ಮೇಕೆಯನ್ನು ನೋಡಿ ದಿಕ್ಕೆಟ್ಟು ತಾಯಿಯ ಕಡೆಗೆ ಪಲಾಯನ ಮಾಡಿದ ಪುಟ್ಟ ಆನೆ; ನೋಡಿ ಮುದ್ದಾದ Video…

ವೈಲ್ಡ್ ಅನಿಮಲ್ ಗಳ ಕೆಲವು ವಿಡಿಯೋಗಳು ನೋಡಲು ತುಂಬಾ ಮುದ್ದಾಗಿರುತ್ತವೆ. ಅದರಲ್ಲೂ ಆನೆಯ ಮರಿಗಳ ತುಂಟಾಟದ ವಿಡಿಯೋಗಳು ಎಲ್ಲರಿಗೂ ನೋಡಲು ತುಂಬಾ ಇಷ್ಟವಾಗುತ್ತವೆ. ಹೀಗಾಗಿ ಈ ವಿಡಿಯೋಗಳು ತುಂಬಾ ವೈರಲ್ ಸಹ ಆಗುವುದುಂಟು.

ಪ್ರಸ್ತುತ ವಿಡಿಯೋದಲ್ಲಿ ಬೇಬಿ ಆನೆ ತನ್ನ ತಾಯಿಯಿಂದ ಸ್ವಲ್ಪ ದೂರದಲ್ಲಿ ಸುತ್ತಾಡುತ್ತಿರುತ್ತದೆ. ಸುತ್ತಾಡುವಾಗ ಅಲ್ಲಿ ಮೇಕೆಯೊಂದು ಕಾಣಿಸುತ್ತದೆ. ಆ ಮೇಕೆಯನ್ನು ನೋಡಿದ ತಕ್ಷಣ ಆನೆಯ ಈ ಮರಿಯು ಒಮ್ಮೆಲೆ ತಬ್ಬಿಬ್ಬಾಗಿ ನಂತರ ಅಲ್ಲಿಂದ ಕ್ಷಣಾರ್ಧದಲ್ಲಿ ತನ್ನ ತಾಯಿಯ ಕಡೆಗೆ ಪಲಾಯನ ಮಾಡುತ್ತದೆ. ದೃಶ್ಯ ನೋಡಲು ನಿಜಕ್ಕೂ ತುಂಬಾ ತಮಾಷೆಯಾಗಿದೆ.

ನೋಡಿ ಈ ವಿಡಿಯೋ…

ತಮಾಷೆಯ ಈ ವಿಡಿಯೋ ಸಾಮಾಜಿಕ ಜಾಲತಾಣವಾದ instagram ನಲ್ಲಿ ‘ಎಲಿಫೆಂಟ್ಸ್ ಆಫ್ ವರ್ಲ್ಡ್’ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ನೋಡಿ ತುಂಬಾ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ.