ಈ ‘ಮೂರು’ ಬೆಳೆಗಳನ್ನು ಬೆಳೆಯಲು ಬರುವ ಖರ್ಚು 50 ಸಾವಿರ; ಲಾಭ ‘ಲಕ್ಷಗಟ್ಟಲೆ’! ತಿಳಿದುಕೊಳ್ಳಿ..
ಭಾರತ ಇದು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇಲ್ಲಿ ರೈತರ ಜೀವನ ನಿಜಕ್ಕೂ ಸಂಪತ್ಭರಿತವಾಗಿರಬೇಕು, ಆದರೆ ಅವರ ಪರಿಸ್ಥಿತಿ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ.
ಇದಕ್ಕೆ ಕಾರಣ ಅನಿಶ್ಚಿತವಾದ ಮಳೆ, ಆಧುನಿಕ ಕೃಷಿಯ ಬಗ್ಗೆ ಅರಿವು ಇಲ್ಲದಿರುವುದು, ಅಂದರೆ ಪರಂಪರಾಗತವಾಗಿ ನಡೆದುಕೊಂಡು ಬಂದ ಕೃಷಿ ಪದ್ಧತಿಯನ್ನೇ ಅವಲಂಬಿಸುವದು, ಕೃಷಿ ಕ್ಷೇತ್ರದ ಕಡೆಗೆ ಯುವಜನರ ಮತ್ತು ಪೋಷಕರ ಅಸಡ್ಡೆ, ಬರೀ ನೌಕರಿಗಾಗಿ ದೌಡಾಯಿಸುವದು, ಸರಕಾರದ ನಿರ್ಲಕ್ಷತನ, ರೈತರಿಗಾಗಿ ಯಾವುದೇ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಉಪಲಬ್ಧ ತತೆಯನ್ನು ಮಾಡಿ ಕೊಡದಿರುವುದು. ತೋಟದಲ್ಲಿ ದುಡಿಯುವ ಮನಸ್ಸಿರದೆ ಆಲಸ್ಯವನ್ನು ತೋರುವುದು, ಇಲ್ಲವೇ ದುಡಿಯುವ ಮನಸ್ಸಿದ್ದರೆ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲದಿರುವುದು, ಹಳ್ಳಿಗಳಲ್ಲಿ ಕೆಲಸವಿಲ್ಲ ಎಂಬ ಮನಸ್ಸಿನಿಂದ ಪಟ್ಟಣದ ಕಡೆಗೆ ಒಲಸೆ ಹೋಗುವದು, ಹೀಗೆ ಅನೇಕ ಸಮಸ್ಯೆಗಳಿಂದ ರೈತನ ಜೀವನ ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಕಂಗಾಲಾಗಿದೆ.
ಮಿತ್ರರೇ, ಈ ಲೇಖನದಲ್ಲಿ ಕೆಲವು ವಾಣಿಜ್ಯ ಬೆಳೆಗಳ ಮಾಹಿತಿಯನ್ನು ಇಲ್ಲಿ ನೀಡುವವರಿದ್ದೇವೆ. 40 ರಿಂದ 50 ಸಾವಿರಗಳ ವರೆಗೆ ಖರ್ಚು ಮಾಡಿ ಈ ಬೆಳೆಗಳ ಸಹಾಯದಿಂದ ಹಳ್ಳಿಯಲ್ಲಿದ್ದರೂ ಲಕ್ಷಾವಧಿ ರೂಪಾಯಿಗಳ ಲಾಭ ಪಡೆಯಬಹುದು. ಯಾವುದಕ್ಕೂ ಒಮ್ಮೆ ಈ ವ್ಯವಸಾಯಗಳನ್ನು ಮಾಡಿ ನೋಡಿ….

