ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಪರಿಣಾಮ ಮತ್ತು ಪ್ರಭಾವ | Effect and influence of social networking sites in student life

ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಪರಿಣಾಮ ಮತ್ತು ಪ್ರಭಾವ

ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಪರಿಣಾಮ ಮತ್ತು ಪ್ರಭಾವ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಒಳಗೊಳ್ಳುವಿಕೆ ಬಹಳಷ್ಟು ಹೆಚ್ಚಾಗಿದೆ. ಇದು ಮಕ್ಕಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈಗ ದೊಡ್ಡವರಷ್ಟೇ ಅಲ್ಲ ಮಕ್ಕಳೂ ಸ್ಮಾರ್ಟ್ ಫೋನ್ ಚಟಕ್ಕೆ ಬಿದ್ದಿದ್ದಾರೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್‌ನಿಂದ ಸಾಮಾಜಿಕ ಮಾಧ್ಯಮವನ್ನು ಬಳಸಬಹುದು. WhatsApp, Facebook, Twitter, Youtube ಮತ್ತು Instagram ಸಾಮಾಜಿಕ ಮಾಧ್ಯಮದ ಪ್ರಮುಖ ವೇದಿಕೆಗಳಾಗಿವೆ. ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಜನರಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಾಮಾಜಿಕ ಮಾಧ್ಯಮವು ನಮ್ಮ ಜೀವನದ ಸಕ್ರಿಯ ಭಾಗವಾಗಿದೆ, ಅದನ್ನು ನಾವು ಬಯಸಿದರೂ ಬಿಟ್ಟಿರಲಾಗುವುದಿಲ್ಲ.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲತೆಗಳೂ ಇವೆ. ಹೀಗಿರುವಾಗ ಸಾಮಾಜಿಕ ಮಾಧ್ಯಮವು ಮಗುವಿನ ಬೆಳವಣಿಗೆಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ನಾವು ತಿಳಿದಿರಬೇಕು. ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮದಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು (Impact of Social Media on Students) ಯಾವುವು ಎಂದು ತಿಳಿಯೋಣ.

ಸಾಮಾಜಿಕ ಮಾಧ್ಯಮದ ಪ್ರಯೋಜನಗಳು :

ಸಾಮಾಜಿಕ ಮಾಧ್ಯಮದ ಸಹಾಯದಿಂದ ನೀವು ಮನೆಯಲ್ಲಿ ಕುಳಿತು ಪ್ರಪಂಚದಾದ್ಯಂತದ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ಮಕ್ಕಳು ತಮ್ಮ ದೂರದ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದು.

ಸಾಮಾಜಿಕ ಮಾಧ್ಯಮದ ಸಹಾಯದಿಂದ ಮಕ್ಕಳು ಅನೇಕ ವಿಷಯಗಳ ಬಗ್ಗೆ ಉತ್ತಮ ಆಲೋಚನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು. ಮಕ್ಕಳು ಹೊಸ ವಿಷಯಗಳನ್ನು ಕಲಿಯುತ್ತಾರೆ ಮತ್ತು ಪರಸ್ಪರರ ಆಲೋಚನೆಗಳನ್ನು ತಿಳಿದುಕೊಳ್ಳುತ್ತಾರೆ.

ಸಾಮಾಜಿಕ ಮಾಧ್ಯಮವನ್ನು ಬಳಸುವ ಮಕ್ಕಳು ಉತ್ತಮ ಸಂವಹನ ಕೌಶಲ್ಯವನ್ನು ಹೊಂದುತ್ತಾರೆ, ಅನೇಕ ವಿಷಯಗಳ ಬಗ್ಗೆ ಮನೆಯಲ್ಲೇ ಕುಳಿತು ನೂರಾರು ಜನರ ಜೊತೆ ಚರ್ಚಿಸಬಹುದು. ಇಲ್ಲಿ ಮಕ್ಕಳು ಅಥವಾ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ತಂತ್ರಜ್ಞಾನದ ಬಗ್ಗೆ ಮಕ್ಕಳ ತಾಂತ್ರಿಕ ಮತ್ತು ಪ್ರಾಯೋಗಿಕ ಜ್ಞಾನವೂ ಹೆಚ್ಚಾಗುತ್ತದೆ. ಯೂಟ್ಯೂಬ್ ಮೂಲಕ ಕೂಡ ಜನ ಅಡುಗೆಯಿಂದ ಹಿಡಿದು ಅಮೆರಿಕದವರೆಗೆ ಹಲವು ಜ್ಞಾನ ಪಡೆಯುತ್ತಿದ್ದಾರೆ.

