ಕುದುರೆ ಸಿಗದ ಕಾರಣ ವರನ ಮೆರವಣಿಗೆ ಬಂತು ಕತ್ತೆಯ ಮೇಲೆ; ನೋಡಿ ಈ ಸ್ಪೆಷಲ್ ವರನ ಸ್ಪೆಷಲ್ ವಿಡಿಯೋ…

ಸೋಶಿಯಲ್ ಮೀಡಿಯಾ ನೇಟಿಜನ್ಸ್ ಗಳಿಗೆ ದಿನನಿತ್ಯ ನೂತನವಾದದ್ದನ್ನು ಅಷ್ಟೆ ಮನಸೆಳೆಯುವ ಘಟಕ ಏನಾದರೊಂದು ತೋರಿಸುತ್ತಲೇ ಇರುತ್ತದೆ. ಸದ್ಯ ಒಂದು ತುಂಬಾ ಫನ್ನಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಖುಷಿ ನೀಡುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಮದುಮಗನಿಗೆ ಸಂಬಂಧಿಸಿದ ಒಂದು ದೃಶ್ಯವಿದೆ. ಮದುಮಗ ತನ್ನ ಮೆರವಣಿಗೆಯ ಸಲುವಾಗಿ ಕುದುರೆಯ ಬರುವಿಗಾಗಿ ಕಾಯುತ್ತಾ ನಿಂತಿದ್ದಾನೆ. ತುಂಬಾ ಸಮಯ ಕಳೆದರೂ ಕುದುರೆ ಬಾರದೆ ಇದ್ದಾಗ ಇವರು ತಮ್ಮದೇ ಆದ ಒಂದು ಹೊಸ ಐಡಿಯಾದ ಮೊರೆ ಹೋಗಿದ್ದಾರೆ. ಇದನ್ನು ನೋಡಿದಾಗ ಯಾರಿಗೂ ನಗು ತಡೆದುಕೊಳ್ಳುವುದು ಸಾಧ್ಯವಿಲ್ಲ.

ಇಲ್ಲಿ ವರ ಕುದುರೆಯ ದಾರಿ ಕಾಯ್ದು ಸಾಕಾಗಿ ಕೊನೆಗೆ ಕುದುರೆಯ ಬದಲಾಗಿ ಕತ್ತೆಯ ಬೆನ್ನ ಮೇಲೆ ಸವಾರಿ ಮಾಡಿದ್ದಾನೆ. ವರ ತಾನಾಗಿಯೇ ಕುದುರೆಯ ಬದಲಾಗಿ ಕತ್ತೆ ವ್ಯವಸ್ಥೆಯನ್ನಾದರೂ ಮಾಡಿ ಎಂದು ಹೇಳಿದ್ದಾನೆ. ತಮಾಷೆಯ ವಿಷಯವೇನೆಂದರೆ ಕತ್ತೆ ಬರುತ್ತಲೇ ಅದರ ಮೇಲೆ ಸವಾರಿ ಮಾಡಿಯೇ ಬಿಟ್ಟಿದ್ದಾನೆ. ನಂತರ ಕತ್ತೆಯ ಮೇಲೆ ಕುಳಿತ ವರನ ಮುಂದೆ ಗೆಳೆಯರ ಡಾನ್ಸ್ ಜೊತೆಗೆ ವರನ ಮೆರವಣಿಗೆ ಶುರುವಾಗಿಯೇ ಬಿಟ್ಟಿತು.

ಕತ್ತೆಯ ಮೇಲೆ ಕುಳಿತು ಮೆರವಣಿಗೆ ಮಾಡಿಕೊಳ್ಳುತ್ತಿರುವ ವರನ ಬಿಂದಾಸ್ ವಿಡಿಯೋ ನೋಡಿ…

 

View this post on Instagram

 

A post shared by FunTaap Official 😎 (@funtaap)

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ funtaap ಹೆಸರಿನ ಪೇಜ್ ನಿಂದ ಅಪ್ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ಸಾವಿರಾರು ವೀಕ್ಷಣೆ ಈ ವಿಡಿಯೋಗೆ ಸಿಕ್ಕಿವೆ.