- ಹೂವಿನ ಬೇಸಾಯ:- ಇತ್ತಿತ್ತಲಾಗಿ ಹೂವಿನ ಕೃಷಿಯಿಂದ ರೈತರು ಕೈತುಂಬ ಲಾಭವನ್ನು ಪಡೆಯುತ್ತಿದ್ದಾರೆ. ರೈತರು ಬೆಳೆಯುವ ನಾನಾ ಪ್ರಕಾರದ ಹೂಗಳಿಗೆ ಮಾರ್ಕೇಟಿನಲ್ಲಿ ತುಂಬಾ ಬೇಡಿಕೆ ಇದೆ. ಹೂವು ಪ್ರತಿಯೊಂದು ಸಮಾಜ, ವರ್ಗದವರಿಗೆ ಪೂಜೆಗಾಗಿ ಹೂ ಬೇಕೇಬೇಕು. ಪ್ರತಿಯೊಂದು ಕಾರ್ಯಕ್ರಮವಿರಲಿ ಮೊದಲು ಅಲ್ಲಿ ಹೂ ಬೇಕು. ಹೂವಿನ ಡೇಕೋರೇಷನ್ ಸದ್ಯ ತುಂಬಾ ಟ್ರೆಂಡ್ ನಲ್ಲಿದೆ. ಆದ ಕಾರಣ ಹೂವಿನ ಬೇಸಾಯ ಮಾಡುವದರ ಮೂಲಕ ತುಂಬಾ ಲಾಭ ಗಳಿಸಬಹುದಾಗಿದೆ. ಆದ್ದರಿಂದ ಸರಿಯಾಗಿ ಮಾಹಿತಿಯನ್ನು ಪಡೆದು ವಿವಿಧ ಪ್ರಕಾರಗಳ ಹೂ ಬೇಸಾಯ ಮಾಡಬಹುದು. ಇದಕ್ಕಾಗಿ ಸರಕಾರದ ವತಿಯಿಂದ ಸಹಾಯ ಪಡೆಯಬಹುದಾಗಿದೆ. ಬರೀ ಅರ್ಧ ಎಕರೆ ಭೂಮಿಯಲ್ಲಿ ಲಕ್ಷಗಟ್ಟಲೆ ಹಣವನ್ನು ಸಂಪಾದಿಸಬಹುದಾಗಿದೆ.

2.ಅಲೋವೆರಾ ಅಥವಾ ಲೋಳೆಸರ ಕೃಷಿ:– ಲೋಳೆಸರದ ಬೇಸಾಯವು ವಾಣಿಜ್ಯ ಬೆಳೆಯಂದೇ ಪರಿಗಣಿಸಲಾಗಿದೆ. ಇದನ್ನು ಬೆಳೆಯುವ ಸಲುವಾಗಿ ಒಂದೇ ಒಂದು ಸಲ ಇದನ್ನು ನೆಟ್ಟ ಮೇಲೆ ಮೂರು ವರ್ಷಗಳ ವರೆಗೆ ಬೇರೆ ಸಸಿಯನ್ನು ನೆಡುವ ಅವಶ್ಯಕತೆ ಇಲ್ಲ. ಆದರೆ ಲಾಭ ಮಾತ್ರ ಮೂರು ವರ್ಷ ದೊರೆಯುವುದು. ಇದು ಔಷಧೀಯ ಗುಣಗಳನ್ನು ಹೊಂದಿದ ವನಸ್ಪತಿಯಾಗಿದ್ದರಿಂದ ಮಾರ್ಕೆಟಿನಲ್ಲಿ ತುಂಬಾ ಬೇಡಿಕೆ ಇದೆ. 1 ಹೆಕ್ಟೇರ್ ಜಮೀನಿನಿಂದ ವರ್ಷಕ್ಕೆ ಸುಮಾರು 9 ರಿಂದ 10 ಲಕ್ಷ ರೂಪಾಯಿಗಳ ಲಾಭ ಪಡೆಯಬಹುದಾಗಿದೆ.

- ಖರ್ಜೂರದ ಬೇಸಾಯ:- ಈ ಬೆಳೆಯಿಂದಲೂ ಹೆಚ್ಚು ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಸದ್ಯ ಈ ಬೇಸಾಯದಿಂದ ರೈತರು ಲಕ್ಷದ ಸಂಖ್ಯೆಯಲ್ಲಿ ಲಾಭ ಗಳಿಸುತ್ತಿದ್ದಾರೆ. ಆದರೆ ಈ ಬೇಸಾಯಕ್ಕೆ ಭೂಮಿಯಲ್ಲಿರುವ ಮಣ್ಣಿನ ಜ್ಞಾನದ ಜೊತೆಗೆ ಯೋಗ್ಯ ಮಾರ್ಗದರ್ಶನದ ಅವಶ್ಯಕತೆ ಇದೆ. ಆದ್ದರಿಂದ ಸರಿಯಾಗಿ ಅದನ್ನು ತಿಳಿದುಕೊಂಡು ಬೇಸಾಯ ಮಾಡಿದರೆ ಇದರಿಂದಲೂ ವರ್ಷಕ್ಕೆ 10 ರಿಂದ 12 ಲಕ್ಷಗಳ ವರೆಗೆ ಲಾಭ ಪಡೆಯಬಹುದು.