Read More:

Effect and influence of social networking sites in student life

ಸಾಮಾಜಿಕ ಜಾಲತಾಣಗಳಿಂದ ಹಾನಿ :

ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ ಮತ್ತು ಚಂಚಲವಾಗಿದ್ದು ಸಾಮಾಜಿಕ ಮಾಧ್ಯಮಗಳು ಅವರ ಆಲೋಚನೆ ಮತ್ತು ನಡವಳಿಕೆಯನ್ನು ಸುಲಭವಾಗಿ ಬದಲಾಯಿಸಬಹುದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಒಳ್ಳೆಯದು ಮತ್ತು ಕೆಟ್ಟದ್ದನ್ನು ಪ್ರತ್ಯೇಕಿಸಲು ಸಾಧ್ಯವಾಗುವುದಿಲ್ಲ, ಹೀಗಾಘಿ ಅವರು ಸುಲಭವಾಗಿ ಕೆಡಲು ಕಾರಣವಾಗಬಹುದು. ಹೀಗಾಗಿ ಪೋಷಕರು ಸಾಮಾಜಿಕ ಮಾಧ್ಯಮವು ಮಕ್ಕಳ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮದ ಕೆಲವು ನಕಾರಾತ್ಮಕ ಪರಿಣಾಮಗಳು ಹೀಗಿರಬಹುದು:

ಸಾಮಾಜಿಕ ಮಾಧ್ಯಮವು ತುಂಬಾ ದೊಡ್ಡದಾಗಿದೆ, ಮಗು ಎಲ್ಲಿ, ಯಾವಾಗ ಮತ್ತು ಹೇಗೆ ಮಾಹಿತಿಯನ್ನು ಬಳಸುತ್ತದೆ ಎಂಬುದನ್ನು ನೀವು ನಿಯಂತ್ರಿಸಲಾಗುವುದಿಲ್ಲ. ಅಂತಹ ಸಂದರ್ಭಗಳು ಮಕ್ಕಳನ್ನು ಅಶ್ಲೀಲ, ಹಾನಿಕಾರಕ ಅಥವಾ ಗ್ರಾಫಿಕ್ ವೆಬ್‌ಸೈಟ್‌ಗಳಿಗೆ ತಗೆದುಕೊಂಡು ಹೋಗಬಹುದು.

ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಸೈಬರ್ ಬುಲ್ಲಿಂಗ್ ಕೂಡ ಸಾಕಷ್ಟು ಹೆಚ್ಚಾಗಿದೆ, ಇದು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಪ್ರತಿ ವರ್ಷ ಅನೇಕ ಮಕ್ಕಳು ಇದರ ಬಲಿಯಾಗುತ್ತಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಅನೇಕರು ದಾರಿತಪ್ಪಿಸುವ ಮತ್ತು ತಪ್ಪು ಮಾಹಿತಿಯನ್ನೂ ಹರಡುತ್ತಾರೆ, ಇದರಿಂದ ಅಮಾಯಕರು, ಮಕ್ಕಳು ಮುಜುಗರ ಹಾಗೂ ಸಮಸ್ಯೆ ಅನುಭವಿಸುವಂತಾಗಿದೆ.

ಹೆಚ್ಚಿನ ವದಂತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತವೆ. ಸಮಾಜವಿರೋಧಿ ಜನರು ಹೆಚ್ಚಾಗಿ ವದಂತಿಗಳನ್ನು ಹರಡುತ್ತಾರೆ. ಫೇಕ್ ಚಿತ್ರಗಳು ಮತ್ತು ವೀಡಿಯೊಗಳನ್ನು ಎಡಿಟ್ ಮಾಡುವ ಮೂಲಕ, ಅವರು ಜನರನ್ನು ದಾರಿ ತಪ್ಪಿಸುತ್ತಾರೆ ಮತ್ತು ಬ್ಲ್ಯಾಕ್ ಮೇಲ್ ಕೂಡ ಮಾಡುತ್ತಾರೆ.

