ಪೆಟ್ರೋಲ್ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಲೇ ಕಂಪನಿಗಳು ಸದ್ಯ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದ ಕಡೆಗೆ ಹೆಚ್ಚು ಗಮನ ನೀಡುತ್ತಿವೆ. ಇದಕ್ಕನುಸುರಿಸಿ ನೆಕ್ಸಜೂ ಮೊಬಿಲಿಟಿಯ Rompus+ ಮತ್ತು Roadlark ಈ ಎರಡು ಇ-ಸೈಕಲ್ ಗಳನ್ನು ತಯಾರಿಸಿದೆ. ಗ್ರಾಹಕರ ಡಿಮಾಂಡ್ ಮತ್ತು ಅವಶ್ಯಕತೆಯನ್ನು ಗಮನದಲ್ಲಿರಿಸಿ ಈ ಸೈಕಲ್ ಗಳನ್ನು ತಯಾರಿಸಲಾಗಿದೆ. ಅತುಲ್ಯ ಮಿತ್ತಲ್ ಇವರು 2015 ರಲ್ಲಿ ಪ್ರಾರಂಭಿಸಿದ ಅವಾನ್ ಮೋಟರ್ ಪುಣೆಯಲ್ಲಿ ನೆಕ್ಸಜೂ ಮೊಬಿಲಿಟಿ ಹೆಸರಿನಲ್ಲಿ ಸ್ಟಾರ್ಟ ಅಪ್ ಪ್ರಾರಂಭಿಸಿದೆ.
ಈ ಸೈಕಲಿನ ನಿರ್ಮಿತಿಯ ಕಥೆ ತುಂಬಾ ವಿಶೇಷವಾಗಿದೆ. ಅತುಲ್ಯ ಇವರು ಹಾವರ್ಡ್ ಬುಸಿನೆಸ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದಾರೆ. ಇದರ ಹೊರತಾಗಿ ಅವರು ಪಾಪಾ ಜಾನ್ ಇಂಡಿಯಾದಲ್ಲಿ ಹೂಡಿಕೆದಾರರಾಗಿದ್ದಾರೆ. ಇದು ಭಾರತದ ಎಲ್ಲಕ್ಕೂ ದೊಡ್ಡ ಪಿಜ್ಜಾ ಡೆಲಿವರಿಯ ಚೈನ್ ಇದೆ.

ಇವರಿಗೆ ಪಿಜ್ಜಾ ಡೆಲಿವರಿ ಸಲುವಾಗಿ ಅಗ್ಗದ ಹಾಗೂ ಭರ್ಜರಿ ಎಲೆಕ್ಟ್ರಿಕ್ ಸ್ಕೂಟರ್ ಬೇಕಾಗಿತ್ತು. ತಮ್ಮ ವ್ಯವಸಾಯದಲ್ಲಿ ಈ ರೀತಿಯ ಸಮಸ್ಯೆ ಎದುರಾದಾಗ ಅತುಲ್ಯ ಮಿತ್ತಲ್ ಅವರು ಸ್ವಂತ ತಾವೇ ಎಲೆಕ್ಟ್ರಿಕ್ ಸೈಕಲ್ ತಯಾರಿಸಲು ನಿಶ್ಚಯಿಸಿದರು.
ಇ-ಸೈಕಲ್ ಖರೀದಿಸುವುದು ನಿಜಕ್ಕೂ ಜೇಬಿಗೆ ಭಾರವಲ್ಲ. ಆರ್ಥಿಕವಾಗಿ ವಿಚಾರಮಾಡಿದರೆ ಒಂದು ಕಿಲೋಮೀಟರ್ ಗೆ 0.2 ರೂಪಾಯಿಗಳ ವೆಚ್ಚ ತಗಲುತ್ತದೆ.ಅದನ್ನೇ ಒಂದು ವೇಳೆ ಪೆಟ್ರೋಲ್-ಡೀಸೆಲ್ ಗೆ ಹೋಲಿಸಿದರೆ ಪ್ರತಿ ಕಿಲೋಮೀಟರ್ ಗೆ ಎರಡು ರೂಪಾಯಿಗಿಂತಲೂ ಹೆಚ್ಚು ಹಣ ಖರ್ಚಾಗುತ್ತದೆ.

ಕಂಪನಿಯ ಪ್ರಕಾರ ಇ-ಸೈಕಲ್ ಬರೀ 10 ರೂಪಾಯಿಗಳ ಚಾರ್ಜ್ ನಲ್ಲಿ 150 ಕಿಲೋಮೀಟರ್ ವರೆಗೆ ಓಡುತ್ತದೆ. ಅದೇ ರೀತಿ ಚಾರ್ಜ್ ಮಾಡಲು ಒಂದು ವೇಳೆ 50 ರೂಪಾಯಿಗಳವರೆಗೆ ಖರ್ಚು ಮಾಡಿದರೆ ಸುಮಾರು 1000 ಕಿಲೋಮೀಟರ್ ಗಳವರೆಗೆ ಓಡುತ್ತದೆ. ಇನ್ನು ಇವುಗಳ ಬೆಲೆಯ ಬಗ್ಗೆ ಹೇಳಬೇಕಾದರೆ Rompus+ ಇದು 31980 ಮತ್ತು Roadlark ಇ-ಸೈಕಲ್ಲಿನ ಬೆಲೆ 42317 ರೂಪಾಯಿಗಳು.
ಈ ಸೈಕಲಿನ ನಿರ್ಮಾಣ ಮತ್ತು ಡಿಸೈನ್ ಸಂಪೂರ್ಣವಾಗಿ ಭಾರತದಲ್ಲಿಯೇ ಮಾಡಲಾಗಿದೆ. ಸದ್ಯಕ್ಕೆ ಇವು ನಾಲ್ಕು ಬಣ್ಣಗಳಲ್ಲಿ ಉಪಲಬ್ಧವಿದೆ. ಸೈಕಲಿನ ಡಿಸೈನ್ ತುಂಬಾ ಆಕರ್ಷಕವಾಗಿದೆ. ಈ ಸೈಕಲ್ ಖರೀದಿ ಮಾಡುವ ಸಲುವಾಗಿ ನೆಕ್ಸಜೂ ಡೀಲರ್ ಕಡೆಗೆ ಅಥವಾ ಕಂಪನಿಯ ವೆಬ್ಸೈಟ್ ಮುಖಾಂತರ ಆನ್ಲೈನ್ ಖರೀದಿಸಬಹುದಾಗಿದೆ.
