನ್ನುಟ್ಟು ತುಂಬಾ ಸುಂದರ ಹಾಗೂ ಅಷ್ಟೇ ಸರಳವಾಗಿ ಹೆಜ್ಜೆಯನ್ನು ಹಾಕಿದ್ದಾಳೆ. ಕೆಲವೇ ಸೆಕೆಂಡುಗಳ ಈ ವಿಡಿಯೋ ನೋಡುಗರಿಗೆ ನಿಶ್ಚಿತವಾಗಿಯೂ ಗಮನ ಸೆಳೆಯುವಂತೆ ಮಾಡಿದೆ.