ಸಾಮಾಜಿಕ ಮಾಧ್ಯಮವು ಕೆಲವು ಪ್ರಯೋಜನಗಳನ್ನು ಹೊಂದಿದೆಯಾದರೂ ಹಾನಿಯೇ ಅಧಿಕವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಮಕ್ಕಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯಾಗುತ್ತಾರೆ, ಇದು ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

Effect and influence of social networking sites in student life

ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಜೀವನ ಎಲ್ಲವೂ ಅಪಾಯದಲ್ಲಿದೆ. ಅವರು ಅಧ್ಯಯನದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಾರಂಭಿಸುತ್ತಾರೆ. ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ವಿದ್ಯಾರ್ಥಿಗಳನ್ನು ಹೆಚ್ಚು ಸೆಳೆಯುತ್ತವೆ. ಅವರು ಇಡೀ ಸಮಯ ಚಾಟ್ ಮಾಡುವುದರಲ್ಲಿ ನಿರತರಾಗಿರುತ್ತಾರೆ, ಇದು ಅವರ ಅಧ್ಯಯನಕ್ಕೆ ಅಡ್ಡಿಪಡಿಸುವ ದೊಡ್ಡ ಸಾಧನವಾಗಿದೆ,

ಸಾಮಾಜಿಕ ಜಾಲತಾಣಗಳ ಕಾರಣದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಕಣ್ಣುಗಳು ದುರ್ಬಲವಾಗಿವೆ.

ಇಂಟರ್‌ನೆಟ್ ಬಂದ ನಂತರ ಮಕ್ಕಳು ಹೊರಾಂಗಣ ಆಟಗಳನ್ನು ಮರೆತಂತೆ ಅನಿಸುತ್ತಿದೆ. ಇದರಿಂದಾಗಿ ಅವರ ದೈಹಿಕ ಬೆಳವಣಿಗೆ ಮಾತ್ರವಲ್ಲದೆ ಅವರ ಮಾನಸಿಕತೆ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ.

2015 ರಲ್ಲಿ ಬ್ರಿಟಿಷ್ ಸೈಕಲಾಜಿಕಲ್ ಸೊಸೈಟಿ ನಡೆಸಿದ ಅಧ್ಯಯನವು ದಿನವಿಡೀ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳಿಗೆ ಲೈಕ್ ಮಾಡುವುದು, ಸಂದೇಶಗಳಿಗೆ ಪ್ರತ್ಯುತ್ತರಿಸುವುದು ಮತ್ತು ಸ್ನೇಹಿತರೊಂದಿಗೆ ಚಾಟ್ ಮಾಡುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಬಹಿರಂಗಪಡಿಸಿತು. ಫೇಸ್ ಬುಕ್ ಬಳಕೆಯಿಂದ ಮಕ್ಕಳು ತಮ್ಮ ಜೀವನದಲ್ಲಿ ಅತೃಪ್ತರಾಗುತ್ತಿದ್ದಾರೆ ಎಂದು ಮಿಚಿಗನ್ ವಿಶ್ವವಿದ್ಯಾನಿಲಯದ ಅಧ್ಯಯನವೂ ತಿಳಿಸಿದೆ.

ಕೊನೆಯ ಮಾತು :

ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮವನ್ನು ಕಾಲಮಿತಿಯೊಳಗೆ ಮಾತ್ರ ಬಳಸಬೇಕು. ಅವರು ಅದನ್ನು ತಮ್ಮ ಅಧ್ಯಯನಕ್ಕೆ – ಜ್ಞಾನಾರ್ಜನೆಗೆ ಬಳಸಿದರೆ ಅದರಷ್ಟು ಒಳ್ಳೆ ಸಂಹಗತಿ ಮತ್ತೊಂದಿಲ್ಲ. ವಿದ್ಯಾರ್ಥಿಗಳು ಇದಕ್ಕೆ ವ್ಯಸನಿಗಳಾಗಿಬಿಟ್ಟರೆ ಕಷ್ಟವಾಗುತ್ತದೆ, ಹಾಗಾಗದಂತೆ ಪೋಷಕರೂ ಕೂಡ ಲಕ್ಷ್ಯವಹಿಸಬೇಕು. ಯೂಟ್ಯೂಬ್‌ನಲ್ಲಿ ಸಿನೆಮಾಗಳನ್ನು, ಹಾಡುಗಳನ್ನು ನೋಡುವ ಬದಲು ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ವೀಕ್ಷಿಸಬಹುದು. ಒಟ್ಟಾರೆಯಾಗಿ ಸರಿಯಾಗಿ ಬಳಸಿದರೆ ಸಾಮಾಝಿಕ ಜಾಲತಾಣಗಳು ವಿದ್ಯಾರ್ಥಿಗಳಿಗೆ ವರವಾಗುತ್ತವೆ, ವ್ಯಸನಿಗಳಾದರೆ ಅವೆಲ್ಲ ಅವರಿಗೆ ಶಾಪವೇ ಸರಿ.

Read More: