ಇದೇನು ಜಗಳವೋ ಅಥವಾ ನಾಟಕವೋ ಒಂದು ಅರ್ಥಾನೇ ಆಗುತ್ತಿಲ್ಲ , ಬೆಕ್ಕುಗಳ ವೈರಲ್ ವೀಡಿಯೋ ನೋಡಿ!!
ಸೋಶಿಯಲ್ ಮಿಡಿಯಾದ ಜಗತ್ತಿನಲ್ಲಿ ಒಂದಕ್ಕಿಂತ ಮತ್ತೊಂದು ಪ್ರಾಣಿಗಳ ಅದ್ಭುತವಾದ ವೀಡಿಯೋ ನೋಡಲು ದೊರೆಯುತ್ತವೆ. ಈ ವಿಡಿಯೋಗಳ ಮೂಲಕ ನಮಗೆ ಅದ್ಭುತವಾದ ಮನರಂಜನೆ ಸಿಗುವದರ ಜೊತೆಗೆ ಪ್ರಾಣಿಗಳ ಕುರಿತು ಅನೇಕ ಹೊಸ ಹೊಸ ಮಾಹಿತಿ ದೊರೆಯುತ್ತವೆ.
ನಮ್ಮ ಜಗತ್ತಿನಲ್ಲಿ ಪ್ರಾಣಿಗಳ ಕುರಿತು ತುಂಬಾ ಪ್ರೀತಿ, ಪ್ರಾಣಿಗಳನ್ನು ಪಾಲನೆ ಮಾಡುವದು ಮತ್ತು ಅವುಗಳ ಕುರಿತು ಹೆಚ್ಚಾಗಿ ಮಾಹಿತಿ ಪಡೆದುಕೊಳ್ಳುವ ಜನರು ಸಹ ಇದ್ದಾರೆ. ಪ್ರಾಣಿಗಳನ್ನು ಕಂಡರೆ ಸಾಕು ಕೆಲವೇ ಸಮಯದಲ್ಲಿ ಅವಗಳೊಂದಿಗೆ ಸ್ನೇಹ ಬೆಳೆಸುವ ಸಾಮರ್ಥ್ಯ ಸಹ ಕೆಲವರಲ್ಲಿ ಇರುತ್ತದೆ. ಹೀಗಾಗಿ ಅವರನ್ನು ಪ್ರಾಣಿಗಳ ಪ್ರೇಮಿ ಸಹ ಅನ್ನಬಹುದು. ಸದ್ಯಕ್ಕೆ ಪ್ರಾಣಿಗಳ ಮತ್ತೊಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು, ಎರಡು ಬೆಕ್ಕುಗಳ ಆಕಸ್ಮಿಕವಾಗಿ ಭೇಟಿಯಾದಾಗ ತುಂಬಾ ಸಿಟ್ಟಿಗೆ ಬಂದು ಜಗಳ ವಾಡುವ ಪರಸ್ಥಿತಿಯಲ್ಲಿರುತ್ತದೆ ಆಗ ಅಲ್ಲಿದ್ದ ಒಬ್ಬ ವ್ಯಕ್ತಿ ಅವೆರಡೂ ಬೆಕ್ಕುಗಳ ಮದ್ಯದಲ್ಲಿ ಒಂದು ದೊಡ್ಡದಾದ ಡಬ್ಬಿಯ ಮುಚ್ಚಳಿಕೆಯಿಂದ ಒಂದು ಬೆಕ್ಕು ಮತ್ತೊಂದು ಬೆಕ್ಕಿಗೆ ಕಾಣಿಸದ ಹಾಗೆ ಮರೆ ಮಾಡುತ್ತಾನೆ. ಆಗ ಎರಡು ಬೆಕ್ಕುಗಳು ಧ್ವನಿ ಮಾಡದೆ ಸುಮ್ಮನೆ ಇರುತ್ತವೆ. ಆಗ ಈ ವ್ಯಕ್ತಿ ಮತ್ತೆ ಮದ್ಯದಲ್ಲಿಂದ ಮುಚ್ಚಳಿಕೆ ತಗೆದಾಗ ಮತ್ತೆ ಒಂದಕ್ಕೊಂದು ರೇಗಾಡಲು ಶುರು ಮಾಡುತ್ತವೆ. ಈ ವ್ಯಕ್ತಿ ಪದೇ ಪದೇ ಅದೇ ಕ್ರಿಯೆ ರಿಪೀಟ್ ಮಾಡುತ್ತಾನೆ ಬೆಕ್ಕುಗಳು ಸಹ ಅವುಗಳ ಕ್ರಿಯೆ ಸಹ ರಿಪೀಟ್ ಮಾಡುತ್ತವೆ. ಈ ವಿಡಿಯೋ ನೋಡಿದರೆ ನೀವು ನಗದೆ ಇರಲಾರಿರಿ.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ bbemmmmmmmmmmm21 ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು 20 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು 3 ಮಿಲಿಯನ್ ಗಿಂತಲೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.