Articles

VIDEO : ಎಟಿಎಮ್ ನಲ್ಲಿ ಇಟ್ಟಿದ್ದ ಸ್ಯಾನಿಟೈಸರ್ ಬಾಟಲ್ ಕದ್ದ ಭೂಪ : ನಾವ್ ಸುಧಾರಿಸಲ್ಲ ಎಂದ ಐಪಿಎಸ್ ಅಧಿಕಾರಿ!

ಕಳೆದೊಂದು ವರ್ಷದಿಂದ ಪ್ರಪಂಚದಾದ್ಯಂತ ಎಲ್ಲರೂ ಅತಿ ಹೆಚ್ಚು ಬಳಸಿರುವುದು ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ವಾಷ್ ಇತ್ಯಾದಿಗಳನ್ನು. ಸಾಮಾನ್ಯವಾಗಿ ಇಂದು ಎಲ್ಲರ ಮನೆಯಲ್ಲೂ ಸ್ಯಾನಿಟೈಸರ್ ಇದ್ದಾವೆ, ಗಂಡಸರ ಜೇಬಲ್ಲೂ, ಹೆಂಗಸರ ವ್ಯಾನಿಟಿ ಬ್ಯಾಗ್ ನಲ್ಲೂ ಕೂಡ ಸ್ಯಾನಿಟೈಸರ್ ಸ್ಥಾನ ಪಡೆದಿವೆ. ತಮ್ಮ ಹಾಗೂ ತಮ್ಮವರ ಆರೋಗ್ಯದ ಕಾಳಜಿಯಿಂದ ಎಲ್ಲರಿಗೂ ಇವುಗಳನ್ನು ಖರಿದಿಸಿ ಬಳಸುವುದು ಅನಿವಾರ್ಯವಾಗಿತ್ತು. ಆದರೆ ಇಲ್ಲೊಬ್ಬ ಎಟಿಎಮ್ ನಲ್ಲಿ ಇಟ್ಟಿದ್ದ ಸ್ಯಾನಿಟೈಸರ್ ಕದ್ದು ಸುದ್ದಿಯಾಗಿದ್ದಾನೆ.

ಈ ದೃಶ್ಯ ಕೇರಳದ ಕೋಜಿಕ್ಕೋಡು ಎಂಬ ಊರಿನದು. ಎಟಿಎಂ‌ ಒಳಗೆ ಬರುವ ವ್ಯಕ್ತಿಯೊಬ್ಬ ಮೊದಲು ಅಲ್ಲಿ ಇಟ್ಟಿದ್ದ ಸ್ಯಾನಿಟೈಸರ್ ಸವರಿಕೊಳ್ಳುತ್ತಾನೆ. ಚೆನ್ನಾಗಿದೆ ಅನಿಸ್ತೊ ಏನೊ ಮತ್ತೊಮ್ಮೆ ಅದರ ಕಡೆ ತಿರುಗಿ ನೋಡುತ್ತಾನೆ. ನಂತರ ಸಿಸಿ ಕ್ಯಾಮೆರಾ ಇದ್ದಾವಾ ಅಂತ ಎದುರಿಗೆ ಪರಿಶೀಲಿಸುತ್ತಾನೆ.

ನಂತರ ಸುಮ್ಮನೇ ದುಡ್ಡು ತಗೆದುಕೊಂಡು ಪರ್ಸಲ್ಲಿಟ್ಟುಕೊಂಡು ಮತ್ತೊಮ್ಮೆ ಸ್ಯಾನಿಟೈಸರ್ ಕಡೆ ನೋಡುತ್ತಾನೆ! ಅದ್ಯಾಕೊ ಅದು ಆತನಿಗೆ ಬಹಳ ಇಷ್ಟವಾಗಿಬಿಟ್ಟಿದೆ! ಲಾಸ್ಟ್ ಮೂಮೆಂಟಲ್ಲಿ ಪಟ್ ಅಂತ ಸ್ಯಾನಿಟೈಸರ್ ಬಾಟಲ್ ತಗೆದು ಬ್ಯಾಗ್ ಗೆ ಹಾಕಿಕೊಂಡು ಹೊರಹೋಗುತ್ತಾನೆ!

