ಮೀನಿಗೆ ಆಸೆ ತೋರಿಸಿ, ತನ್ನ ಬಲೆಗೆ ಬೀಳಿಸಿಕೊಂಡ ಹಕ್ಕಿ: ಕೊನೆಗೂ ಪಕ್ಷಿಗಳು ಮನುಷ್ಯನಿಂತ ಇಂತ ಬುದ್ದಿ ಕಲಿಯಿತು ಎಂದ ಜನ!
ಆಸೆ ಎನ್ನುವುದು ಮನುಷ್ಯನಲ್ಲಿ ಸಾಮಾನ್ಯವಾಗಿ ಇರುವಾಮತಹ ಒಂದು ಗುಣವಾಗಿದೆ. ಆದರೆ ಇದೇ ಆಸೆಯು ಕೆಲವೊಮ್ಮೆ ದುರಾಸೆಯಾಗಿ ಬದಲಾಗುತ್ತದೆ. ಇಂತಹ ದುರಾಸೆಯು ನಮ್ಮ ದೌರ್ಬಲ್ಯವಾದಾಗ ಅನೇಕರು ಇದನ್ನೇ ಬಳಸಿಕೊಂಡು ಜನರಿಗೆ ಮೋಸ ಮಾಡುವುದುಂಟು. ಮತ್ತೊಬ್ಬರ ದೌರ್ಬಲ್ಯವನ್ನು ಅರಿತುಕೊಂಡು ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳಲು, ಗಾಳ ಹಾಕುವ ಮೂಲಕ ತಮ್ಮ ಗುರಿ ತಲುಪಲು ಪ್ರಯತ್ನವನ್ನು ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಇಂತಹ ದುರಾಸೆಗಳಿಗೆ ಒಳಗಾಗಿ ಅನೇಕರು ಇರುವುದನ್ನೆಲ್ಲ ಕಳೆದುಕೊಂಡು, ಅನ್ಯರಿಂದ ಮೋಸ ಹೋದ ಅದೆಷ್ಟೋ ಘಟನೆಗಳ ಕುರಿತಾಗಿ ನಾವು ಮಾಧ್ಯಮಗಳ ಸುದ್ದಿಗಳಲ್ಲಿ ಕೇಳುತ್ತಲೇ ಇರುತ್ತೇವೆ. ಈ ಆಸೆ ಅಥವಾ ದುರಾಸೆ ಎನ್ನುವುದು ಮನುಷ್ಯರಲ್ಲಿ ಮಾತ್ರವೇ ಎಂದುಕೊಂಡರೆ ಖಂಡಿತ ಅದು ಸುಳ್ಳಾಗುತ್ತದೆ.
ಏಕೆಂದರೆ ಪ್ರಾಣಿ ಪಕ್ಷಿಗಳು ಕೂಡ ಅನ್ಯ ಜೀವಿಗಳ ಆಸೆ, ದುರಾಸೆ ಏನೆಂಬುದನ್ನು ಅರಿತುಕೊಂಡು ಅದರ ಪ್ರಕಾರ ತಮ್ಮ ಕೆಲಸವನ್ನು ಸಾಧಿಸಿಕೊಳ್ಳಲು ಪ್ರಯತ್ನಪಡುತ್ತೇವೆ ಎಂದರೆ ನೀವು ನಂಬುವಿರಾ?? ಇಲ್ಲ ಅಲ್ಲವೇ?? ಒಂದು ಕ್ಷಣ ಇದು ಅಸಾಧ್ಯ ಎಂದು ನಿಮಗೆ ಅನಿಸಬಹುದು. ಆದರೆ ಇಂತಹುದೊಂದು ಅಸಾಧ್ಯವೂ ಕೂಡ ಸಾಧ್ಯ ಎಂದು ತೋರಿಸುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿ ಪಕ್ಷಿಯೊಂದು ಹೇಗೆ ಮೀನಿನ ಆಸೆಯನ್ನು ಅರಿತು ಅದನ್ನು ಹಿಡಿಯಲು ಪ್ರಯತ್ನ ಮಾಡಿದೆ ಎಂದು ನೀಡಿದಾಗ ಆಶ್ಚರ್ಯ ಆಗದೇ ಇರದು.
ವೀಡಿಯೋದಲ್ಲಿನ ದೃಶ್ಯವನ್ನು ಗಮನಿಸಿದಾಗ ಪಕ್ಷಿಯೊಂದು ಮೀನನ್ನು ಹಿಡಿಯಲು ನದಿಯೊಂದರ ಹತ್ತಿರಕ್ಕೆ ತನ್ನದೇ ಆದ ಒಂದು ಯೋಜನೆಯನ್ನು ಸಿದ್ಧಪಡಿಸಿಕೊಂಡು ಬಂದಿದೆ. ಹಕ್ಕಿಯು ತನ್ನ ಬಾಯಲ್ಲಿ ಯಾವುದೋ ಒಂದು ಸತ್ತ ಹುಳುವನ್ನು ಕಚ್ಚಿಕೊಂಡು ನೀರಿನ ಬಳಿ ಬಂದಿದೆ. ಅನಂತರ ಅದನ್ನು ನೀರಿನಲ್ಲಿ ಹಾಕುತ್ತದೆ. ಇಲ್ಲಿ ಹಕ್ಕಿಯ ಉಪಾಯ ಏನೆಂದರೆ ಆ ಹುಳುವನ್ನು ತಿನ್ನಲು ಬರುವ ಮೀನನ್ನು ಬಹಳ ಚಾಕಚಕ್ಯತೆಯಿಂದ ಹಿಡಿಯುವುದೇ ಆಗಿದೆ. ಮೀನು ಹಿಡಿಯುವವರು ಮೀನಿಗಾಗಿ ಗಾಳ ಹಾಕುವಂತೆ, ಈ ಪಕ್ಷಿ ಗಾಳದ ಬದಲಾಗಿ ಹುಳುವನ್ನು ಹಾಕಿ ಮೀನಿಗೆ ಆಸೆಯನ್ನು ತೋರಿಸಲು ಪ್ರಯತ್ನ ಮಾಡಿದೆ. ಈ ಬುದ್ಧಿವಂತಿಕೆಯನ್ನು ನೋಡಿದಾಗ ಒಂದು ಕ್ಷಣ ನಮಗೆ ಅತ್ಯಾಶ್ಚರ್ಯ ಉಂಟಾಗುತ್ತದೆ.
ಪಕ್ಷಿಗಳು ಕೂಡ ಈ ರೀತಿಯ ಆಲೋಚನೆಯನ್ನು ಮಾಡುತ್ತವೆಯೆಂದು ನಂಬಲು ಅಸಾಧ್ಯ ಎನಿಸಿಬಿಡುತ್ತದೆ. ಆದರೆ ವಿಡಿಯೋ ಅದು ನಿಜ ಎಂಬುದನ್ನು ತೋರಿಸುತ್ತದೆ. ಇನ್ನು ಈ ಹಕ್ಕಿಯ ಬುದ್ಧಿವಂತಿಕೆಯ ಪ್ರಯತ್ನಕ್ಕೆ ಫಲ ಸಿಕ್ಕಿತೇ?? ಎನ್ನುವುದಾದರೆ, ಖಂಡಿತ ಸಿಕ್ಕಿದೆ. ಒಂದೆರಡು ಬಾರಿ ಮೀನು ತಪ್ಪಿಸಿಕೊಂಡಿದೆಯಾದರೂ, ಕೊನೆಗೊಮ್ಮೆ ಮೀನು ಹಕ್ಕಿಯ ಬಲೆಗೆ ಬಿದ್ದಿದೆ. ಹಕ್ಕಿಯು ನೀರಿನ ಮೇಲೆ ಹಾಕಿದಂತಹ ಹುಳುವನ್ನು ತಿನ್ನಲು ಬಂದ ಮೀನನ್ನು, ಕೂಡಲೇ ತನ್ನ ಕೊಕ್ಕಿನಿಂದ ಗಟ್ಟಿಯಾಗಿ ಕಚ್ಚಿಕೊಂಡು ನೀರಿನಿಂದ ದೂರ ಓಡಿ ಬಂದು ನೆಲದ ಮೇಲೆ ಮೀನನ್ನು ಹಾಕಿ ತನ್ನ ಕೊಕ್ಕಿನಿಂದ ಕುಕ್ಕಿ ಕೊಂದಿದೆ. ಅಲ್ಲಿಗೆ ಹಕ್ಕಿಯ ಚಾಣಾಕ್ಷತನಕ್ಕೆ, ಅದು ಮಾಡಿದ ಉಪಾಯಕ್ಕೆ ಅದಕ್ಕೆ ಅಗತ್ಯವಿದ್ದ ಬೇಟೆಯು ಸಿಕ್ಕಂತಾಗಿದೆ.
