Articles

ಬಾಳಸಂಗಾತಿಯಾಗುವವಳ ಜೊತೆಗೆ ಮದುವೆ ಮಂಟಪದಲ್ಲಿ ವರ ನಡೆದುಕೊಳ್ಳುವ ರೀತಿ ಹೀಗಾ? ನೆಟ್ಟಿಗರಾದರು ಫುಲ್ ಗರಂ; ಆತನ ಕೃತಿ ನೋಡಿ ಈ ವಿಡಿಯೋದಲ್ಲಿ…

ಸದ್ಯ ದಿನನಿತ್ಯ ಆಗುತ್ತಿರುವ ಮದುವೆಗಳು ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ಏನಾದರೂ ಹೊಸದನ್ನು ತಂದು ಕೊಡುತ್ತಿವೆ. ಇದರಲ್ಲಿ ಕೆಲವು ವಿಡಿಯೋಗಳು ತುಂಬಾ ತಮಾಷೆಯ ಇನ್ನು ಕೆಲವು ಸಾಮಾಜಿಕ ಜವಾಬ್ದಾರಿ ಮತ್ತು ಬಾಂಧವ್ಯದ, ಭಾವೈಕ್ಯದ ಪಾಠಗಳನ್ನು ನೀಡುವ ವಿಡಿಯೋಗಳು ಆಗಿರುತ್ತವೆ. ಆದರೆ ಕೆಲವು ವಿಡಿಯೋಗಳನ್ನು ನೋಡಿದಾಗ ನೇಟಿಜನ್ಸ್ ಗಳ ಕೋಪ ತಾರಕಕ್ಕೆ ಏರುತ್ತದೆ.

ಈಗ ವೈರಲ್ ಆಗುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳಿಗೆ ತುಂಬಾ ಸಿಟ್ಟು ತರಿಸುತ್ತಿದೆ. ಏಕೆಂದರೆ ವರನು ಮದುವೆಯ ಮಂಟಪದಲ್ಲಿ ತನ್ನ ಬಾಳಸಂಗಾತಿಯಾಗುವವಳ ಜೊತೆಗೆ ನಡೆದುಕೊಂಡ ನಡತೆಯು ನೇಟಿಜನ್ಸ್ ಗಳಿಗೆ ಸ್ವಲ್ಪವೂ ಹಿಡಿಸಿಲ್ಲ. ಹೇಗೆ ನೋಡಿ.

ಈ ವಿಡಿಯೋದಲ್ಲಿ ವರನು ಎಲ್ಲರ ಮುಂದೆ ತನ್ನ ಭಾವಿ ಪತ್ನಿಯ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಮದುವೆಯ ವಿಧಿವಿಧಾನಗಳನ್ನು ಪೂರೈಸುವಾಗ ಸ್ಟೇಜ್ ಮೇಲೆ ಮದುಮಗನು ಮದುಮಗಳಿಗೆ ಹೂವಿನ ಹಾರವನ್ನು ಹಾಕುತ್ತಿರುವುದು ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ವಧು ವರನ ಎದುರಿಗೆ ತುಂಬಾ ಶಾಂತವಾಗಿ ನಿಂತಿದ್ದಾಳೆ. ಆದರೆ ವರ ಮಾತ್ರ ವಧುವಿನ ಕೊರಳಿಗೆ ಸರಿಯಾಗಿ ಹೂವಿನ ಹಾರವನ್ನು ಹಾಕುವ ಬದಲಾಗಿ ಬೇಕಾಬಿಟ್ಟಿಯಾಗಿ ಆಕೆಯ ಮೇಲೆ ಎಸೆದಿದ್ದಾನೆ. ಈ ಕೃತಿಯು ಸ್ವಲ್ಪವೂ ಸರಿ ಎನ್ನಿಸಿಲ್ಲ. ಇದನ್ನು ನೋಡಿದ ಮದುವೆಯ ಮಂಟಪದಲ್ಲಿ ಜನರು ಸಹ ಸಿಟ್ಟಿಗೆ ಬಂದಿದ್ದರು. ಇದೇ ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳು ಸಹ ತುಂಬಾ ಗರಂ ಆಗಿದ್ದಾರೆ. ಈ ಮದುವೆಯು ವರನಿಗೆ ಸ್ವಲ್ಪವೂ ಇಷ್ಟವಿಲ್ಲದಂತೆ ಕಂಡುಬರುತ್ತಿತ್ತು. ಬಹುಶಃ ಆತನ ಮನಸ್ಸಿನ ವಿರುದ್ಧ ಈ ಮದುವೆಯಾಗುತ್ತಿದೆ ಎಂಬ ಶಂಕೆ ವ್ಯಕ್ತ ಮಾಡಲಾಗುತ್ತಿತ್ತು.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 62 ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಪ್ರತಿಕ್ರಿಯೆಗಳನ್ನು ಸಹಿತ ಕಾಮೆಂಟ್ ಮೂಲಕ ತಿಳಿಸಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗನೊಬ್ಬ ‘ಪಾಪ ಈ ಬಡಪಾಯಿ ಹುಡುಗಿಗೆ ತುಂಬಾ ಅವಮಾನವಾಯಿತು’ ಎಂದಿದ್ದಾನೆ. ‘ಇನ್ನೊಬ್ಬ ನಾನಲ್ಲಿ ಒಂದು ವೇಳೆ ಇದ್ದಿದ್ದರೆ ವರನ ಮುಖಕ್ಕೆ ಚೆನ್ನಾಗಿ ಬಾರಿಸುತ್ತಿದ್ದೆ’ ಎಂದಿದ್ದಾನೆ.

Leave a Comment

Your email address will not be published. Required fields are marked *