ಈ ವಿಡಿಯೊವನ್ನು ಐಪಿಎಸ್ ಆಫೀಸರ್ ದೀಪಾಂಶು ಕಾಬರಾ ತಮ್ಮ ಟ್ವಿಟರ್ ಖಾತೆ ಮೂಲಕ ವೈರಲ್ ಮಾಡಿದ್ದಾರೆ. ವಿಡಿಯೊ ಜೊತೆಗೆ ಅವರು ಹೀಗೆ ಬರೆದಿದ್ದಾರೆ : “ದೇಶದಲ್ಲಿ ಲಕ್ಷಾಂತರ ಎಟಿಎಮ್ ಗಳಿವೆ, ಎಲ್ಲ ಕಡೆ ಜನ ಹೀಗೇ ಮಾಡತೊಡಗಿದರೆ ಬ್ಯಾಂಕ್ ನವರು ಬಾಟಲ್ ಭದ್ರವಾಗಿಡಲು 200-300 ರುಪಾಯಿಯ ಬಾಕ್ಸ್ ಮಾಡಿಸಬೇಕಾಗುತ್ತದೆ.”

“ಇದರಿಂದ ಇಡೀ ದೇಶದಲ್ಲಿ ಬ್ಯಾಂಕ್ ಗಳು ಇದಕ್ಕಾಗಿಯೇ ನೂರಾರು ಕೋಟಿ ಖರ್ಚು ಮಾಡಬೇಕಾಗಬಹುದು. ಸ್ವಲ್ಪ ಸಂಸ್ಕಾರದಿಂದ ಬದುಕಿ, ದುಡ್ಡೂ ಉಳಿಯುತ್ತದೆ ಜೊತೆಗೆ ನಿಮಗೂ ಒಳ್ಳೆಯದಾಗುತ್ತದೆ.” ಎಂದು ಹೇಳಿ ಕೊನೆಗೆ ನಾವ್ ಸುಧಾರಿಸಲ್ಲ ಬಿಡಿ ಎಂದಿದ್ದಾರೆ. ಸದರಿ ವಿಡಿಯೊ ನಿನ್ನೆ ಭರ್ಜರಿ ವೈರಲ್ ಆಗಿದ್ದು ಸುಶಿಕ್ಷಿತನಂತೆ ಕಾಣುವ ಆತ ಸ್ಯಾನಿಟೈಸರ್ ಬಾಟಲ್ ಕದ್ದಿದ್ದು ದೇಶಾದ್ಯಂತ ಸುದ್ದಿಯಾಯಿತು. ಮರ್ಯಾದೆಯೂ ಹರಾಜಾಯಿತು.

ಆಯಪ್ಪನಿಗೆ ಪ್ರತಿ ಎಟಿಎಮ್ ನಲ್ಲಿ ಸಿಸಿ ಕ್ಯಾಮೆರಾ ಇರುತ್ತೆ ಅನ್ನೊದಾದ್ರು ಗೊತ್ತಾಗೋದು ಬೇಡ್ವಾ? 40-50 ರುಪಾಯಿ ಕೂಡ ಖರ್ಚು ಮಾಡಲಾರದೇ ಸಾರ್ವಜನಿಕರ ಉಪಯೋಗಕ್ಕೆ ಇಟ್ಟಿದ್ದನ್ನು ಎತ್ತಿಕೊಂಡು ಬರಲು ಆತನಿಗೆ ಮನಸ್ಸಾದರೂ ಹೇಗ ಬಂತೊ! ವಿಡಿಯೊ ಕೆಳಗಿದೆ ನೋಡಿ.

-TEAM INFOTREND

Leave a Comment

Your email address will not be published. Required fields are marked *