ವಿಡಿಯೋ ಹಂಚಿಕೊಂಡಿರುವವರು ಒಂದೆರಡು ಸಾಲುಗಳನ್ನು ಬರೆದುಕೊಂಡಿದ್ದು, “ಹೇಳಲು ಇದು ಹಕ್ಕಿ, ಆದರೆ ಮೀನುಗಳಿಗೆ ಆಸೆಯನ್ನು ತೋರಿಸಿ ಅವುಗಳನ್ನು ತನ್ನ ಬಲೆ ಒಳಗೆ ಬೀಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ, ಪಕ್ಷಿಗಳು ಸಹಾ ಮನುಷ್ಯನಿಂದ ಇಂತಹ ಬುದ್ಧಿಯನ್ನು ಕಲಿತು ಬಿಟ್ಟಿದೆ” ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಒಂಬತ್ತು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಐದು ಸಾವಿರಕ್ಕಿಂತ ಅಧಿಕ ಮಂದಿ ಶೇರ್ ಗಳನ್ನು ಮಾಡಿಕೊಂಡಿದ್ದಾರೆ. ನೂರಾರು ಜನ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ವಿಡಿಯೋ ನೋಡಿ
ಪ್ರತಿಕ್ರಿಯೆ ನೀಡಿದರು ನೆಟ್ಟಿಗರೊಬ್ಬರು, ” ಪ್ರಕೃತಿ ಸದಾ ಸುಂದರ, ಇಲ್ಲಿ ಮನುಷ್ಯ ಪ್ರಾಣಿ ಪಕ್ಷಿಗಳನ್ನು ನೋಡಿ ಕಲಿತಿದ್ದಾನೆಯೇ ಹೊರತು ಅವು ನಮ್ಮನ್ನು ನೋಡಿ ಕಲಿತಿಲ್ಲ” ಎಂದಿದ್ದಾರೆ. “ನಿನ್ನನ್ನು ಹೀಗೆ ಬಿಟ್ಟರೆ ಪಕ್ಷಿಗಳು ಹಾರುವುದನ್ನು ಕೂಡಾ ಮನುಷ್ಯನಿಂದ ಕಲಿತಿವೆ ಎಂದು ಹೇಳಿ ಬಿಡುವೆ” ಎಂದು ವೀಡಿಯೋ ಶೇರ್ ಮಾಡಿರುವ ವ್ಯಕ್ತಿಯನ್ನು ಕುರಿತು ಟೀಕೆ ಮಾಡಿದ್ದಾರೆ ಮತ್ತೊಬ್ಬರು. ಇನ್ನು ಕೆಲವರು, ಎಷ್ಟೇ ಆಗಲಿ ಮನುಷ್ಯನ ಜಗತ್ತಿನಲ್ಲಿರುವ ಜೀವಿಗಳೇ ಅಲ್ಲವೇ ಅವುಗಳಿಗೂ ಅಂತಹ ಬುದ್ದಿ ಬಂದಿದೆ ಎಂದಿದ್ದಾರೆ.